ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಬಗ್ಗೆ ಇಂಟ್ರಸ್ಟಿಂಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ತೃಪ್ತಿ ದಿಮ್ರಿ ಒಬ್ಬರೇ ಅಲ್ಲ, ಹಾಟ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಕೂಡ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಜೊತೆ ಡ್ಯಾನ್ಸ್ ಮಾಡಲಿದ್ದಾರೆ. ಈ ಮೂವರ ಜುಗಲ್‌ಬಂದಿ ಬಗ್ಗೆ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Advertisement
‘ಪುಷ್ಪ’ ಪಾರ್ಟ್ 1ರಲ್ಲಿ ಸಮಂತಾ ಡ್ಯಾನ್ಸ್ ನೋಡಲೆಂದೇ ಸಾಕಷ್ಟು ಜನ ಥಿಯೇಟರ್‌ಗೆ ಆಗಮಿಸಿದ್ದರು. ಆ ಐಟಂ ಹಾಡು ಸೂಪರ್ ಹಿಟ್ ಆಗಿತ್ತು. ಪುಷ್ಪ 2ನಲ್ಲಿ ಕೂಡ ಅದೇ ರೀತಿ ಸ್ಪೆಷಲ್ ಸಾಂಗ್ ಇದ್ದರೆ ಪ್ರೇಕ್ಷಕರನ್ನು ಸೆಳೆಯಬಹುದು ಎಂಬುದು ಚಿತ್ರತಂಡದ ಲೆಕ್ಕಚಾರ. ಇತ್ತೀಚೆಗೆ ತೃಪ್ತಿ (Tripti Dimri) ಚಿತ್ರತಂಡ ಸೇರುವ ಬಗ್ಗೆ ಸುದ್ದಿಯಾಗಿತ್ತು. ಈಗ ‘ದೇವರ’ ಚಿತ್ರದ ನಟಿ ಜಾನ್ವಿ (Janhvi Kapoor) ಕೂಡ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ
Advertisement
ಈ ಬಾರಿ ಅಲ್ಲು ಅರ್ಜುನ್ (Allu Arjun) ಅಲಿಯಾಸ್ ಪುಷ್ಪರಾಜ್ ಜೊತೆ ಬಾಲಿವುಡ್‌ನ ಹಾಟ್ ಬೆಡಗಿಯರಾದ ತೃಪ್ತಿ ದಿಮ್ರಿ ಮತ್ತು ಜಾನ್ವಿ ಕಪೂರ್ ಸೊಂಟ ಬಳುಕಿಸಲಿದ್ದಾರೆ. ಮೂವರು ಒಂದೇ ಸ್ಟೇಜ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ಹೆಜ್ಜೆ ಹಾಕಿದ ಹಾಡಿನಂತೆಯೇ ಪುಷ್ಪ 2ನಲ್ಲಿ ಈ ಬಾರಿಯೂ ಕೂಡ ಮ್ಯೂಸಿಕ್ ಕಿಕ್ ಇರಲಿದೆ ಎನ್ನಲಾಗಿದೆ.
Advertisement
Advertisement
ಒಂದು ವೇಳೆ, ಈ ಸುದ್ದಿ ನಿಜವೇ ಆಗಿದ್ದಲ್ಲಿ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ. ಇದೆಲ್ಲದರ ನಡುವೆ ಮೇ 29ರಂದು ಕಪಲ್ ಡ್ಯಾನ್ಸ್ ರಿಲೀಸ್ ಆಗಲಿದೆ ಎಂದು ರಶ್ಮಿಕಾ ಮಂದಣ್ಣ ಮಾಹಿತಿ ನೀಡಿದ್ದರು. ಆ ಸಾಂಗ್ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ. ಅಂದಹಾಗೆ, ‘ಪುಷ್ಪ 2’ ಸಿನಿಮಾ ಇದೇ ಆಗಸ್ಟ್ 15ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.