ಮುಂಬೈ: ತಾಯಿ ಶ್ರೀದೇವಿ ಸಾವಿನ ಬಗ್ಗೆ ಇದೂವರೆಗೂ ಎಲ್ಲಿಯೂ ಮಾತನಾಡದ ಮಗಳು ಜಾಹ್ನವಿ ಕಪೂರ್ ಇಂದು ತಮ್ಮ ಇನ್ ಸ್ಟಾಗ್ರಾಂ ಭಾವನಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಾಯಿ ಸಾವಿನ ಬಳಿಕ ನೊಂದಿದ್ದ ಜಾಹ್ನವಿ, ಅಮ್ಮ ಐ ಲವ್ ಯು, ನನ್ನ ಸರ್ವಸ್ವವೂ ನೀನೇ ಆಗಿದ್ದೆ ಎಂಬ ದೀರ್ಘ ಬರಹವನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಶ್ರೀದೇವಿ, ತಂದೆ ಬೋನಿ ಕಪೂರ್, ಸೋದರಿ ಖುಷಿ ಕಪೂರ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.
Advertisement
ಫೆಬ್ರವರಿ 24ರಂದು ದುಬೈನಲ್ಲಿ ಸಂಬಂಧಿಕರ ಮದುವೆಯಲ್ಲಿ ಶ್ರೀದೇವಿ ಭಾಗಿಯಾಗಿದ್ದರು. ಮದುವೆಯಲ್ಲಿ ಪಾಲ್ಗೊಂಡಿದ್ದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡು ‘ಐ ಮಿಸ್ ಯು’ ಅಂತಾ ಬರೆದುಕೊಂಡು ಮಗಳು ಜಾಹ್ನವಿಗೆ ಟ್ಯಾಗ್ ಮಾಡಿಕೊಂಡಿದ್ದರು.
Advertisement
Advertisement
ಶ್ರದ್ಧಾಂಜಲಿ ಸಲ್ಲಿಸಿದ್ದು ಹೀಗೆ: ನನ್ನ ಮನಸ್ಸು ದುಖಃದಿಂದ ಇನ್ನು ಮುಕ್ತವಾಗಿಲ್ಲ. ಸಮಾಜದಲ್ಲಿ ಹೇಗೆ ಜೀವನ ನಡೆಸಬೇಕು ಎನ್ನುವುದನ್ನು ನಿನ್ನಿಂದ ಕಲಿತಿದ್ದೇನೆ. ಜೀವನದ ಬಗ್ಗೆ ಪಾಠ ಹೇಳಿಕೊಟ್ಟ ನೀನು ಇಂದು ನನ್ನ ಜೊತೆಯಲಿಲ್ಲ. ಆದ್ರೆ ಇಂದೂ ಕೂಡ ನೀನು ನನ್ನ ಜೊತೆಯಲ್ಲಿಯೇ ಇದ್ದೀಯಾ ಎನ್ನುವ ಫೀಲ್ ನನಗಾಗುತ್ತಿದೆ. ಕಣ್ಣುಗಳನ್ನು ಮುಚ್ಚಿದಾಗ ಕೇವಲ ಒಳ್ಳೆಯ ಸನ್ನಿವೇಶಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ತಾಯಿಯ ಹತಾಶೆ, ದು:ಖ ಮತ್ತು ಅಸೂಯೆ ಎಂದು ಅರ್ಥವಾಗಲಿಲ್ಲ. ಹಳೆಯ ಮಾತುಗಳನ್ನು ಬಿಟ್ಟು ಒಳ್ಳೆಯ ರೀತಿಯಲ್ಲಿ ಪ್ರೀತಿಯಿಂದ ಬಾಳೋಣ. ನಮಗೆ ಏನು ಕೊಡಬೇಕೋ ಎಲ್ಲವನ್ನು ಆಕೆ ನಮಗೆ ನೀಡಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶ್ರೀದೇವಿ ಬಗ್ಗೆ ಮನಬಿಚ್ಚಿ ಟ್ವೀಟ್ ಮಾಡಿದ ಬೋನಿ ಕಪೂರ್
Advertisement
ಮುಂದುವರೆದು ನಾನು ಮತ್ತು ತಂಗಿ ಖುಷಿ ಇಬ್ಬರೂ ತಾಯಿಯನ್ನು ಕಳೆದುಕೊಂಡಿದ್ದರೆ, ಅಪ್ಪ ಮಾತ್ರ ಅವರ ಜೀವ(ಜಾನ್)ವನ್ನೇ ಕಳೆದುಕೊಂಡಿದ್ದಾರೆ. ಅಮ್ಮ ಪ್ರತಿಯೊಂದು ವಿಷಯವನ್ನು ತಂದೆಯೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರಿಬ್ಬರ ಪ್ರೀತಿ ಅಮರವಾಗಿದ್ದು, ಇಬ್ಬರ ಅನ್ಯೋನ್ಯತೆ ಜಗತ್ತಿನಲ್ಲಿಯ ಯಾವ ವಸ್ತುವಿಗೆ ಹೋಲಿಕೆ ಮಾಡಲು ಅಸಾಧ್ಯ. ಅಪ್ಪ- ಅಮ್ಮನ ಪ್ರೀತಿ ನಿಷ್ಕಲ್ಮಶ ಮತ್ತು ಶುದ್ಧತೆಯಿಂದ ಕೂಡಿತ್ತು. ಹಾಗಾಗಿ ಅವರಿಬ್ಬರ ಪ್ರೀತಿಯನ್ನು ಅನುಮಾನದಿಂದ ನೋಡಿ ತಂದೆಗೆ ನೋವುಂಟು ಮಾಡಬೇಡಿ ಅಂತಾ ಜಾಹ್ನವಿ ಮನವಿ ಮಾಡಿಕೊಂಡಿದ್ದಾರೆ.
ಫೆಬ್ರವರಿ 24ರಂದು ದುಬೈನಲ್ಲಿ ನಿಧನ ಹೊಂದಿದ್ದ ಶ್ರೀದೇವಿ ಅವರ ಮೃತದೇಹವನ್ನು ಫೆಬ್ರವರಿ 27ರಂದು ಮುಂಬೈಗೆ ತರಲಾಗಿತ್ತು. ಫೆಬ್ರವರಿ 28ರಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಮುಂಬೈನ ವಿಲೇ ಪಾರ್ಲೆಯ ಸಮಾಜ ಸೇವಾ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಇಂದು ಶ್ರೀದೇವಿಯವರ ಅಸ್ಥಿಯನ್ನು ರಾಮೇಶ್ವರಂನಲ್ಲಿ ವಿಸರ್ಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
https://www.instagram.com/p/Bf2bjvYBRLZ/?hl=en&taken-by=janhvikapoor