ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗುವ ಭೀತಿ ಇದೆ. ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಅವಧಿ ಇಂದಿಗೆ ಮುಕ್ತಾಯವಾಗಲಿದೆ.
ಕಳೆದ ಐದು ದಿನದ ಹಿಂದೆ ಹೆಚ್‍ಡಿಕೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮಂಗಳವಾರದವರೆಗೆ ಹೆಚ್‍ಡಿಕೆ ಬಂಧಿಸದಂತೆ ಸೂಚಿಸಿತ್ತು. ಈ ಅವಧಿ ಇಂದಿಗೆ ಅಂತ್ಯವಾಗಲಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೆ ಬಂಧನ ಭೀತಿ ಉಂಟಾಗಿದೆ. ಅಲ್ದೆ ಜೂನ್ 13ರಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಎಸ್‍ಐಟಿಗೆ ಸಿಡಿ ಸಮೇತ ಹಲವು ದಾಖಲೆ ನೀಡಿದ್ರು.
Advertisement
ಏನಿದು ಜಂತಕಲ್ ಮೈನಿಂಗ್ ಕೇಸ್?: ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್ ಕಂಪೆನಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೀರೆಕಂದವಾಡಿ ಮತ್ತು ತನಿಗೇಹಳ್ಳಿಯಲ್ಲಿ ಅದಿರು ಸಾಗಿಸಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಗಿನ ಸರ್ಕಾರ 2007ರಲ್ಲಿ ಅನುಮತಿ ನೀಡಿತ್ತು. ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಅನುಮತಿ ನೀಡಿದ ಪರಿಣಾಮ ಪಾಕಿಸ್ತಾನಕ್ಕೆ ಅಕ್ರಮ ಅದಿರು ಸಾಗಾಟವಾಗಿದ್ದು, ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು.
Advertisement
ಇದನ್ನೂ ಓದಿ: ಜಂತಕಲ್ ಮೈನಿಂಗ್: ಹೆಚ್‍ಡಿಕೆ ವಿರುದ್ಧ ಎಸ್‍ಐಟಿಗಿಂದು ಸಾಕ್ಷಿ, ಕುಮಾರಸ್ವಾಮಿ ವಿರುದ್ಧ ರೆಡ್ಡಿ ಕೆಂಡಾಮಂಡಲ
Advertisement
ಇದನ್ನೂ ಓದಿ: ಜಂತಕಲ್ ಮೈನಿಂಗ್ ಅಕ್ರಮ: ಎಚ್‍ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್
Advertisement
ಇದನ್ನೂ ಓದಿ: ಜಂತಕಲ್ ಮೈನಿಂಗ್ ಪ್ರಕರಣ ರಾಜಕೀಯ ಪ್ರೇರಿತ: ಹೆಚ್‍ಡಿಕೆ
ಇದನ್ನೂ ಓದಿ: ಜಂತಕಲ್ ಅಕ್ರಮ ಮೈನಿಂಗ್ ಕೇಸ್: ಎಚ್‍ಡಿಕೆ ಜಾಮೀನು ಅರ್ಜಿ ವಜಾ
ಇದನ್ನೂ ಓದಿ: ಎಚ್‍ಡಿಕೆಗೆ ಬಿಗ್ ರಿಲೀಫ್: ಏನಿದು ಜಂತಕಲ್ ಮೈನಿಂಗ್ ಕೇಸ್? ಕೋರ್ಟ್ ನಲ್ಲಿ ಏನಾಯ್ತು?