Connect with us

Dakshina Kannada

ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರು!

Published

on

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತೀರಾ ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ.

ಅರಣ್ಯ ಸಚಿವ ರಮಾನಾಥ ರೈ ಆಡಿದ ಅಶ್ಲೀಲ ಮಾತುಗಳನ್ನು ನೆನೆದು ಭಾಷಣದ ಆರಂಭದಲ್ಲೇ ಗಳಗಳನೇ ಅತ್ತಿದ್ದು, ತನ್ನ ವಿರುದ್ಧ ಅವಾಚ್ಯ ಶಬ್ಧ ಬಳಸಿ ನಿಂದಿಸಿದರೆಂಬ ವಿಚಾರವನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೊಂಡು ಅತ್ತುಬಿಟ್ಟಿದ್ದಾರೆ.

ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪೂಜಾರಿಯವರು ತನ್ನ ತಾಯಿ ಹೆಸರು ಹೇಳಿಕೊಂಡು ಗದ್ಗದಿತರಾಗಿದ್ದು, ಇದು ಸತ್ಯ ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಗರೋಡಿ. ನನ್ನ ತಾಯಿ ಚೆನ್ನಮ್ಮ. ತಾಯಿಯ ತಾಯಿ ನನ್ನ ಅಜ್ಜಿ ದೇಯಿ ಬೈದೆತಿ. ಅದೇ ರೀತಿ ಕೋಟಿ ಚೆನ್ನಯರ ತಾಯಿಯೂ ದೇಯಿ ಬೈದೆತಿ. ಹಾಗಾದ್ರೆ ರಮಾನಾಥ ರೈ ಹೇಳಿದಂತೆ ನನ್ನ ತಾಯಿ ಸೂಳೆ, ನಾನು ಸೂಳೆಯ ಮಗ ಎಂಬ ಪ್ರಶ್ನೆ ಮುಂದಿಟ್ಟು ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ.

ಮಂಗಳೂರಲ್ಲಿ ನಡೆದ ಕೋಟಿ-ಚೆನ್ನಯ್ಯ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಸಾವಿರಾರು ಜನ ಸೇರಿದ್ದ ಸಭೆಯಲ್ಲಿ 80 ವರ್ಷದ ಹಿರಿಯರಾದ ಜನಾರ್ದನ ಪೂಜಾರಿಯವರು ಅತ್ತು ಕರೆದಾಗ, ವೇದಿಕೆ ಮೇಲಿದ್ದ ಮಂಗಳೂರು ಪಾಲಿಕೆ ಮೇಯರ್ ಕವಿತಾ ಸನಿಲ್ ಕೂಡಾ ಕಣ್ಣೀರು ಹಾಕಿದ್ದಾರೆ. ವೇದಿಕೆಯಲ್ಲಿ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

ಬಂಟ್ವಾಳದಲ್ಲಿ ನಡೆದ ಬಿಲ್ಲವ ಸಂಘದ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿ ಮತ್ತು ಅವರ ಆಪ್ತ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಪಾಲ್ಗೊಂಡಿದ್ದರು. ಹರಿಕೃಷ್ಣ ಬಂಟ್ವಾಳ್ ವೇದಿಕೆಯಲ್ಲಿ ಮಾತನಾಡುತ್ತಾ, ಸಚಿವ ರಮಾನಾಥ ರೈ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಹಿರಿಯರಾದ ಜನಾರ್ದನ ಪೂಜಾರಿಗೆ ಅವಮಾನಿಸಿದ್ದು, ಇಡೀ ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನ. ಪೂಜಾರಿಯವರೆಂದ್ರೆ ತನಗೆ ತಂದೆ ಸಮಾನ. ರಮಾನಾಥ ರೈ ತಮ್ಮನ್ನು ತೀರಾ ಅವಾಚ್ಯವಾಗಿ ನಿಂದಿಸಿದ್ದು ಎಷ್ಟು ಬೇಸರವಾಗಿತ್ತು ಅಂದ್ರೆ ಅವರಿಗಷ್ಟೆ ಗೊತ್ತು ಅನ್ನುವಾಗ ಪೂಜಾರಿಯವರು ದುಃಖ ತಾಳಲಾರದೆ ವೇದಿಕೆಯಲ್ಲೇ ಅತ್ತು ಬಿಟ್ಟಿದ್ದರು.

ಕಂಕನಾಡಿಯ ಪ್ರಸಿದ್ಧ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರದಂದು ಹಸಿರು ಹೊರೆಕಾಣಿಕೆಯ ಉದ್ಘಾಟನೆಯ ಕಾರ್ಯಕ್ರಮ ನಡೆದಿತ್ತು. ಜನಾರ್ದನ ಪೂಜಾರಿ, ಶಾಸಕ ಜೆರ್ ಲೋಬೋ ಸೇರಿದಂತೆ ಚಿತ್ರನಟ ರಾಜಶೇಖರ್ ಕೋಟ್ಯಾನ್ ಕೂಡಾ ಭಾಗವಹಿಸಿದ್ದರು. ಜನಾರ್ದನ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ರಾಜಶೇಖರ್ ಕೋಟ್ಯಾನ್ ದೀಪ ಬೆಳಗಲು ಮುಂದಾಗಿದ್ದು, ಈ ಸಂಧರ್ಭದಲ್ಲಿ ಜನಾರ್ದನ ಪೂಜಾರಿ ಕೋಟ್ಯಾರ್ ರನ್ನು ತಡೆದಿದ್ದರು. ನನ್ನನ್ನು ಅವ್ಯಾಚವಾಗಿ ನಿಂದಿಸಿದವರ ಪರವಾಗಿ ನೀವು ಇದ್ದೀರಿ. ನೀವು ತಪ್ಪು ಮಾಡಿದ್ದೀರಿ. ನನ್ನ ತಾಯಿಯನ್ನೇ ಅವಮಾನಿಸಿದ ಜನರ ಹಿಂದೆ ಹೋಗಿದ್ದೀರಿ. ಇದನ್ನು ಕ್ಷಮಿಸಲು ಸಾಧ್ಯ ಇಲ್ಲ. ದೇವರಲ್ಲಿ ತಪ್ಪಾಯ್ತು ಎಂದು ಕ್ಷಮೆ ಕೇಳಿದ ಬಳಿಕ ಈ ಕ್ಷೇತ್ರಕ್ಕೆ ಬನ್ನಿ ಎಂದು ಕ್ಲಾಸ್ ತೆಗೆದುಕೊಂಡಿದ್ದರು. ಪೂಜಾರಿಯವರ ಈ ಮಾತನ್ನು ಕೇಳಿ ನೆರೆದಿದ್ದವರೆಲ್ಲಾ ವಿಚಲಿತರಾಗಿದ್ದರು. ಇದನ್ನು ಓದಿ: ನಾನು ಆರು ಬಾರಿ ಶಾಸಕನಾಗಲು ಮುಸ್ಲಿಂ ಸಮುದಾಯದ ಜಾತ್ಯತೀತ ನಿಲುವೇ ಕಾರಣ : ರಮಾನಾಥ ರೈ

https://www.youtube.com/watch?v=3tD5oKIc3EY

https://www.youtube.com/watch?v=PJ8h1JAxwDk

Click to comment

Leave a Reply

Your email address will not be published. Required fields are marked *