ಚಂಡೀಗಢ: ಪ್ರೇಮಿಗಳು ಮೊಬೈಲ್ ಟವರ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸಘಡ ರಾಜ್ಯದ ಜಾಂಜಿಗೀರ್ ಜಿಲ್ಲೆಯ ಡೋಂಗರಿ ಗ್ರಾಮದಲ್ಲಿ ನಡೆದಿದೆ.
18 ವರ್ಷದ ಸುನೈನಾ ಪಟೇಲ್ ಮತ್ತು 32 ವರ್ಷದ ಅಜಯ್ ಯಾದವ್ ಆತ್ಮಹತ್ಯೆ ಮಾಡಿಕೊಂಡ ಜೋಡಿ. ಸುನೈನಾ ಮತ್ತು ಅಜಯ್ ಇಬ್ಬರೂ ಒಂದೇ ಗ್ರಾಮದ ನಿವಾಸಿಗಳಾಗಿದ್ದು, ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು ಎಂಬ ಮಾಹಿತಿಗಳು ಲಭ್ಯವಾಗಿದೆ. ಶುಕ್ರವಾರ ತಡರಾತ್ರಿ ಸುನೈನಾ ಮತ್ತು ಅಜಯ್ ಗ್ರಾಮದ ಮೊಬೈಲ್ ಟವರ್ ಗೆ ನೇಣು ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿಗಳ ಪ್ರೀತಿಗೆ ಹೆತ್ತವರು ವಿರೋಧ- ಕಾಡಿಗೆ ಹೋಗಿ ಪ್ರೇಮಿಗಳು ಆತ್ಮಹತ್ಯೆ
ಸುನೈನಾ ಬೈತಲೆಯಲ್ಲಿ ಸಿಂಧೂರ (ಬೈತಲೆಯಲ್ಲಿ ಕುಂಕುಮ ಹಚ್ಚಿದ್ರೆ ವಿವಾಹಿತ ಮಹಿಳೆ ಎಂದರ್ಥ) ಹಚ್ಚಲಾಗಿದೆ. ಸಾಯುವ ಮುನ್ನ ಅಜಯ್-ಸುನೈನಾ ಮದುವೆ ಆಗಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾದೆ. ಇದನ್ನೂ ಓದಿ: ಮಗಳು ಓಡಿಹೋದಳೆಂದು ತಾಯಿ ಆತ್ಮಹತ್ಯೆ- ಸುದ್ದಿ ತಿಳಿದು ಪ್ರೇಮಿಗಳೂ ನೇಣಿಗೆ ಶರಣು
ಇಬ್ಬರ ಸಾವಿಗೆ ನಿಖರ ಕಾರಣ ಇದೂವರೆಗೂ ತಿಳಿದು ಬಂದಿಲ್ಲ. ಘಟನೆ ಸಂಬಂಧ ಪೊಲೀಸರು ಎರಡು ಕುಟಂಬಗಳ ಸದಸ್ಯರಿಂದ ಮತ್ತು ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದು, ಇಬ್ಬರ ಪ್ರೀತಿಗೆ ಪೋಷಕರು ವಿರೋಧ ಮಾಡಿದ್ರಾ ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ತಿಳಿಯಬೇಕಿದೆ. ಇದನ್ನೂ ಓದಿ: ಬಿಟೆಕ್, ಎಂಜಿನಿಯರಿಂಗ್ ಲವ್ ಸ್ಟೋರಿ: ಆತ್ಮಹತ್ಯೆಗೆ ಒಪ್ಪದ್ದಕ್ಕೆ ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ!
ಇದನ್ನೂ ಓದಿ: ‘ಮನೆ ಬಿಟ್ಟು ಬಾ, ಓಡಿಹೋಗಿ ಮದುವೆಯಾಗೋಣ’- ಯುವಕನ ಒತ್ತಡ ತಾಳಲಾರದೇ ಬೆಂಕಿ ಹಚ್ಚಿಕೊಂಡ ಅಪ್ರಾಪ್ತೆ
ಇದನ್ನೂ ಓದಿ: ಮೈಸೂರಿನಿಂದ ಬಾಗಲಕೋಟೆಗೆ ಹೋಗಿ ವಿಷ ಕುಡಿದ ಪ್ರೇಮಿಗಳು
ಇದನ್ನೂ ಓದಿ: ನಂಗೆ ಅವಳೇ ಬೇಕು ಎಂದು ಠಾಣೆಯಲ್ಲೇ ಪ್ರತಿಭಟನೆ- ಇದು ಮಗಳು, ಚಿಕ್ಕಪ್ಪನ ಲವ್ ಸ್ಟೋರಿ!