– ವಿಶ್ವದಲ್ಲಿರುವ ಎಲ್ಲಾ ಟೆಕ್ನಾಲಜಿ ಬಳಸಿ, ಡ್ಯಾಂ ಸರಿಪಡಿಸುವಂತೆ ಆಗ್ರಹ
ಕೊಪ್ಪಳ: ತುಂಗಭದ್ರಾ ಡ್ಯಾಂನ (Tungabhadra Dam) ವಾರ್ಷಿಕ ನಿರ್ವಹಣಾ ಗುತ್ತಿಗೆದಾರರು ಯಾರು? ಅವರಿಗೆ ಎಷ್ಟು ಕೋಟಿ ಹಣ ಸಂದಾಯ ಆಗಿದೆ? ಅಂತ ಬಹಿರಂಗ ಪಡಿಸಬೇಕು ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಕಳಚಿಕೊಂಡ 19ನೇ ಕ್ರಸ್ಟ್‌ಗೇಟ್ (TB Dam crest gate collapse) ವೀಕ್ಷಣೆ ಮಾಡಿದ ಶಾಸಕ ಜನಾರ್ದನ ರೆಡ್ಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ತುಂಗಭದ್ರಾ ಜಲಾಶಯದ ನಿರ್ವಹಣೆಗೆ ಯಾರಿಗೆ ಕೊಟ್ಟಿದ್ದಾರೆ? ಇದಕ್ಕೆ ಎಲ್ಲಾ ಸರ್ಕರವೇ ಹೊಣೆ. ಡಿಕೆಶಿ ಅಚಾನಕ್ ಆಗಿದೆ ಅಂತ ಹೇಳ್ತಾರೆ, ಇದನ್ನ ಒಪ್ಪುವ ಪ್ರಶ್ನೆಯೇ ಬರಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: Tungabhadra Dam | 5 ದಿನಗಳಲ್ಲಿ ಗೇಟ್ ರಿಪೇರಿ – ಸರ್ಕಾರಕ್ಕೆ ಅಧಿಕಾರಿಗಳ ಭರವಸೆ
ಸಿಬಿಐ ತನಿಖೆ ಆಗಲಿ:
ತುಂಗಭದ್ರಾ ಡ್ಯಾಂ ವಿಚಾರದಲ್ಲಿ ನಾನು ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲ್ಲ. ಆದ್ರೆ ಈ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದ ವಿರುದ್ಧ ಸಿಬಿಐ ತನಿಖೆಯಾಗಬೇಕು. ಡ್ಯಾಂನ ವಾರ್ಷಿಕ ನಿರ್ವಹಣಾ ಗುತ್ತಿಗೆದಾರರು ಯಾರು? ಅವರಿಗೆ ಎಷ್ಟು ಕೋಟಿ ಹಣ ಸಂದಾಯ ಆಗಿದೆ? ಅಂತ ಸರ್ಕಾರ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ಗೆ ಡಿಜಿಟಲ್ ಸ್ಪರ್ಶ – ಇನ್ಮುಂದೆ ಆನ್‌ಲೈನ್‌ನಲ್ಲಿ ಊಟ ಬುಕ್ಕಿಂಗ್!
ಅಲ್ಲದೇ ಗೇಟ್ ಅನ್ನು ನೀವು ಸರಿ ಮಾಡದಿದ್ದರೇ ಯಾರಾದ್ರೂ ಒಬ್ಬರು ಸರಿಪಡಿಸ್ತಾರೆ. ಆದ್ರೆ ಇದು ನಮ್ಮ ಭಾಗದ ರೈತರಿಗೆ (Farmers) ಆದ ದೊಡ್ಡ ಅನ್ಯಾಯ. ಸರ್ಕಾರ ಇದರ ಸಂಪೂರ್ಣ ಜವಾಬ್ದಾರಿ ಹೊರಬೇಕು, ನಿರ್ಲಕ್ಷತನ ತೋರಿದವರ ವಿರುದ್ಧ ಕ್ರಮ ಆಗಬೇಕು ಒತ್ತಾಯಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ಡ್ಯಾಂ ಗೇಟ್ ಪರಿಶೀಲಿಸಿ, ನಿರ್ವಹಣೆ ಮಾಡಬೇಕು. ಸರ್ಕಾರ ಯಾವ ಕೆಲಸವನ್ನೂ ಮಾಡಿಲ್ಲ. ಹಳೇ ಡ್ಯಾಂಗಳ ನಿರ್ವಹಣೆಗೆ ಕೇಂದ್ರ ಸರ್ಕಾರ ತಂಡ ರಚನೆ ಮಾಡಿದೆ. ಅದನ್ನ ಇವರು ಸಂಪರ್ಕ ಮಾಡಿದ್ದಾರಾ? ಇದೆಲ್ಲವೂ ಮುಖ್ಯವಾಗುತ್ತೆ. ಇದಕ್ಕಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತೆ? ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದ್ಯಾವುದೇ ನಿಯಮಗಳನ್ನ ಅನುಸರಿಸುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರಿಂದ ಹೋರಾಟ – ಸರ್ಕಾರಿ ಶಾಲೆಗಳಲ್ಲಿ ತರಗತಿ ವ್ಯತ್ಯಯ?
ವಿಶ್ವದಲ್ಲಿರುವ ಎಲ್ಲಾ ಟೆಕ್ನಾಲಜಿ ಬಳಸಿ:
ಸರಿಯಾಗಿ ನಿರ್ವಹಣೆ ಮಾಡಿದ್ದರೇ ಈ ಘಟನೆ ನಡೆಯುತ್ತಿರಲಿಲ್ಲ. ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತೆ. ಇದು ಮೂರು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾದ್ರೂ ಡ್ಯಾಂ ನಮ್ಮ ಸುಪರ್ದಿಯಲ್ಲಿದೆ. ನಾನು ಯಾವುದೇ ರಾಜಕೀಯ ಉದ್ದೇಶದಿಂದ ಮಾತನಾಡುತ್ತಿಲ್ಲ. ವಿಶ್ವದಲ್ಲಿ ಇರುವ ಎಲ್ಲಾ ರೀತಿಯ ಟೆಕ್ನಾಲಜಿ ಬಳಸಿ ಇದನ್ನ ಕೂಡಲೇ ನಿರ್ವಹಣೆ ಮಾಡಿ ಡ್ಯಾಂ ಉಳಿಸುವ ಕೆಲಸ ಮಾಡಬೇಕು. ಡಿಕೆಶಿ ಹೇಳಿದಂತೆ ಅಚಾನಕ್ ಆಗಿ ಕಟ್ ಆಗಿದೆ ಅಂದ್ರೆ ಸಣ್ಣ ಮಕ್ಕಳು ಕೂಡಾ ನಗ್ತಾರೆ. ಈ ವೈಪಲ್ಯಕ್ಕೆ ಸಂಪೂರ್ಣ ಜವಾಬ್ದಾರಿ ಸರ್ಕಾರವೇ ತಗೊಬೇಕು. ಇದು ಡಿಬಿ ಡ್ಯಾಂ ಬೋರ್ಡ್ ಹಾಗೂ ಸರ್ಕಾರ ಎರಡರ ವೈಫಲ್ಯವೂ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.