ಟೋಕಿಯೋ: ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಪ್ರತಿ ಸಿಗರೇಟು ಪ್ಯಾಕ್ ಮೇಲೂ ಬರೆದಿರುತ್ತೆ. ಆದರೂ ಜನರು ಅದನ್ನು ಸೇದುವುದನ್ನು ಬಿಡಲ್ಲ. ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಕೆಲಸಕ್ಕೂ ಧೂಮಪಾನ ಹಾನಿಕರ ಎಂದು ಸಾಫ್ಟ್‌ವೇರ್ ಕಂಪನಿಯೊಂದು ಸಿಗರೇಟ್ ಸೇದದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದೆ.
ಹೌದು ಜಪಾನ್ ಮೂಲದ ಸಾಫ್ಟ್‌ವೇರ್ ಕಂಪನಿ ಹೊಸ ಉಪಾಯ ಮಾಡಿದೆ. ಧೂಮಪಾನ ಮಾಡದ ಸಿಬ್ಬಂದಿಗೆ ವೇತನ ಸಹಿತ 6 ರಜೆಗಳನ್ನು ಹೆಚ್ಚು ತೆಗೆದುಕೊಳ್ಳುವ ಭರ್ಜರಿ ಆಫರ್ ನೀಡಿದೆ. ಧೂಮಪಾನ ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಕೆಲಸಕ್ಕೂ ಹಾನಿಕಾರಕವಾಗಿದೆ. ಅದಕ್ಕೆ ಈ ನಿರ್ಧಾರ ಮಾಡಿದ್ದೇವೆ ಎಂದು ಕಂಪನಿ ತಿಳಿಸಿದೆ.
Advertisement
Advertisement
ಕಂಪನಿಯ ಓರ್ವ ಸಿಬ್ಬಂದಿ 1 ಸಿಗರೇಟು ಸೇದಿ ರೆಸ್ಟ್ ಮಾಡಿ ಬರಲು ಕನಿಷ್ಠ ಹದಿನೈದು ನಿಮಿಷ ತೆಗೆದುಕೊಳ್ಳುತ್ತಾರೆ. ಹೀಗೆ ಕಂಪನಿಯಲ್ಲಿ ಸುಮಾರು 42 ಮಂದಿ ಇದ್ದಾರೆ. ಎಲ್ಲರೂ 15 ನಿಮಿಷ ಸಮಯ ತೆಗೆದುಕೊಂಡರೆ ಕೆಲಸಕ್ಕೆ ಅಡ್ಡಿಯಾಗುತ್ತದೆ. ಸಮಯ ಹಾಳಾಗುತ್ತದೆ. ಇದರಿಂದ ಕೆಲಸದ ವಾತಾವರಣದ ಮೇಲೂ ಪರಿಣಾಮ ಬೀರುತ್ತದೆ ಎಂದು ಮನಗಂಡ ಕಂಪನಿ ವೇತನ ಸಹಿತ ರಜೆ ಉಪಾಯವನ್ನು ಪ್ರಯೋಗಿಸಿದೆ.
Advertisement
Advertisement
ಈ ಬಗ್ಗೆ ಕಂಪನಿ ಸಿಇಒ ಮಾತನಾಡಿ, ಈ ಉಪಾಯವು ಸಿಬ್ಬಂದಿ ಧೂಮಪಾನ ಬಿಡುವುದಕ್ಕೆ ಸಹಾಯ ಮಾಡುತ್ತದೆ. ಅವರನ್ನು ಧೂಪಪಾನ ಬಿಟ್ಟು ಆರೋಗ್ಯವಾಗಿರಲು ಪ್ರೋತ್ಸಾಹಿಸುತ್ತದೆ. ಅಲ್ಲದೆ ಈಗಾಗಲೇ 42ರಲ್ಲಿ 4 ಮಂದಿ ಸಿಗರೇಟ್ ಸೇದುವುದನ್ನು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.