‘ಶೋಷಿತೆ’ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ,ಪತ್ರಿಕೆಗಳಿಂದ ಒಳ್ಳೆಯ ವಿಮರ್ಶೆ ಬಂದಿದ್ದರೂ ಗಳಿಕೆಯಲ್ಲಿ ಹಿಂದೇಟು ಹಾಕಿತ್ತು. ಟೆಕ್ಕಿ ಶಶಿಧರ್ ನಿರ್ದೇಶನದ, ಶಿರಿಷಾ ಆಳ್ಳ ನಿರ್ಮಾಣದ ‘ಶೋಷಿತೆ’ (Shoshite) ಸಿನಿಮಾ ಈಗ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಕನ್ನಡದ ಜೊತೆ ತೆಲುಗಿಗೆ ಡಬ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಇದನ್ನೂ ಓದಿ:ಮಾಲಾಶ್ರೀ ಫ್ಯಾನ್ಸ್‌ಗೆ ಬಿಗ್ ನ್ಯೂಸ್- ಒಟಿಟಿಗೆ ಬಂದ ‘ಮಾರಕಾಸ್ತ್ರ’ ಸಿನಿಮಾ
Advertisement
ನಿರ್ದೇಶಕರು 8 ತಿಂಗಳಿಗೂ ಹೆಚ್ಚು ಕಾಲ ಅಮೆಜಾನ್, ನೆಟ್‌ಫ್ಲಿಕ್ಸ್‌ದಂತಹ ಪ್ರಮುಖ ಓಟಿಟಿ ಪ್ಲಾಟ್ ಫಾರ್ಮ್ ಕಚೇರಿಯನ್ನು ಸಂಪರ್ಕಿಸಿದರೂ, ಕನ್ನಡ ಚಿತ್ರ ಎಂಬ ಏಕೈಕ ಕಾರಣದಿಂದ ಯಾವುದೇ ಸ್ಪಂದನೆ ನೀಡದೆ ನಿರಾಕರಿಸಿದರು. ಇದರಿಂದ ವಿಚಲಿತಗೊಳ್ಳದ ತಂಡವು ಕಂಟೆಂಟ್ ತೂಕವಾಗಿದ್ದರೆ ಜನರು ನೋಡುತ್ತಾರೆ ಎಂಬ ಅಭಿಲಾಷೆಯಿಂದ ಸಿನಿಮಾವನ್ನು ತೆಲುಗು ಭಾಷೆಗೆ ಡಬ್ ಮಾಡಿ ‘ಶ್ರೀಮತಿ’ ಹೆಸರಿನೊಂದಿಗೆ ಯೂಟ್ಯೂಬ್‌ಗೆ ಬಿಡಲಾಯಿತು. ಆಶ್ಚರ್ಯ ಎನ್ನುವಂತೆ ಒಂದು ತಿಂಗಳೊಳಗೆ 20 ಲಕ್ಷ ಜನರು ನೋಡಿದ್ದಾರೆ. ಕೆಲವರು ಸಿನಿಮಾವನ್ನು ಇಷ್ಟಪಟ್ಟು ಟಿಕೆಟ್ ದರ ಅಂತ ಹಣ ಪಾವತಿಸಿದ್ದಾರೆ.
Advertisement
ಅಂತೆಯೇ ಕನ್ನಡದಲ್ಲೂ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ ಕೇವಲ ಒಂದು ವಾರದಲ್ಲಿ 25 ಲಕ್ಷ ನಿಮಿಷಗಳ ವೀಕ್ಷಣೆ ಕಂಡು ಸ್ಟ್ರೀಮ್ ಆಗುತ್ತಿದೆ. ಇಷ್ಟಪಡುವ ಅಂಶಗಳು ಇದ್ದರೆ, ಸ್ಟಾರ್‌ಗಳು ಇಲ್ಲದಿದ್ದರೂ ಇಂತಹ ಸಿನಿಮಾವನ್ನು ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ‘ಶೋಷಿತೆ’ ಸಾಬೀತು ಮಾಡಿದೆ. ಮುಂದೆಯೂ ತಮಿಳು, ಹಿಂದಿ ಮತ್ತು ಮಲೆಯಾಳಂಗೆ ಡಬ್ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ. ಅಲ್ಲದೆ ಮೊದಲ ಪ್ಯಾನ್ ಇಂಡಿಯಾ ಯೂಟ್ಯೂಬ್ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Advertisement
Advertisement
ಮಧ್ಯಮವರ್ಗದ ಗೃಹಿಣಿಯೊಬ್ಬಳ ಹೋರಾಟ. ಸಮಾಜದಲ್ಲಿ ಮತ್ತೊಬ್ಬರ ದೌರ್ಬಲ್ಯ, ಒಳ್ಳೆಯತನದ ಲಾಭ ಪಡೆದುಕೊಳ್ಳುವವರು, ತರಾತುರಿಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳಿಂದ ಸಂಕಷ್ಟಕ್ಕೆ ಸಿಲುಕುವುದು. ಪತಿ-ಪತ್ನಿಯರ ಸಂಬಂಧದಲ್ಲಿನ ತಪ್ಪುಗಳಿಗೆ ಒಬ್ಬರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎನ್ನುವ ಸಂದೇಶವನ್ನು ಸಾರಲಾಗಿದೆ.
ನಿರೂಪಕಿ ಹಾಗೂ 15 ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ಜಾನ್ವಿ ರಾಯಲ (Janvi Rayala) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್’ ಸಿನಿಮಾದಲ್ಲಿ ಅಭಿನಯಿಸಿರುವ ರೂಪಾ ರಾಯಪ್ಪ ಖಳನಾಯಕಿ. ಇವರೊಂದಿಗೆ ವೆಂಕ್ಷ, ಪ್ರಶಾಂತ್ ಜೊತೆಗೆ ರಂಗಭೂಮಿ ಕಲಾವಿದರಿಗೆ ಅವಕಾಶ ಮಾಡಿ ಕೊಡಲಾಗಿದೆ. ನೋಡುಗರಿಗೆ ಕನೆಕ್ಟ್ ಆಗುವ ಸಿನಿಮಾ ಇದಾಗಿದೆ.