ರಾಯಚೂರು: ಈ ಸರ್ಕಾರ ಹೇಗೆ ನಡೆದುಕೊಳ್ಳುತ್ತೆ ಅನ್ನೋದು ನನಗೆ ಗೊತ್ತು. ರಾಜಕೀಯ ಪ್ರೇರಿತವಾಗಿ ಪ್ರಕರಣದ ತನಿಖೆ ನಡೆಯುತ್ತೆ ಅಂತ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.
ಇಂದು ರಾಯಚೂರಿನಲ್ಲಿ ಮಾತನಾಡಿದ ಹೆಚ್‍ಡಿಕೆ, ನನ್ನ ಅಧಿಕಾರಾವಧಿಯಲ್ಲಿ ಯಾವ ಅಧಿಕಾರಿ ಮೇಲೂ ಒತ್ತಡ ಹೇರಿಲ್ಲ. ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಈಗಾಗಲೇ ಮೂರು ಜಾಮೀನು ತೆಗೆದುಕೊಂಡಿದ್ದೇನೆ. ಈಗ ನಾಲ್ಕನೇ ಬಾರಿಗೆ ಜಾಮೀನಿಗೆ ಅರ್ಜಿ ಹಾಕಿದ್ದೇನೆ. ಒಂದೇ ಪ್ರಕರಣವನ್ನು ನಾಲ್ಕು ರೀತಿ ಎಫ್‍ಐಆರ್ ಹಾಕಿದ್ದಾರೆ. ಹೀಗಾಗಿ ನಿನ್ನೆ ಪುನಃ ನಮ್ಮ ವಕೀಲರು ಅರ್ಜಿ ಹಾಕಿದ್ದಾರೆ. ಈ ಸರ್ಕಾರ ಹೇಗೆ ನಡೆದುಕೊಳ್ಳುತ್ತೆ ಅನ್ನೋದು ನನಗೆ ಗೊತ್ತು. ರಾಜಕೀಯ ಪ್ರೇರಿತವಾಗಿ ಪ್ರಕರಣದ ತನಿಖೆ ನಡೆಯುತ್ತೆ ಅಂತ ಹೇಳಿದ್ರು.
Advertisement
ದಯಾನಾಯಕ್‍ಗೂ ನನಗೂ ಯಾವುದೇ ಸಂಬಂಧವಿಲ್ಲ. ಸುಳ್ಳು ಮಾಹಿತಿಯಿಂದ ಸುಳ್ಳು ವರದಿಗಳು ಪ್ರಕಟವಾಗುತ್ತಿವೆ. ಗಂಗಾರಾಮ್ ಬಡೆರಿಯಾ ಜೊತೆಗೆ ಹೋಗಿದ್ದೇನೆ ಅಂತ ಯಾರು ಮಾಹಿತಿ ನೀಡಿದ್ದು ನನಗೆ ಗೊತ್ತಿಲ್ಲ. ನನ್ನ ಅಧಿಕಾರಾವಧಿಯಲ್ಲಿ ಯಾವ ಅಧಿಕಾರಿಗೂ ಒತ್ತಡ ಹೇರಿಲ್ಲ. ಕುಮಾರಸ್ವಾಮಿಯ ಹೆಸರು ಕೆಡಿಸಬೇಕು ಅಂತ ಪ್ರಯತ್ನಗಳು ನಡೆಯುತ್ತಿವೆ ಅಂದ್ರು.
Advertisement
ಇದನ್ನೂ ಓದಿ: ಏನಿದು ಜಂತಕಲ್ ಮೈನಿಂಗ್ ಪ್ರಕರಣ?
Advertisement
ಹೆಚ್.ವಿಶ್ವನಾಥ್ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದೇವೆ. ವಿಶ್ವನಾಥ್ ಜೆಡಿಎಸ್ ಸೇರಲು ತೀರ್ಮಾನ ಮಾಡಿದ್ದಾರೆ. ಅವರು ಸನ್ಯಾಸಿ ಅಲ್ಲ, ಅವರಿಗೆ ರಾಜಕೀಯದಲ್ಲಿ ಸೇವೆ ಸಲ್ಲಿಸುವ ಆಸೆಯಿದೆ. ಅವರನ್ನ ಗೌರವಯುತವಾಗಿ ಬರಮಾಡಿಕೊಳ್ಳುತ್ತೇವೆ ಅಂತ ಹೆಚ್‍ಡಿಕೆ ಹೇಳಿದ್ರು.