ಈಗಾಗಲೇ ಬಹುಭಾಷಾ ನಟಿಯಾಗಿ ಶ್ರೀದೇವಿ ಕಪೂರ್ (Sridevi Kapoor) ಪುತ್ರಿ ಜಾನ್ವಿ ಕಪೂರ್ (Janhavi Kapoor) ಎರಡು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಜ್ಯೂನಿಯರ್ ಎನ್.ಟಿ.ಆರ್ ನಟನೆಯ ದೇವರ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಅಖಿಲ್ ಅಕ್ಕಿನೇನಿ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ನಡುವೆ ತಮಿಳು ಚಿತ್ರೋದ್ಯಮಕ್ಕೂ ಜಾನ್ವಿ ಹಾರಿದ್ದು, ಈ ಸಿನಿಮಾವನ್ನು ಕಮಲ್ ಹಾಸನ್ (Kamal Haasan) ನಿರ್ಮಾಣ ಮಾಡುತ್ತಿದ್ದಾರೆ.
ಮಿಲಿ, ಗುಡ್ ಲಕ್ ಜರಿ ಸಿನಿಮಾಗಳ ಮೂಲಕ ಬಾಲಿವುಡ್ನಲ್ಲಿ (Bollywood) ಮೋಡಿ ಮಾಡಿರುವ ಹಾಟ್ ಬ್ಯೂಟಿ ಜಾನ್ವಿ ಕಪೂರ್ ತೆಲುಗಿನತ್ತ ಮುಖ ಮಾಡಿದಾಗ ಹುಬ್ಬೇರಿಸಿದವರೇ ಹೆಚ್ಚು. ಶ್ರೀದೇವಿ ಅವರು ಹೇಗೆ ಒಂದೊಂದೇ ಯಶಸ್ಸಿನ ಮೆಟ್ಟಿಲನ್ನು ಏರಿದ್ದರೋ ಅದೇ ರೀತಿ ಸೌತ್ ಸಿನಿಮಾ ಸ್ಕ್ರಿಪ್ಟ್ಗಳಿಗೆ ಜಾನ್ವಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಥೇಟ್ ಅಮ್ಮನ ನಡೆಯನ್ನೇ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಜ್ಯೂನಿಯರ್ ಎನ್ಟಿಆರ್ (Jr.ntr) ಜೊತೆಗಿನ ದೇವರ ಸಿನಿಮಾ ರಿಲೀಸ್ ಆಗುವ ಮುನ್ನವೇ ಮತ್ತೊಂದು ಬಂಪರ್ ಆಫರ್ ಅನ್ನ ನಟಿ ತಮ್ಮದಾಗಿಸಿಕೊಂಡಿದ್ದಾರೆ. ಜಾನ್ವಿ ಇದೀಗ ಮತ್ತೊಬ್ಬ ತೆಲುಗಿನ ನಟನ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಬಗೆಯ ಕಥೆಯಲ್ಲಿ ಜಾನ್ವಿ ಕಮಾಲ್ ಮಾಡಲಿದ್ದಾರೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
ಹೊಸ ಸಿನಿಮಾಗೆ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿಗೆ (Akhil Akkineni) ನಾಯಕಿಯಾಗಿ ಜಾನ್ವಿ ಕಪೂರ್ ಸೆಲೆಕ್ಟ್ ಆಗಿದ್ದಾರೆ. ಯುವ ನಿರ್ದೇಶಕ ಅನಿಲ್ ಕುಮಾರ್ (Anil Kumar) ನಿರ್ದೇಶನದಲ್ಲಿ ಅಖಿಲ್- ಜಾನ್ವಿ ಆಕ್ಟ್ ಮಾಡಲಿದ್ದಾರೆ. ಅನಿಲ್ ಈ ಹಿಂದೆ ಪ್ರಭಾಸ್ ನಟನೆಯ ‘ಸಾಹೋ’ (Saho) ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
ಮೊದಲ ಬಾರಿಗೆ ಜಾನ್ವಿ- ಅಖಿಲ್ ತೆರೆಯ ಮೇಲೆ ಒಂದಾಗುತ್ತಿದ್ದು, ಈ ಫ್ರೆಶ್ ಫೇರ್ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.
Web Stories