ಬೆಂಗಳೂರು: ರದ್ದಾದ ನೋಟುಗಳನ್ನು ಅಕ್ರಮವಾಗಿ ವರ್ಗಾವಣೆ ಪ್ರಕರಣದಡಿ ಸಿಸಿಬಿ ತಂಡವು ಜನಾರ್ದನ ರೆಡ್ಡಿ ಅವರ ಮೂವರು ಆಪ್ತರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಂಬಿಡೆಂಟ್ ಕಂಪನಿಯ ಮಾಲೀಕ ಫರೀದ್, ಬಿಲ್ಡರ್ ಬ್ರಿಜೇಶ್, ರಮೇಶ್ ಕೊಠಾರಿ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಜನಾರ್ದನ ರೆಡ್ಡಿ ವಿಚಾರಣೆಗಾಗಿ ಸಿಸಿಬಿ ತಂಡವು ಏಕಕಾಲದಲ್ಲಿಯೇ ಬೆಂಗಳೂರಿನ ಪಾರಿಜಾತ ಅಪಾರ್ಟ್‍ಮೆಂಟ್, ಟ್ವಿನ್ ಟವರ್, ಮೊಳಕಾಲ್ಮೂರು ತೋಟದ ಮನೆ, ಬಳ್ಳಾರಿಯಲ್ಲಿಯೂ ದಾಳಿ ಮಾಡಿತ್ತು. ಆದರೆ ಜನಾರ್ದನ ರೆಡ್ಡಿ ಹೈದರಾಬಾದ್‍ಗೆ ಪರಾರಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತಂಡವು ಚುರುಕು ಕಾರ್ಯಾಚರಣೆ ಕೈಗೊಂಡಿದ್ದು, ಜನಾರ್ದನ ರೆಡ್ಡಿ ಇರುವ ಸ್ಥಳದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬಂಧಿಸಲು ಸಿದ್ಧವಾಗಿದೆ ಎನ್ನಲಾಗಿದೆ. ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv