ಚಿತ್ರದುರ್ಗ: ದಾಖಲೆಯ ಬಹುಮತಗಳಿಂದ ಗೆಳೆಯ ಸಂಸದ ಶ್ರೀರಾಮುಲು ಅವರನ್ನು ಗೆಲ್ಲಿಸಲು ಮೊಳಕಾಲ್ಮೂರಿನಲ್ಲಿ ಮನೆ ಮಾಡಿದ್ದೆನೆ ಅಂತಾ ಮಾಜಿ ಸಚಿವ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಗೆಳೆಯ ಶ್ರೀರಾಮುಲು ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿರೊ ಗಣಿದಣಿ ಗಾಲಿ ಜನಾರ್ಧನ ರೆಡ್ಡಿ ಅವರ ಆತ್ಮೀಯ ಸಂಬಂಧಿ ಚಳ್ಳಕೆರೆಯ ರಾಮಕೃಷ್ಣಾರೆಡ್ಡಿ ಮನೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಕೋಟೆನಾಡು ಚಿತ್ರದುರ್ಗ ಹಾಗು ಬಳ್ಳಾರಿ ಜಿಲ್ಲೆಗಳೆರೆಡು ಭೌಗೋಳಿಕವಾಗಿ ಬೇರೆ ಬೇರೆಯಾದರೂ ಮಾನಸಿಕವಾಗಿ ಒಂದೆಯಾಗಿವೆ. ಕೇವಲ ಇಲ್ಲಿ ಹಿಡಿತ ಸಾಧಿಸೋ ಪ್ರಶ್ನೆಯೇ ಇಲ್ಲ. ಅಲ್ಲದೇ ಇಲ್ಲಿನ ನಮ್ಮ ಜನರೆನ್ನೆಲ್ಲ ನೋಡಿ ನನಗೆ ಖುಷಿಯಾಗಿದೆ. ಈ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಬೇಕು. ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೂ ಒಳ್ಳೆಯದಾಗಲಿ ಎಂದು ಹೇಳಿದ್ರು.
Advertisement
Advertisement
ಅಷ್ಟೇ ಅಲ್ಲದೇ ನಾನು ಎಂದೂ ಕೂಡ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಟಿಕೆಟ್ ಕೇಳಿಲ್ಲ. ಆದರೆ ಬಿಜೆಪಿ ತೀರ್ಮಾನಿಸಿ ನನ್ನನ್ನು ಎಂಎಲ್‍ಸಿ ಮಾಡಿ ಸಚಿವರನ್ನಾಗಿಸಿತ್ತು. ಹೀಗಾಗಿ ಟಿಕೆಟ್ ನೀಡಿಲ್ಲವೆಂದು ಪಕ್ಷದ ಮೇಲೆ ಯಾವುದೇ ಬೇಸರವಿಲ್ಲ. ಜೊತೆಗೆ ಈ ಬಾರಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದ್ರು.
Advertisement
Advertisement
ಪಕ್ಷದ ಗೆಲುವಿಗಾಗಿ, ಪಕ್ಷದ ಬಲವರ್ಧನೆಗಾಗಿ ರಾಜ್ಯಾದ್ಯಂತ ಶ್ರೀರಾಮುಲು, ಯಡಿಯೂರಪ್ಪ ಓಡಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ನಾನು ಸಾಥ್ ನೀಡುವ ಉದ್ದೇಶದಿಂದ ಮೊಳಕಾಲ್ಮೂರಿನಲ್ಲಿ ಮನೆ ಮಾಡಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುತ್ತೇನೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರುತ್ತದೆ. ಜೊತಗೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗೋದು ಕೂಡ ಸತ್ಯ ಅಂದ್ರು. ಇದನ್ನೂ ಓದಿ: 101 ರೂ. ನೀಡಿ ಬಾಡಿಗೆ ಪಡೆದಿರುವ ರೆಡ್ಡಿ ತೋಟದ ಮನೆಯ ವಿಶೇಷತೆ ಇಲ್ಲಿದೆ