ನವದೆಹಲಿ: ಜಪಾನ್ (Japan) ಪ್ರವಾಸಿ ಮಹಿಳೆಯೊಬ್ಬರಿಗೆ ಹೋಳಿ (Holi) ಆಚರಣೆ ವೇಳೆ ಕಿರುಕುಳ ನೀಡಿದ ಆರೋಪದ ಮೇಲೆ ಮೂರು ಜನರನ್ನು ಬಂಧಿಸಲಾಗಿದೆ ಎಂದು ದೆಹಲಿ (Delhi) ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಪಹರ್‌ಗಂಜ್‌ನಲ್ಲಿ (Paharganj) ತಂಗಿದ್ದ ಮಹಿಳೆಗೆ, ಅದೇ ಊರಿನ ಮೂವರು ಕಿರುಕುಳ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
Advertisement
Advertisement
ಮಹಿಳೆಯನ್ನು ಎಳೆದಾಡಿ `ಹೋಳಿ ಹೈ’ ಎಂಬ ಘೋಷಣೆ ಕೂಗಿ ಮೈಗೆ ಬಣ್ಣ ಬಳಿದಿದ್ದಾರೆ. ಒಬ್ಬ ಆಕೆಯ ತಲೆಯ ಮೇಲೆ ಮೊಟ್ಟೆ ಒಡೆದಿದ್ದಾನೆ. ಕೊನೆಯಲ್ಲಿ ಒಬ್ಬನಿಗೆ ಕೆನ್ನೆಗೆ ಆಕೆ ಬಾರಿಸಿದ್ದು ವೀಡಿಯೋದಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಬಾಲಕಿಯನ್ನು ರೇಪ್ ಮಾಡಿ ಪೊದೆಗೆ ಎಸೆದ ಕುಡುಕ!
Advertisement
ವೀಡಿಯೋ ವೈರಲ್ ಆಗುತ್ತಿದ್ದಂತೆ ಕಿರುಕುಳ ನೀಡಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆಯೇ ಯುವತಿ ಬಾಂಗ್ಲಾದೇಶಕ್ಕೆ ( Bangladesh) ತೆರಳಿದ್ದಾಳೆ. ಟ್ವಿಟ್ಟರ್‌ನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದೇನೆ ಎಂದು ಬರೆದುಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಸ್ಥಳೀಯ ಗುಪ್ತಚರ (Intelligence) ಅಧಿಕಾರಿಗಳು ಆರೋಪಿಗಳನ್ನು ಗುರುತಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜಪಾನ್ ರಾಯಭಾರಿ ಕಚೇರಿಯೊಂದಿಗೆ ಈ ಬಗ್ಗೆ ಮಾತಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಹೆಸರಿನಲ್ಲಿ ನಟಿಯ ತಾಯಿ ಬಳಿ ಹಣ ಪೀಕಿದ ವ್ಯಕ್ತಿ