ಜೈಪುರ: ರಾಜಸ್ಥಾನ (Rajasthan) ಕಾಂಗ್ರೆಸ್‌ನಲ್ಲಿ (Congress) ಮಹತ್ವದ ಬೆಳವಣಿಗೆಯೊಂದು ಕಂಡುಬಂದಿದ್ದು, ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ವಿರುದ್ಧ ಬಂಡಾಯವೆದ್ದಿರುವ ಸಚಿನ್ ಪೈಲೆಟ್ (Sachin Pilot) ಇದೀಗ ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಲೀಕ್‌ನಂತಹ ಅಂಶಗಳನ್ನು ಮುಂದಿಟ್ಟುಕೊಂಡು ಜನಸಂಘರ್ಷ (Janasangarsha) ಯಾತ್ರೆ ಶುರು ಮಾಡಿದ್ದಾರೆ.
ಗುರುವಾರ ಈ ಯಾತ್ರೆಯನ್ನು ಕೈಗೊಂಡಿದ್ದು, ಅಜ್ಮೀರ್‌ನಿಂದ (Ajmer) ಜೈಪುರದವರೆಗೂ (Jaipur) ಪಾದಯಾತ್ರೆ ಮಾಡಲಿದ್ದಾರೆ. ಸಚಿನ್ ಪೈಲೆಟ್ ಕೈಗೊಂಡಿರುವ ಈ ಯಾತ್ರೆಯು 2 ದಿನಗಳನ್ನು ಪೂರೈಸಿದೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಕಿತ್ತಾಟ ನಡೆಸುತ್ತಿದ್ದು, ಇದೀಗ ಪೈಲೆಟ್ ಜನಸಂಘರ್ಷ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಶಿವಲಿಂಗದ ವೈಜ್ಞಾನಿಕ ಸಮೀಕ್ಷೆ ನಡೆಸಲು ಹೈಕೋರ್ಟ್ ಆದೇಶ
Advertisement
Advertisement
2020ರಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗಾಗಿ ಸಚಿನ್ ಪೈಲೆಟ್ ಬಂಡಾಯ ಎಬ್ಬಿಸಿದ್ದರು. ಆದರೆ ಅಶೋಕ್ ಗೆಹ್ಲೋಟ್ ತಮ್ಮ ನಾಯಕತ್ವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ ಸಚಿನ್ ಪೈಲೆಟ್ ಸೇರಿದಂತೆ ಕೆಲವು ನಿಷ್ಠಾವಂತ ನಾಯಕರನ್ನು ರಾಜ್ಯ ಸಚಿವ ಸಂಪುಟದಿಂದ ಹೊರಹಾಕಲಾಯಿತು. ಇದನ್ನೂ ಓದಿ: ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸಿಬಿಐನಿಂದ ಭ್ರಷ್ಟಾಚಾರ ಕೇಸ್ ದಾಖಲು
Advertisement
Advertisement
ಅಜ್ಮೀರದಿಂದ ಜೈಪುರದವರೆಗೂ ನಡೆಯುವ ಈ ಪಾದಯಾತ್ರೆಯಲ್ಲಿ ಸಚಿನ್ ಪೈಲೆಟ್ ಐದು ದಿನಗಳಲ್ಲಿ 125 ಕೀ.ಮೀ ಪ್ರಯಾಣಿಸಲಿದ್ದಾರೆ ಎನ್ನಲಾಗುತ್ತಿದೆ. ನಾನು ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದ ಸಚಿನ್ ಪೈಲೆಟ್ ರಾಜಸ್ಥಾನ ಲೋಕಸೇವಾ ಆಯೋಗದ ಸ್ವರೂಪವನ್ನು ಬದಲಾವಣೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧದ ಕಿರುಕುಳ ಆರೋಪ – ತನಿಖೆಗೆ ಎಸ್‍ಐಟಿ ರಚನೆ
ಮುಂದಿನ ಮೂರು ದಿನಗಳಲ್ಲಿ ಪೈಲೆಟ್ ಯಾತ್ರೆ ಜೈಪುರ ತಲುಪಲಿದ್ದು, ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆ ಹೈಕಮಾಂಡ್‌ಗೆ (High Command) ತಲೆಬಿಸಿ ತಂದಿದ್ದು, ದೆಹಲಿಯಲ್ಲಿ ನಾಯಕರು ಸಭೆ ಸೇರಿ ಚರ್ಚೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು – ಭಾರತದ ಭೇಟಿ ಮರೆಯಲಾಗದ ನೆನಪು ಎಂದ ಇಸ್ರೇಲ್ ಅಧಿಕಾರಿ