ಟೋಕಿಯೋ: ಹುಡುಗಿಯರಿಗೆ ಹೆಚ್ಚು ಸುಲಭ ಹಾಗೂ ಆರಾಮ ಎನಿಸುವ ಕೇಶವಿನ್ಯಾಸವೆಂದರೆ ಪೋನಿಟೇಲ್. ನೀಳವಾದ ಕೂದಲಿದ್ದೂ ಪೋನಿಟೇಲ್ ಹಾಕದಿರುವ ಮಹಿಳೆ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ ಜಪಾನ್ ದೇಶದ ಶಾಲೆಗಳಲ್ಲಿ ಪೋನಿಟೇಲ್ ಹೇರ್ ಸ್ಟೈಅನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ಕಾರಣ ಇಲ್ಲಿದೆ.
ಮಹಿಳೆಯರ ಕತ್ತಿನ ಭಾಗ ಪುರುಷರಿಗೆ ಹೆಚ್ಚಿನ ಲೈಂಗಿಕ ಪ್ರಚೋದನೆ ನೀಡುತ್ತದೆ. ಮಹಿಳೆಯರು ಪೋನಿಟೇಲ್ ಹಾಕಿಕೊಂಡಲ್ಲಿ ಕತ್ತು ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತದೆ ಎಂಬ ಕಾರಣಕ್ಕೆ ಜಪಾನ್‌ನ ಶಾಲೆಗಳಲ್ಲಿ ಮಕ್ಕಳು ಪೋನಿಟೇಲ್ ಹೇರ್ ಸ್ಟೈಲ್ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಭಾರತದ ರಫೇಲ್ ಯುದ್ಧ ವಿಮಾನ ಎದುರಿಸಲು ಚೀನಾದ ಜೆ-10ಸಿ ಫೈಟರ್ ಜೆಟ್ ಖರೀದಿಸಿದ ಪಾಕಿಸ್ತಾನ
Advertisement
Advertisement
ಜಪಾನ್ ಕೇವಲ ಕೇಶವಿನ್ಯಾಸದ ಬಗ್ಗೆ ನಿರ್ಬಂಧ ಹೇರಿರದೇ ಹುಡುಗಿಯರ ಒಳ ಉಡುಪುಗಳ ಬಗ್ಗೆಯೂ ನಿರ್ಬಂಧ ಹೇರಿದೆ. ಶಾಲೆಗೆ ಹೋಗುವ ಹುಡುಗಿಯರು ಕೇವಲ ಬಿಳಿ ಬಣ್ಣದ ಒಳ ಉಡುಪುಗಳನ್ನು ಮಾತ್ರವೇ ಧರಿಸುವಂತೆ ತಿಳಿಸಿದೆ. ಇದನ್ನೂ ಓದಿ: ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ
Advertisement
ಈ ಹಿಂದೆ ಜಪಾನ್‌ನ ಪುಕುವೋಕಾ ಪ್ರದೇಶದಲ್ಲಿ ಒಂದು ಸಮೀಕ್ಷೆ ನಡೆಸಲಾಗಿತ್ತು. ಹುಡುಗಿಯರ ಕತ್ತು ಹುಡುಗರಿಗೆ ಹೆಚ್ಚು ಲೈಂಗಿಕ ಪ್ರಚೋದನೆ ನೀಡುತ್ತದೆ ಎಂಬ ವಿಚಾರ ಸಮೀಕ್ಷೆಯ ಮುಖಾಂತರ ಕಂಡುಕೊಳ್ಳಲಾಗಿತ್ತು. ಬಳಿಕ ಅಲ್ಲಿನ ಕೆಲವು ಶಾಲೆಗಳಲ್ಲಿ ಪೋನಿಟೇಲ್ ಅನ್ನು ನಿರ್ಬಂಧಿಸಲಾಗಿತ್ತು. ಅದರೊಂದಿಗೆ ಲಂಗದ ಉದ್ದ, ಸಾಕ್ಸ್ಗಳ ಬಗ್ಗೆಯೂ ನಿಯಮಗಳನ್ನು ಮಾಡಲಾಗಿತ್ತು.