Connect with us

International

159 ಗಂಟೆ ಓವರ್‍ಟೈಮ್ ಕೆಲಸ ಮಾಡಿ ಮಹಿಳೆ ಸಾವು!

Published

on

Share this

ಟೋಕಿಯೋ: ಓವರ್ ಟೈಮ್ ಕೆಲಸ ಮಾಡಿ ಜಪಾನ್‍ನ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

ಇಲ್ಲಿನ ಎನ್‍ಹೆಚ್‍ಕೆ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆ ಮಿವಾ ಸಾದೋ ಓವರ್‍ಟೈಮ್ ಕೆಲಸ ಮಾಡಿ ಸಾವನ್ನಪ್ಪಿದರೆಂದು ಗುರುವಾರದಂದು ಜಪಾನ್‍ನ ಲೇಬರ್ ಇನ್ಸ್ ಪೆಕ್ಟರ್‍ಗಳು ಹೇಳಿದ್ದಾರೆ.

ಮಿವಾ ಸಾದೋ ಟೋಕಿಯೋದಲ್ಲಿನ ಮುಖ್ಯಕಚೇರಿಯಲ್ಲಿ ಕೆಲಸ ಮಾಡ್ತಿದ್ರು. 159 ಗಂಟೆಗಳ ಕಾಲ ಅತಿಯಾದ ಕೆಲಸ ಮಾಡಿದ್ದು, ತಿಂಗಳಿನಲ್ಲಿ ಕೇವಲ ಎರಡು ದಿನ ರಜೆ ತೆಗೆದುಕೊಂಡಿದ್ದರು. ಇದರಿಂದಾಗಿ ಹೃದಯ ವೈಫಲ್ಯವಾಗಿ 2013ರ ಜುಲೈನಲ್ಲಿ ಸಾವನ್ನಪ್ಪಿದ್ರು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಆಕೆಗೆ ಉದ್ಯೋಗ ನೀಡಿದ ವಕ್ತಿ ಈ ವಾರ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಸಾವಿಗೆ ಮೂರು ದಿನಗಳ ಮುನ್ನ ಮಿವಾ ಸಾದೋ ಇಲ್ಲಿನ ಸ್ಥಳೀಯ ಚುನಾವಣೆ ಬಗ್ಗೆ ವರದಿ ಮಾಡಿದ್ದರು ಎಂದು ತಿಳಿಸಿದ್ದಾರೆ.

ಟೋಕಿಯೋದ ಲೇಬರ್ ಸ್ಟಾಂಡರ್ಡ್ಸ್ ಕಚೇರಿ ಆಕೆ ‘ಕರೋಶಿ’ ಯಿಂದ ಮೃತಪಟ್ಟಿದ್ದಾಳೆ ಎಂದು ಹೇಳಿದೆ.

ಕರೋಶಿ ಅಂದ್ರೇನು?: ಅತಿಯಾದ ಕೆಲಸದಿಂದ ಸಾವನ್ನಪ್ಪೋದಕ್ಕೆ ಕರೋಶಿ ಅಂತಾರೆ. ಹೃದಯಾಘಾತ, ಸ್ಟ್ರೋಕ್, ಹಸಿವು- ಹೀಗೆ ಹಲವಾರು ವೈದ್ಯಕೀಯ ಕಾರಣಗಳಿಂದ ಕರೋಶಿ ಸಾವು ಸಂಭವಿಸಬಹುದು.

2015ರಲ್ಲಿ ಜಾಹಿರಾತು ಸಂಸ್ಥೆಯೊಂದರಲ್ಲಿ ತಿಂಗಳಿಗೆ 100 ಗಂಟೆಗಳ ಕಾಲ ಓವರ್‍ಟೈಮ್ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಾದ ದೇಶದಾದ್ಯಂತ ಈ ಬಗ್ಗೆ ಚರ್ಚೆಯಾಗಿತ್ತು. ಜಪಾನ್‍ನ ಉದ್ಯೋಗ ಸಂಸ್ಕೃತಿ ಬದಲಾಗಬೇಕು ಎಂಬ ಕೂಗು ಕೇಳಿಬಂದಿತ್ತು.

ರಾಷ್ಟ್ರೀಯ ಸರ್ವೆಯೊಂದರ ಪ್ರಕಾರ, ಜಪಾನ್‍ನ ಐದರಲ್ಲಿ ಒಂದು ಭಾಗದಷ್ಟು ಉದ್ಯೋಗಿಗಳು ಕರೋಶಿ ಭೀತಿಯಲ್ಲಿದ್ದಾರೆ. ಯಾಕಂದ್ರೆ ಅವರೆಲ್ಲಾ ಪ್ರತಿ ತಿಂಗಳು 80 ಗಂಟೆಗಳಿಗೂ ಹೆಚ್ಚು ಓವರ್‍ಟೈಮ್ ಕೆಲಸ ಮಾಡ್ತಿದ್ದಾರೆ ಎಂದು ವರದಿಯಾಗಿದೆ.

ಸುಮಾರು 2 ಸಾವಿರ ಮಂದಿ ಉದ್ಯೋಗ ಸಂಬಂಧಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಜಪಾನ್ ಸರ್ಕಾರ ಇತ್ತೀಚೆಗೆ ಈ ಬಗ್ಗೆ ಕ್ರಮಗಳನ್ನ ಕೈಗೊಂಡಿದೆ. ಪ್ರತಿ ತಿಂಗಳ ಕೊನೆ ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಕೆಲಸದಿಂದ ಹೊರಡುವಂತೆ ಹೇಳಿದೆ. ಅಲ್ಲದೆ ಮೇ ತಿಂಗಳಲ್ಲಿ ಕಾರ್ಮಿಕ ನೀತಿಯನ್ನು ಉಲ್ಲಂಘಿಸಿದ 300 ಸಂಸ್ಥೆಗಳಿಗೆ ಛೀಮಾರಿ ಹಾಕಿತ್ತು.

Click to comment

Leave a Reply

Your email address will not be published. Required fields are marked *

Advertisement