ಟೋಕಿಯೋ: ರಾಜಧಾನಿ ಟೋಕಿಯೋ ನಗರದಲ್ಲಿ ಜನಸಂಖ್ಯೆ (Tokyo, Population) ಒತ್ತಡವನ್ನ ಕಡಿಮೆ ಮಾಡಲು ಜಪಾನ್ ಸರ್ಕಾರ ಲಕ್ಷಗಟ್ಟಲೇ ಹಣ ನೀಡುವ ಯೋಜನೆ ಪ್ರಕಟಿಸಿದೆ.
ಟೋಕಿಯೋದಿಂದ ಯಾರು ಹೊರ ಹೋಗ್ತಾರೋ ಅಂತಹ ಕುಟುಂಬಗಳ ಪ್ರತಿಯೊಂದು ಮಗುವಿಗೆ 10 ಲಕ್ಷ ಯೆನ್ ಅಂದ್ರೆ ಅಂದಾಜು 6.26 ಲಕ್ಷ ರೂಪಾಯಿ ಹಣ ನೀಡುವುದಾಗಿ ಅಲ್ಲಿನ ಸರ್ಕಾರ (Japan Government) ಆಫರ್ ನೀಡಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್
Advertisement
Advertisement
ಕಳೆದ ವರ್ಷ ಮೊದಲಬಾರಿಗೆ ಜಪಾನ್‌ನಲ್ಲಿ (Japan) ಜನಸಂಖ್ಯಾ ಕುಸಿತ ವರದಿಯಾಗಿದ್ದು, ಕೊರೊನಾ ಕಾರಣದಿಂದಾಗಿಯೇ ಜನಸಂಖ್ಯೆ ಕುಸಿದಿರುವುದಾಗಿ ಜನಸಂಖ್ಯಾ ನೀತಿ ನಿರೂಪಕರು ಹೇಳಿದ್ದಾರೆ. ಅದರಲ್ಲೂ ದೇಶದ ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯಾ ಸಾಂದ್ರತೆ ಕಡಿಮೆಯಾಗಿದ್ದು, ಸೌಲಭ್ಯಗಳು ಉತ್ತಮವಾಗಿರುವ ನಗರ ಪ್ರದೇಶಗಳತ್ತ ಜನರು ವಲಸೆ ಹೋಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಾಕ್ ಭಯೋತ್ಪಾದನೆಯನ್ನು ಯಾಕೆ ಯುರೋಪ್ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್ ಪ್ರಶ್ನೆ
Advertisement
Advertisement
ಈ ಹಿನ್ನೆಲೆ ಗ್ರಾಮೀಣ ಭಾಗಗಳಿಗೆ ಜನರು ಹಿಂದಿರುಗಲು ಮತ್ತು ನಗರಗಳಿಂದ ವಸತಿ ಬದಲಾಯಿಸುವಂತೆ ಮಾಡಲು ಸರ್ಕಾರ, ನಗರಗಳನ್ನು ತೊರೆಯುವ ಕುಟುಂಬಕ್ಕೆ 1.87 ಲಕ್ಷ ರೂ.ಗಳ ಸಹಾಯಧನ (3 ಲಕ್ಷ ಯೆನ್) ನೀಡಲಾಗ್ತಿತ್ತು. ಆದ್ರೆ, ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಈ ಸೌಲಭ್ಯವನ್ನು ಪರಿಷ್ಕರಿಸಿದ್ದು, ರಾಜಧಾನಿ ತೊರೆಯುವ ಕುಟುಂಬಗಳ ಪ್ರತಿ ಮಗುವಿಗೆ 6.26 ಲಕ್ಷ ರೂ. ನೀಡುವುದಾಗಿ ಹೇಳಿದೆ. ಈ ವರ್ಷದ ಏಪ್ರಿಲ್‌ನಿಂದ ಈ ಯೋಜನೆ ಜಾರಿಗೆ ಬರಲಿದೆ.
ಪ್ರಸ್ತುತ ಜಪಾನ್ ಜನಸಂಖ್ಯೆ 12.57 ಕೋಟಿಯಿದ್ದು ಟೋಕಿಯೋ ನಗರದಲ್ಲೇ 1.4 ಕೋಟಿ ಜನ ವಾಸಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k