ಟೋಕಿಯೋ: ಕೋವಿಡ್‌ನಿಂದ ತೀವ್ರ ಆರ್ಥಿಕ ಸಂಕಷ್ಟ, ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಜಪಾನ್ ಸರ್ಕಾರ ತನ್ನ ಆದಾಯ ಹೆಚ್ಚಿಸಲು ಹೊಸ ಅಭಿಯಾನ ಆರಂಭಿಸಿದೆ. ಯುವ ವಯಸ್ಕರಿಗೆ ಹೆಚ್ಚು ಮದ್ಯಪಾನ ಮಾಡಲು ಕರೆ ಕೊಟ್ಟಿದ್ದು, “ಸೇಕ್ ವಿವಾ” ಎನ್ನುವ ಸ್ಪರ್ಧೆಯನ್ನು ಆರಂಭಿಸಿದೆ.
ರಾಷ್ಟ್ರೀಯ ತೆರಿಗೆ ಏಜೆನ್ಸಿ (NTA) “ಸೇಕ್ ವಿವಾ!” ಎಂಬ ರಾಷ್ಟ್ರೀಯ ವ್ಯಾಪಾರ ಸ್ಪರ್ಧೆಯನ್ನು ಘೋಷಿಸಿದ್ದು, ದೇಶದ ಕಿರಿಯ ಜನಸಂಖ್ಯೆಯಲ್ಲಿ ಮದ್ಯಪಾನವನ್ನು ಉತ್ತೇಜಿಸಲು ಈ ಅಭಿಯಾನ ಪ್ರೋತ್ಸಾಹಿಸುತ್ತದೆ. ಹೊಸ ವ್ಯಾಪಾರ ಕಲ್ಪನೆಗಳೊಂದಿಗೆ ಬರುವುದು, ಸೇಕ್, ಶೋಚು, ಅವಮೊರಿ, ಬಿಯರ್, ವಿಸ್ಕಿ ಮತ್ತು ವೈನ್ ನಂತಹ ಜಪಾನಿನ ಆಲ್ಕೊಹಾಲ್‌ಯುಕ್ತ ಪಾನೀಯಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಅಭಿಯಾನ ಸಹಾಯ ಮಾಡಲಿದೆ.
Advertisement
Advertisement
ಈ ಅಭಿಯಾನ ಮದ್ಯದ ಉದ್ಯಮವನ್ನು ಪುನಶ್ಚೇತನಗೊಳಿಸಲು ಮತ್ತು ಇತರೆ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡಲಿದೆ ಎಂದು ಜಪಾನಿನ ತೆರಿಗೆ ಏಜೆನ್ಸಿ ಯೋಜನೆಯನ್ನು ವಿವರಿಸಿದೆ. “ಸೇಕ್ ವಿವಾ!” ಆಲ್ಕೊಹಾಲ್‌ಯುಕ್ತ ಪಾನೀಯಗಳ ಆಕರ್ಷಣೆಯನ್ನು ಪುನರುಜ್ಜೀವನಗೊಳಿಸಲಿದ್ದು, ಅಭಿಯಾನದಲ್ಲಿ ಪಾಲ್ಗೊಳ್ಳಲು 20 ಮತ್ತು 39ರ ನಡುವಿನ ವಯಸ್ಸಿನ ಜನರನ್ನು ಆಹ್ವಾನಿಸಲಾಗುತ್ತಿದೆ. ಇದನ್ನೂ ಓದಿ: 10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್ ಆಫರ್
Advertisement
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕವಿಲ್ಲ, ಇದು ಕೃತಕ ಬುದ್ಧಿಮತ್ತೆ, ಮೆಟಾವರ್ಸ್ ಮತ್ತು ಭೌಗೋಳಿಕ ಸೂಚನೆಗಳನ್ನು (ಉತ್ಪನ್ನಗಳ ಭೌಗೋಳಿಕ ಮೂಲವನ್ನು ಸೂಚಿಸಲು ಬಳಸುವ ಚಿಹ್ನೆ) ಬಳಸುವ ಹೊಸ ಮಾರಾಟ ವಿಧಾನಗಳನ್ನು ಸೂಚಿಸಲು ಜನರನ್ನು ಕೇಳುತ್ತದೆ. ಇದಕ್ಕೆ ಸ್ಪರ್ಧಿಗಳು ಹೊಸ ಯೋಚನೆಗಳನ್ನು ನೀಡಬೇಕು.
Advertisement
ಸ್ಪರ್ಧೆಯಲ್ಲಿ ಫೈನಲಿಸ್ಟ್‌ಗಳನ್ನು ಸೆಪ್ಟೆಂಬರ್ 27 ರೊಳಗೆ ಆಯ್ಕೆ ಮಾಡಲಾಗುವುದು. ನಂತರ ಅಕ್ಟೋಬರ್‌ನಲ್ಲಿ ಮತ್ತೊಂದು ಸುತ್ತು ನಡೆಯಲಿದ್ದು, ಈ ವಿಶಿಷ್ಟ ಸ್ಪರ್ಧೆಯ ಫಲಿತಾಂಶಗಳನ್ನು ನವೆಂಬರ್ 10 ರಂದು ಟೋಕಿಯೊದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: 21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ
NTA ಪ್ರಕಾರ, 1995 ಕ್ಕೆ ಹೋಲಿಸಿದರೆ ದೇಶವು ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ 2020 ರಲ್ಲಿ ಜಪಾನಿಯರು ಕಡಿಮೆ ಮದ್ಯ ಸೇವನೆ ಮಾಡುತ್ತಿದ್ದಾರೆ. 1995 ರಲ್ಲಿ ಜನರು 100 ಲೀಟರ್ (22 ಗ್ಯಾಲನ್) ಆಲ್ಕೋಹಾಲ್ ಅನ್ನು ಸೇವಿಸುತ್ತಿದ್ದರು. ಸದ್ಯ ಕುಡಿಯುವಿಕೆಯು 75 ಲೀಟರ್‌ಗಳಿಗೆ (16 ಗ್ಯಾಲನ್‌ಗಳು) ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿವೆ.