`ಧಡಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಿತರಾದ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರವಾಗಿಯೇ ಜಾನ್ವಿ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ತನ್ನ ಹಳೆಯ ಬಾಯ್‌ಫ್ರೆಂಡ್‌ಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ಲವ್ ಯೂ ಎಂದಿರುವ ವಿಷ್ಯ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ಬಿಟೌನ್‌ನಲ್ಲಿ ಜಾನ್ವಿ ಕಪೂರ್ ಅವರ ಪ್ರೇಮ ಪುರಾಣ ಇದೀಗ ಭಾರೀ ಚರ್ಚೆಯಾಗುತ್ತಿದೆ. ಅಕ್ಷತ್ ರಾಜನ್ ಮತ್ತು ಜಾನ್ವಿ ಕಪೂರ್ ರಿಲೇಷನ್‌ಶಿಪ್‌ನಲ್ಲಿದ್ದರು. ಇಬ್ಬರು ಬಾಲ್ಯದ ಸ್ನೇಹಿತರು, ಸಾಕಷ್ಟು ಸಮಯದಿಂದ ಡೇಟಿಂಗ್‌ನಲ್ಲಿದ್ದರು. ನಂತರ ಬ್ರೇಕಪ್ ಆಗಿತ್ತು. ಈಗ ಮತ್ತೆ ಇವರಿಬ್ಬರೂ ಜೊತೆಯಾಗಿದ್ದಾರೆ. ಎಕ್ಸ್‌ಬಾಯ್‌ಫ್ರೆಂಡ್‌ಗೆ ಜಾನ್ವಿ ಮತ್ತೆ ಲವ್ ಯೂ ಎಂದಿದ್ದಾರೆ.
View this post on Instagram
ಅಕ್ಷತ್ ರಾಜನ್ ಕೇಕ್ ಮಾಡುತ್ತಿದ್ದಾರೆ ಈ ವೇಳೆ ಜಾನ್ವಿ ಕಪೂರ್ ಕೂಡ ಇದ್ದಾರೆ. ನನ್ನ ಹೃದಯವೇ ನಿನಗೆ ಹುಟ್ಟುಹಬ್ಬದ ಶುಭಾಶಯ. ನಿನಗೆ ಒಂದು ಮುತ್ತು, ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಹಾರೈಸಿ, ಜಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜಾನ್ವಿ ಸ್ಟೇಟಸ್‌ಗೆ ಪ್ರತಿಕ್ರಿಯಿಸಿ, ಅಕ್ಷತ್ ಲವ್ ಯೂ ಟು ಅಂತಾ ಹೇಳಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ಕಿರುತೆರೆ ನಟಿ ಸ್ವಪ್ನಾ ಪತಿಗೆ ಕೆಲಸ ಕೊಡಿಸಿದ ಗೋಲ್ಡನ್ ಸ್ಟಾರ್ ಗಣೇಶ್
ಇನ್ನೂ ಬ್ರೇಕಪ್ ಆಗಿದ್ದ ಜಾನ್ವಿ ಲವ್ ಸ್ಟೋರಿ ಮತ್ತೆ ಪ್ಯಾಚ್ ಅಪ್ ಆಯ್ತಾ? ಇವರಿಬ್ಬರ ಮಧ್ಯೆ ಗೆಳೆತನ ಇದೆಯಾ ಅಥವಾ ಪ್ರೀತಿ ಇದ್ಯಾ ಎಂಬ ಗೊಂದಲ ಇದೀಗ ಅಭಿಮಾನಿಗಳನ್ನ ಕಾಡುತ್ತಿದೆ.