ಟೋಕಿಯೋ: ಜಪಾನ್‍ನ (Japan) ಮಿಯಾಜಾಕಿ ವಿಮಾನ ನಿಲ್ದಾಣದಲ್ಲಿ (Airport ) ರನ್‍ವೇ ಬಳಿ 2ನೇ ಮಹಾಯುದ್ದದ (2nd World War) ಕಾಲದ ಬಾಂಬ್ ಈಗ ಸ್ಫೋಟಗೊಂಡಿದ್ದು, 87 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಯುದ್ಧ ನಡೆದ ಕಾಲದಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆ ಸ್ಫೋಟಗೊಳ್ಳದ ಬಾಂಬ್‍ಗಳನ್ನು ಬಾಂಬ್ ವಿಲೇವಾರಿ ತಂಡ ನೆಲದಲ್ಲಿ ಹೂತು ಹಾಕಿತ್ತು. ಅದು ಈಗ ಸ್ಫೋಟಗೊಂಡಿದೆ ಎಂದು ಜಪಾನ್‍ನ ಸಾರಿಗೆ ಸಚಿವಾಲಯ ದೃಢಪಡಿಸಿದೆ. ಇದನ್ನೂ ಓದಿ: ನಾಗಾ-ಸಮಂತಾ ಡಿವೋರ್ಸ್ ಕಿಚ್ಚು ಹಚ್ಚಿದ ತೆಲಂಗಾಣ ಸಚಿವೆ; ರಾಜಕೀಯ ಜಗಳಗಳಿಂದ ನನ್ನ ಹೆಸರು ದೂರವಿಡಿ: ಸಮಂತಾ
ಸ್ಫೋಟವು ಟ್ಯಾಕ್ಸಿವೇಯಲ್ಲಿ 7 ಮೀಟರ್ ಅಗಲ ಮತ್ತು 1 ಮೀಟರ್ ಆಳದ ಕುಳಿಯನ್ನು ಸೃಷ್ಟಿಸಿದೆ. ಇದರಿಂದ ಅಧಿಕಾರಿಗಳು ರನ್‍ವೇಯನ್ನು ಮುಚ್ಚಲು ಆದೇಶಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾವುದೇ ಹೆಚ್ಚಿನ ಸ್ಫೋಟಗಳ ಅಪಾಯವಿಲ್ಲ. ಕುಳಿ ತುಂಬುವ ದುರಸ್ತಿ ಇಂದು (ಗುರುವಾರ) ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅದರ ಹಠಾತ್ ಸ್ಫೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಜಪಾನ್ ಸರ್ಕಾರದ ವಕ್ತಾರ ಯೋಶಿಮಾಸಾ ಹಯಾಶಿ ಹೇಳಿದ್ದಾರೆ.
ಜಪಾನ್‍ಗೆ ಸ್ಫೋಟಗೊಳ್ಳದ ಬಾಂಬ್‍ಗಳು ನಿರಂತರ ಬೆದರಿಕೆಯಾಗಿವೆ. ಯುದ್ಧ ನಡೆದು 79 ವರ್ಷಗಳಾಗಿವೆ. ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಹಲವು ಸ್ಫೋಟಿಸದ ಬಾಂಬ್‍ಗಳು ಪತ್ತೆಯಾಗಿವೆ. 2023 ರಲ್ಲಿ ಸ್ವಯಂ ರಕ್ಷಣಾ ಪಡೆಗಳು 37.5 ಟನ್ ತೂಕದ 2,348 ಬಾಂಬ್‍ಗಳನ್ನು ವಿಲೇವಾರಿ ಮಾಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್