ಟೋಕಿಯೋ: ಜಪಾನ್‍ನ ಬಾರ್‍ವೊಂದು ತನ್ನ ವಿಶೇಷವಾದ ವೇಯ್ಟರ್‍ಗಳಿಂದಲೇ ಫೇಮಸ್ ಆಗಿದ್ದು ಗ್ರಾಹಕರನ್ನ ಸೆಳೆಯುತ್ತಿದೆ.
ಹೌದು. ಇಲ್ಲಿ ವೇಯ್ಟರ್ಸ್ ಆಗಿರೋದು ಯಾವುದೋ ಸುಂದರಿಯಲ್ಲ, ಮಕಾವ್ ಕೋತಿಗಳು. ಉತ್ಸುನೋಮಿಯಾದ ಕಯಬುಕಿ ಬಾರ್‍ನಲ್ಲಿ 17 ವರ್ಷದ ಫುಕು ಚಾನ್ ಎಂಬ ಹೆಸರಿನ ಕೋತಿ ಗ್ರಾಹಕರಿಗೆ ಪಾನೀಯ ಹಾಗೂ ನ್ಯಾಪ್‍ಕಿನ್ ತಂದುಕೊಡುವುದನ್ನ ವಿಡಿಯೋದಲ್ಲಿ ಕಾಣಬಹುದು.
Advertisement
Advertisement
ಹಲವು ವರ್ಷಗಳ ಹಿಂದೆ ನನ್ನ ಗೆಳೆಯರೊಬ್ಬರು ಯಚ್ಚನ್ ಎಂಬ ಹೆಸರಿನ ಸಾಕು ಕೋತಿಯೊಂದನ್ನ ನೀಡಿದ್ರು. ನಾನು ಅದನ್ನ ಕೆಲಸಕ್ಕೆ ಕರೆದುಕೊಂಡು ಬರ್ತಿದ್ದೆ. ಒಂದು ದಿನ ಯಚ್ಚನ್ ನನಗೆ ನ್ಯಾಪ್‍ಕಿನ್ ಎತ್ತಿಕೊಡ್ತು. ಅದನ್ನ ನಾನು ಕೆಲವು ಗ್ರಾಹಕರೊಂದಿಗೂ ಮುಂದುವರೆಸಿದೆ ಎಂದು ಬಾರ್‍ನ ಮಾಲೀಕ ಕವೋರು ಒಟ್ಸುಕಾ ಹೇಳಿದ್ದಾರೆ.
Advertisement
Advertisement
ಫುಕು ಚಾನ್ ಚಿಕ್ಕಂದಿನಿಂದಲೂ ಯಚ್ಚನ್‍ನನ್ನು ಅನುಕರಿಸುತ್ತಿತ್ತು. ಹೀಗಾಗಿ ಈಗ ಎರಡು ವೇಯ್ಟರ್ಸ್‍ಗಳಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ ಮಾಲೀಕನ ಬಳಿ ಹಲವು ಮರಿ ಕೋತಿಗಳಿದ್ದು, ಅವು ಗ್ರಾಹಕರೊಂದಿಗೆ ಫೋಟೋಗೆ ಪೋಸ್ ಕೊಡುತ್ತವೆ. ಆದ್ರೆ ಅವಕ್ಕೆ ಇನ್ನೂ ಸರ್ವಿಂಗ್ ಮಾಡೋ ತರಬೇತಿ ನೀಡಿಲ್ಲ. ಗ್ರಾಹಕರು ಈ ಕೋತಿಗಳಿಗೆ ತಿಂಡಿ ಕೊಟ್ಟು ಜೊತೆಯಲ್ಲಿ ಫೋಟೋ ತೆಗೆಸಿಕೊಳ್ತಾರೆ ಅಂತಾರೆ ಮಾಲೀಕ.
ಈ ಕೋತಿಗಳು ನನಗೆ ಕುಟುಂಬ ಸದಸ್ಯರಿಗಿಂತಲೂ ಹೆಚ್ಚು. ಇಡೀ ದಿನ ಅವುಗಳೊಂದಿಗೆ ಇರ್ತೀನಿ. ಅವುಗಳ ಜೊತೆಯಲ್ಲೇ ಮಲಗುತ್ತೇನೆ. ಕೋತಿಗಳ ಕಾಳಜಿ ಮಾಡುತ್ತಾ ಅವುಗಳನ್ನ ದೂರ ಮಾಡಲು ಸಾಧ್ಯವಾಗಲಿಲ್ಲ. ಇವು ತುಂಬಾ ಕ್ಯೂಟ್ ಅಂತಾರೆ ಇದರ ಮಾಲೀಕ.