ಬಾಲಿವುಡ್ ಫ್ಯಾಶನ್ ದಿವಾ ಜಾನ್ವಿ ಕಪೂರ್ ತಮ್ಮ ಉಡುಗೆ ವಿನ್ಯಾಸದಿಂದಲೇ ಹೆಚ್ಚು ಗಮನ ಸೆಳೆಯುತ್ತಾರೆ. ಇದೀಗ ಮುಂಬೈನಲ್ಲಿ ನಡೆದ ಪರಮ್ ಸುಂದರಿ ಚಿತ್ರದ ಪ್ರೀಮಿಯರ್‌ಗೆ ವಿಭಿನ್ನ ಸ್ಟೈಲ್ ಉಡುಗೆ ಧರಿಸಿ ಬಂದಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ತಿದ್ದಾರೆ ಈ ನಟಿ.
View this post on Instagram
ಯಾಕಂದ್ರೆ ಮಿರ ಮಿರ ಮಿಂಚುವ ಕೇಸರಿ ಬಣ್ಣದ ಮಿನಿ ಸ್ಕರ್ಟ್ ಧರಿಸಿದ್ದ ಜಾನ್ವಿ ಇಂಡೋ ವೆಸ್ಟರ್ನ್ ಸ್ಟೈಲ್‍ನಲ್ಲಿ ವಿಭಿನ್ನವಾಗಿ ಕಂಡುಬಂದ್ರು. ಮಿನಿ ಸ್ಕರ್ಟ್ ಧರಿಸಿ ಸೊಂಟಕ್ಕೆ ಚಿನ್ನದ ಡಾಬು ಕಟ್ಟಿಕೊಂಡಿದ್ರು , ಕೈಯಲ್ಲಿ ಬಳೆಗಳನ್ನ ಧರಿಸಿ ಪೋಸ್ ಕೊಟ್ರು. ನಟಿಯ ವಿಚಿತ್ರ ಫ್ಯಾಶನ್ ಸ್ಟೈಲ್‍ಗೆ ನೆಟ್ಟಿಗರ ಟೀಕೆ ಟಿಪ್ಪಣಿ ಜೋರಾಗಿದೆ.
ಜಾನ್ವಿಅವರೇ ಹೇಳಿಕೊಂಡಂತೆ ಕೆಲವು ಬಾರಿ ಸೆಲ್ಫ್ ಡಿಸೈನ್ ಮಾಡಿಕೊಳ್ತಾರೆ. ಇಂಡೋ ವೆಸ್ಟರ್ನ್ ಸ್ಟೈಲ್ ಅಂತೂ ಹಲವು ಚಾಲ್ತಿಯಲ್ಲಿರೋದೇ ಆದರೆ ಈ ರೀತಿ ವಿಚಿತ್ರ ಉಡುಗೆಯಲ್ಲಿ ಜಾನ್ವಿ ಕಂಡುಬರ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇದುವರೆಗೆ ಚಿತ್ರದ ಪ್ರಚಾರದಲ್ಲಿ ಸರಳವಾಗೇ ಕಂಡುಬಂದಿದ್ದ ನಟಿ ಇದೀಗ ಗಣೇಶ ಹಬ್ಬದ ದಿನ ನಡೆದ ಪ್ರೀಮಿಯರ್ ಶೋ ವೇಳೆ ವಿಚಿತ್ರ ಉಡುಗೆಯಿಂದ ಕಾಣಿಸ್ಕೊಂಡು ಸೆಂಟರ್ ಆಫ್ ಆ್ಯಟ್ರ್ಯಾಕ್ಷನ್ ಆದ್ರು.