ಆಗಸ್ಟ್‌ 15 ರಷ್ಟೇ ಜನವರಿ 22 ಮಹತ್ವದ ದಿನ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಕಾರ್ಯದರ್ಶಿ

Public TV
1 Min Read
champat rai ram mandir

ಲಕ್ನೋ: ಆಗಸ್ಟ್‌ 15 ರಷ್ಟೇ ಜನವರಿ 22 ಮಹತ್ವದ ದಿನ ಎಂದು ಅಯೋಧ್ಯೆ (Ayodhya) ರಾಮಮಂದಿರ (Ram Mandir) ಉದ್ಘಾಟನೆ ದಿನದ ಬಗ್ಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ವರ್ಷ ಜನವರಿ 22 ಅನ್ನು ಭಾರತದ ಸ್ವಾತಂತ್ರ್ಯಕ್ಕೆ ಹೋಲಿಸಿರುವ ಚಂಪತ್‌ ರೈ, ಆಗಸ್ಟ್ 15, ಅದು ವಿದೇಶಿ ನೊಗದಿಂದ ವಿಮೋಚನೆಗೊಂಡ ದಿನ ಎಂದು ಹೇಳಿದ್ದಾರೆ. ಆಗಸ್ಟ್ 15 ರಷ್ಟೇ ಜನವರಿ 22 ಮುಖ್ಯವಾಗಿದೆ. ಕಾರ್ಗಿಲ್ ಅನ್ನು ಮರಳಿ ಪಡೆಯುವುದು ಅಷ್ಟೇ ಮುಖ್ಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಆಹ್ವಾನ- ಧನ್ಯವಾದವೆಂದ ಕಾಂಗ್ರೆಸ್

Ram Mandir

ಭಾರತವನ್ನು ಒಗ್ಗೂಡಿಸುವ ಸಾಧನವಾಗಿ ಮಾರ್ಪಟ್ಟಿರುವ ಮಂದಿರ ನಿರ್ಮಾಣದ ಬಗ್ಗೆ ಅಯೋಧ್ಯೆಯ ಜನರಲ್ಲಿ ಸಂತೃಪ್ತಿಯ ಭಾವನೆ ಇದೆ. ಅಯೋಧ್ಯೆ ಜನರು, ನೆರೆಹೊರೆಯ ಸಣ್ಣ ರಾಜಪ್ರಭುತ್ವದ ರಾಜ್ಯಗಳು, ಪುರೋಹಿತರು, ಶಿಕ್ಷಕರು ಮತ್ತು 1983 ರ ನಂತರ ಭಾರತದಾದ್ಯಂತ ಎಲ್ಲಾ ಸಂತರು ಅದರೊಂದಿಗೆ ಸಂಬಂಧ ಹೊಂದಲು ಪ್ರಾರಂಭಿಸಿದ್ದಾರೆ. ಅಯೋಧ್ಯೆಗೆ ಮಾತ್ರ ಸೀಮಿತವಾಗಿದ್ದ ವಿಷಯ ಈಗ ಇಡೀ ದೇಶದ ಗೌರವದ ವಿಷಯವಾಗಿ ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 22 ರಂದು ಭವ್ಯ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಗಣ್ಯರು ಮತ್ತು ಸಿನಿಮಾ ತಾರೆಯರನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: RSS ಮುಖ್ಯಸ್ಥ ಮೋಹನ್ ಭಾಗವತ್ ಮೇಲೆ ದಾಳಿ ಎಚ್ಚರಿಕೆ

ರಾಜಕೀಯ ಮತ್ತು ಧಾರ್ಮಿಕ ಮುಖಂಡರಲ್ಲದೇ, ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್ ನಟರನ್ನು ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠಾನ’ಕ್ಕೆ ಆಹ್ವಾನಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರಥ್ ಕ್ಷೇತ್ರ ಟ್ರಸ್ಟ್ ಮುಂದಿನ ವರ್ಷ ಜನವರಿ 22 ರಂದು ಮಧ್ಯಾಹ್ನ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾನನ್ನು ಸಿಂಹಾಸನಾರೋಹಣ ಮಾಡಲು ನಿರ್ಧರಿಸಿದೆ.

Share This Article