ಟೋಕಿಯೊ: ಒಂದು ದೇಶ ಅಭಿವೃದ್ಧಿ ಹೊಂದಿರಲಿ, ಹೊಂದದಿರಲಿ, ಪ್ರವಾಹ ಮಾತ್ರ ಯಾವುದೇ ರಿಯಾಯಿತಿ ತೋರಿಸುವುದಿಲ್ಲ. ಒಮ್ಮೆಲೆ ಅಬ್ಬರಿಸಿದರೆ ನೂರಾರು ಜೀವಗಳು ಬಲಿಯಾಗುತ್ತವೆ. ಸಾವಿರಾರು ಮನೆಗಳನ್ನು ಆಹುತಿ ಪಡೆಯುತ್ತದೆ. ವಿಶ್ವದಲ್ಲೇ ಅತಿಹೆಚ್ಚು ಬಾರಿ ಪ್ರವಾಹಕ್ಕೆ ತುತ್ತಾಗಿರುವ ದೇಶ ಜಪಾನ್ ಆಗಿದೆ.
Japanese Company Invents Flood-Proof Floating Houses #Mundo #Nature #LoveEarth #ClimateChange [Video]: Japanese housing developer Ichijo Komuten recently unveiled a "flood-resistant house" that can not only remain waterproof during floods, but also float… https://t.co/j1AxKu043d pic.twitter.com/lEXljWDbTp
— LeeTyler (@LeeTyler) June 24, 2022
Advertisement
ಜಪಾನ್ ಎಷ್ಟು ಬಾರಿ ಪ್ರವಾಹಕ್ಕೆ ತುತ್ತಾದರೂ ಮತ್ತೆ – ಮತ್ತೆ ಪುಟಿದು ನಿಲ್ಲುತ್ತದೆ. ಇದೀಗ ಪ್ರವಾಹದೊಂದಿಗೇ ಬದುಕಲು ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗುವವರಿಗಾಗಿಯೇ ಜಪಾನಿನ ಇಚಿಜೋ ಕೊಮುಟೆನ್ ಹೌಸ್ ಡೆವಲಪರ್ ಕಂಪೆನಿ ತೇಲುವ ಮನೆಯನ್ನು ನಿರ್ಮಿಸಿದೆ. ಇದನ್ನೂ ಓದಿ: ಅಪಾಯವನ್ನು ಲೆಕ್ಕಿಸದೇ ಡೇಂಜರ್ ಟ್ರಾಕ್ಟರ್ ಗೇಮ್
Advertisement
ಹೌದು.. ಜಪಾನ್ ಕಂಪನಿ ಅಭಿವೃದ್ಧಿಪಡಿಸಿರುವ ಈ ಮನೆ ಪ್ರವಾಹ ಬಂದಾಗ ತೇಲಲು ಆರಂಭಿಸುತ್ತದೆ. ನೀರಿನ ಮಟ್ಟ ಕರಗಿದಾಗ ಮತ್ತೆ ನೆಲಕ್ಕೆ ಬಂದು ನಿಲ್ಲುತ್ತದೆ. ಇದನ್ನು ಒಂದು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕವೂ ಕಂಪನಿ ತೋರಿಸಿದ್ದು, ಜನರನ್ನು ಅಚ್ಚರಿಗೊಳಿಸಿದೆ. ಇದನ್ನೂ ಓದಿ: ಪತಿಯೊಂದಿಗೆ ವಾಸಿಸಲು 30 ಬಾರಿ ಅವಳಿ ಸಹೋದರಿಯ ಪಾಸ್‍ಪೋರ್ಟ್ ಬಳಕೆ
Advertisement
Advertisement
ಹೇಗೆ ಇರಲಿದೆ?
ನೀರು ನುಗ್ಗಲು ಶುರುವಾದ ಕೂಡಲೇ ನಿಧಾನವಾಗಿ ಮನೆ ಭೂಸ್ಪರ್ಶದಿಂದ ಮೇಲೆ ಬರಲು ಪ್ರಾರಂಭಿಸುತ್ತದೆ. ಗರಿಷ್ಠ 5 ಮೀಟರ್ ವರೆಗೆ ಮಲೆ ಮೇಲೆದ್ದು ತೇಲುತ್ತದೆ. ಮನೆಯ ಸುತ್ತ ಬಲವಾದ ಕಬ್ಬಿಣದ ಸಲಾಕೆಯಂತಿರುವ ಕಂಬಗಳನ್ನು ಹೊಂದಿರುತ್ತದೆ. ಅವು ಪಿಲ್ಲರ್‌ಗಳಂತೆ ಮನೆಗಳಿಗೆ ಭದ್ರತೆ ಒದಗಿಸುತ್ತವೆ. ಜೊತೆಗೆ ಈ ಕಂಬಗಳಿಗೆ ಬಲವಾದ ವೈರ್‌ಗಳನ್ನು ಬಿಗಿದು ಮನೆಗೆ ಕಟ್ಟಲಾಗಿರುತ್ತದೆ. ಪ್ರವಾಹ ಬಂದಾಗ ಮೇಲೇಳುವ ಮನೆ, ಪ್ರವಾಹ ಹೋದಾಗ ಅದೇ ಸ್ಥಳದಲ್ಲಿ ನೆಲಕ್ಕಿಳಿಯುತ್ತದೆ.