ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ `ಪುಷ್ಪ’ (Pushpa) ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಕೋಟಿ ಕೋಟಿ ಕಲೆಕ್ಷನ್ ಕೂಡ ಮಾಡಿತ್ತು. ಈ ಸಿನಿಮಾ ಮತ್ತು ಹಾಡು ಬಾಲಿವುಡ್ ಮಂದಿಗೂ ಸಖತ್ ಹಿಡಿಸಿತ್ತು. ಇತ್ತೀಚಿಗೆ ದುಬೈನಲ್ಲಿ ನಡೆದ ಅವಾರ್ಡ್ ಶೋನಲ್ಲಿ ಜಾನ್ವಿ ಕಪೂರ್ (Janvi Kapoor) ಸಾಮಿ ಸಾಮಿ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಜೊತೆಗೆ ಜಾನ್ವಿ ಕಪೂರ್ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದಾರೆ.
ಬಾಲಿವುಡ್‌ನಲ್ಲೂ ನಿಧಾನಕ್ಕೆ ರಶ್ಮಿಕಾ ಸದ್ದು ಮಾಡ್ತಿದ್ದಾರೆ. ಅದರಲ್ಲೂ `ಪುಷ್ಪ’ ಚಿತ್ರದ ಫೀವರ್‌ನಲ್ಲಿಯೇ ಇರೋ ಸಿನಿರಸಿಕರಿಗೆ, ಅದೇ ಚಿತ್ರದ ಹಾಡಿನ ಮೂಲಕ ಮೋಡಿ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಅವಾರ್ಡ್ ಕಾರ್ಯಕ್ರಮದಲ್ಲಿ ರಶ್ಮಿಕಾ ಹೆಜ್ಜೆ ಹಾಕಿದ್ದ ಸಾಮಿ ಸಾಮಿ ಹಾಡಿಗೆ ಜಾನ್ವಿ ಕಪೂರ್ ಸೊಂಟ ಬಳುಕಿಸಿದ್ದಾರೆ. ಜಾನ್ವಿ ಡಾನ್ಸ್ ಮಾಡಿರುವ ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ರೀತಿಯಲ್ಲಿಯೇ ಕೈ ಸನ್ನೆ ಮಾಡಿ ರಿಷಬ್ ತಿರುಗೇಟು
#JanhviKapoor performing #SaamiSaami ????@alluarjun @PushpaMovie #Pushpa pic.twitter.com/LcOm4jOZSC
— TotallyAlluArjun (@TeamTAFC) November 20, 2022
ಜಾನ್ವಿ ಹಸಿರು ಬಣ್ಣದ ಲೆಹಂಗಾ ಧರಿಸಿದ್ದರು. ಜಾನ್ವಿ ಡಾನ್ಸ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ರಶ್ಮಿಕಾ ಅಭಿಮಾನಿಗಳು ಈಗ ಜಾನ್ವಿನ ಟ್ರೋಲ್ ಮಾಡಿ ಕಾಲೆಳೆಯುತ್ತಿದ್ದಾರೆ. ನಿಮಗಿಂತ ರಶ್ಮಿಕಾನೇ ಉತ್ತಮ ಎಂದು ಕಾಮೆಂಟ್ ಮಾಡಿ ಜಾನ್ವಿಯನ್ನು ಜರಿಯುತ್ತಿದ್ದಾರೆ. ನೆಟ್ಟಿಗರೊಬ್ಬರು ನಿಮಗಿಂತ ರಶ್ಮಿಕಾ ಅವರೇ ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ರಶ್ಮಿಕಾಗಿಂತ ಅತ್ಯುತ್ತಮವಾಗಿ ಮಾಡಲು ಯಾರು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸೌತ್ ನಟಿಯರನ್ನು ಅನುಸರಿಸಿ ಸೋತರು ಎಂದು ಹೇಳಿದ್ದಾರೆ. ರಶ್ಮಿಕಾ ಬೀಟ್ ಮಾಡಲು ಸಾಧ್ಯವೇ ಇಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಜಾನ್ವಿ ಕಾಲೆಳೆಯುತ್ತಿದ್ದಾರೆ.