ನಟಿ ಜಾನ್ವಿ ಕಪೂರ್ (Janhvi Kapoor) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನತ್ತ ಮುಖ ಮಾಡಿದ್ದ ನಟಿಗೆ ಬಾಲಿವುಡ್‌ನಲ್ಲಿ ಇದೀಗ ಮತ್ತೆ ಬಂಪರ್ ಆಫರ್‌ಗಳು ಅರಸಿ ಬರುತ್ತಿವೆ. ಇದೀಗ ವರುಣ್ ಧವನ್‌ಗೆ (Varun Dhawan) ನಾಯಕಿಯಾಗಿ ನಟಿಸಲಿರುವ ಹೊಸ ಚಿತ್ರದ ಮುಹೂರ್ತ ಸಮಾರಂಭ ಇದೀಗ ಅದ್ಧೂರಿಯಾಗಿ ನಡೆದಿದೆ.
ಮುಂಬೈನಲ್ಲಿ ವರುಣ್ ಧವನ್, ಜಾನ್ವಿ ಕಪೂರ್, ಸಾನ್ಯ ಮಲ್ಹೋತ್ರಾ ನಟನೆಯ ‘ಸನ್ನಿ ಸಂಸ್ಕರಿ ತುಳಸಿ ಕುಮಾರಿ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ, ಚಿತ್ರತಂಡದ ಜೊತೆ ಜಾನ್ವಿ ಮತ್ತು ವರುಣ್ ಖುಷಿ ಖುಷಿಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸಿನಿಮಾ ಮುಹೂರ್ತದ ವಿಡಿಯೋ ನಟಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ‘ಬಾವಲ್’ ಎಂಬ ಸಿನಿಮಾದಲ್ಲಿ ಜಾನ್ವಿ ಕಪೂರ್ (Janhvi Kapoor) ಮತ್ತು ವರುಣ್ ಧವನ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಮೂಲಕ ಮತ್ತೆ ಈ ಜೋಡಿ ಒಂದಾಗಿದೆ. ಜಾನ್ವಿ ಹೊಸ ಚಿತ್ರಕ್ಕೆ ಕರಣ್ ಜೋಹರ್ (Karan Johar) ನಿರ್ಮಾಣ ಮಾಡುತ್ತಿದ್ದಾರೆ.
ದೇವರ, ರಾಮ್ ಚರಣ್ ಜೊತೆಗಿನ ಹೊಸ ಸಿನಿಮಾ ಸೇರಿದಂತೆ ಬಾಲಿವುಡ್ ಹಲವು ಸಿನಿಮಾಗಳು ಜಾನ್ವಿ ಕಪೂರ್ ಕೈಯಲ್ಲಿವೆ.