– ಕುಮಾರಸ್ವಾಮಿ ಕಸ್ಟಡಿಗೆ ಎಸ್‍ಐಟಿ ಪ್ಲಾನ್
ಬೆಂಗಳೂರು: ಜಂತಕಲ್ ಅಕ್ರಮ ಮೈನಿಂಗ್ ಪ್ರಕರಣ ಸಂಬಂಧ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‍ನಲ್ಲಿಂದು ನಡೆಯಲಿದೆ.
ಜಂತಕಲ್ ಅಕ್ರಮ ಮೈನಿಂಗ್ ಪ್ರಕರಣದಲ್ಲಿ ನನ್ನ ಆರೋಪ ಸಾಬೀತುಪಡಿಸಿದ್ರೆ ಆತ್ಮಹತ್ಯೆ ಮಾಡ್ಕೊತೀನಿ ಅಂತ ಎಸ್‍ಐಟಿಗೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಸವಾಲು ಹಾಕಿದ್ರು.
Advertisement
ಪ್ರಕರಣ ಸಂಬಂಧ ಕುಮಾರಸ್ವಾಮಿಗೆ ನಿರೀಕ್ಷಣಾ ಜಾಮೀನು ನೀಡಲೇಬೇಕು. ಈಗಾಗಲೇ ಇಂತಹದ್ದೇ ಪ್ರಕರಣಗಳಿಗೆ ಕುಮಾರಸ್ವಾಮಿ ಜಾಮೀನಿನ ಮೇಲೆ ಆಚೆ ಇದ್ದಾರೆ. ಇದು ಕೂಡ ಅದೇ ಪ್ರಕರಣ ಹೊಸ ಎಫ್ ಐಆರ್. ಹಾಗಾಗಿ ಜಾಮೀನು ನೀಡಲೇಬೇಕು ಅಂತ ಎಚ್‍ಡಿಕೆ ಪರ ವಕೀಲರು ಪ್ರಬಲ ವಾದ ಮಂಡನೆ ಮಾಡಿದ್ರು.
Advertisement
ಇದನ್ನೂ ಓದಿ: ಜಂತಕಲ್ ಕೇಸ್: ಆರೋಪ ಸಾಬೀತಾದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ತೀನಿ: ಎಚ್‍ಡಿಕೆ
Advertisement
ಇನ್ನು ಕಸ್ಟಡಿಗೆ ತೆಗೆದುಕೊಳ್ಳದೆ ಪ್ರಕರಣದ ವಿಚಾರಣೆಯನ್ನು ಪ್ರಬಲವಾಗಿ ಮುಗಿಸಲು ಸಾಧ್ಯವಿಲ್ಲ. ಆದ್ರಿಂದ ಜಾಮೀನು ಮಂಜೂರು ಮಾಡ್ಬೇಡಿ. ಸುಪ್ರೀಂ ಆದೇಶಕ್ಕೆ ಗೌರವ ಕೊಡಿ ಅಂತಾ ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿ ಮಾಡಿದ್ರು.
Advertisement
ಇಂದು ಎಸ್‍ಐಟಿಯಿಂದ ಕುಮಾರಸ್ವಾಮಿಗೆ ಜಾಮೀನು ನೀಡದಂತೆ ಪ್ರಬಲವಾದ ವಾದ ಮಂಡನೆ ಸಾಧ್ಯತೆ ಇದೆ. ಹಾಗಾಗಿ, ಇಂದಿನ ಹೈಕೋರ್ಟ್ ವಿಚಾರಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಇನ್ನು, ಈ ಎಲ್ಲಾ ಸಂಕಷ್ಟದಿಂದ ಪಾರಾಗುವ ಸಲುವಾಗಿಯೇ ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ತುಲಾಭಾರ ಮಾಡಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಜಂತಕಲ್ ಮೈನಿಂಗ್ ಪ್ರಕರಣ- ಹೆಚ್‍ಡಿಕೆಯ ನಿರೀಕ್ಷಣಾ ಜಾಮೀನು ಅವಧಿ ಅಂತ್ಯ