ಬೆಂಗಳೂರು: ಆಂಬಿಡೆಂಟ್ ವಂಚನೆ ಪ್ರಕರಣದ ಆರೋಪಿ ಜನಾರ್ದನ ರೆಡ್ಡಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ 1ನೇ ಎಸಿಎಂಎಂ ಕೋರ್ಟ್ ಬುಧವಾರಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಜನಾರ್ದನ ರೆಡ್ಡಿ ಜಾಮೀನು ಅರ್ಜಿಯ ವಿಚಾರಣೆ ಇಂದು 1ನೇ ಎಸಿಎಂಎಂ ಕೋರ್ಟ್ ನಲ್ಲಿ ನಡೆಯಿತು. ಈ ವೇಳೆ ನ್ಯಾಯಾಧೀಶರು ಸಿಸಿಬಿ ಅಧಿಕಾರಿಗಳನ್ನು ಹಾಗೂ ಸರ್ಕಾರಿ ಅಭಿಯೋಜಕರ ವಿರುದ್ಧ ಪ್ರಶ್ನೆ ಕೇಳಿದ್ದಾರೆ.
Advertisement
ವಾದ ಪ್ರತಿವಾದ ಹೇಗಿತ್ತು?:
ಸೂಕ್ತ ಸಾಕ್ಷಿಗಳಿಗಳಿಲ್ಲದೆ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಅವರು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಹೀಗಿರುವಾಗ ರಿಕವರಿ ಎಲ್ಲಿಂದ ಬರುತ್ತದೆ. ಐದನೇ ಆರೋಪ ಬಳಿ ಮಾತ್ರ ರಿಕವರಿ ಮಾಡಬೇಕು. ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಆರನೇ ಆರೋಪಿ ಆಗಿದ್ದಾರೆ. ಹೀಗಾಗಿ ಆರೋಪಿ ಜನಾರ್ದನ ರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಕಳಹಿಸಿ ಎಂದು ಪೊಲೀಸರೇ ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದಾರೆ. ಹೀಗಾಗಿ ವಿಚಾರಣೆ ಮುಗಿದಿದೆ ಎಂದು ಅರ್ಥವಲ್ಲವೇ ಎಂದು ರೆಡ್ಡಿ ಪರ ವಕೀಲ ಹನುಮಂತರಾಯ ಪ್ರಶ್ನಿಸಿ ವಾದಿಸಿದರು.
Advertisement
Advertisement
ಸರ್ಕಾರಿ ಅಭಿಯೋಜಕರಿಗೆ ಪ್ರಶ್ನಿಸಿದ ನ್ಯಾಯಾಧೀಶ ವೆಂಕಟಗಿರಿ ಅವರು, ಜನಾರ್ದನ ರೆಡ್ಡಿಗೆ ಮತ್ತು ಕಂಪನಿಗೆ ನೇರ ನಂಟು ಇದೆಯಾ? ಹಣವನ್ನು ಜನಾರ್ದನ ರೆಡ್ಡಿಗೆ ಯಾರಾದರೂ ಕೊಟ್ಟಿದ್ದಾರಾ? ನೇರವಾಗಿ ಯಾವುದಾದರೂ ಲಿಂಕ್ ಇದೆಯಾ? ಸುಮ್ಮನೆ ಆರೋಪ ಮಾಡಬೇಕು ಅಂತ ಮಾಡಬೇಡಿ. ನೇರವಾದ ಸಂಬಂಧ ಇರುವುದರ ಬಗ್ಗೆ ಮಾಹಿತಿ ನೀಡಿ. ಮಾಹಿತಿಯೇ ಇಲ್ಲದೆ ಬಂಧನ ಮಾಡಿರುವಿರಿ. ಹಣ ಕಳೆದುಕೊಂಡವರು ಯಾರು ಜನಾರ್ದನ ರೆಡ್ಡಿಗೆ ಕೊಟ್ಟಿದ್ದೇವೆ ಅಂತಾ ದೂರಿದ್ದಾರೆಯೇ ಎಂದು ಪ್ರಶ್ನಿಸಿದರು.
Advertisement
ಜನಾರ್ದನ ರೆಡ್ಡಿ ವಿರುದ್ಧ ಯಾವುದಾದರು ಒಂದೇ ಒಂದು ದೂರು ಇದ್ದರೆ ತೋರಿಸಿ. ಜಾರಿ ನಿರ್ದೇಶನಾಲಯ(ಇಡಿ) ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ ಆಗಿರುವುದು ಇದು. ಅದಕ್ಕೆ ಬೇರೆ ವಿಚಾರಣೆ ಮಾಡಬೇಕಿತ್ತು. ಅದರ ಬದಲು ಚೀಟಿಂಗ್ ಅಂತ ಎಫ್‍ಐಆರ್ ದಾಖಲು ಮಾಡಿರುವಿರಿ. ಎಲ್ಲಿಂದ ಎಲ್ಲಿಗೆ ಸಂಬಂಧ ಎಂದು ಸಿಸಿಬಿ ಅಧಿಕಾರಿಗಳ ತನಿಖಾ ವೈಖರಿಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ಹೊರ ಹಾಕಿದರು.
ಜನಾರ್ದನ ರೆಡ್ಡಿ ವಿರುದ್ಧ ಯಾವ ಸಾಕ್ಷಿಗಳನ್ನು ಸಿಸಿಬಿ ಅಧಿಕಾರಿಗಳು ಹಾಜರುಪಡಿಸಿಲ್ಲ. ಕೇವಲ ಹೇಳಿಕೆಗಳ ಆಧಾರದ ಮೇಲೆ ಬಂಧಿಸಿದ್ದಾರೆ. ಇದು ರಾಜಕೀಯ ವೈಷಮ್ಯ ತೋರಿಸುತ್ತದೆ. ಉದ್ದೇಶ ಪೂರ್ವಕವಾಗಿ ಪ್ರಕರಣದಲ್ಲಿ ಶಾಮೀಲು ಮಾಡಲಾಗಿದೆ ವಕೀಲ ಸಿ.ಎಚ್.ಹನುಮಂತ ರಾಯ ವಾದ ಮಂಡಿಸಿದರು.
ಪ್ರಕರಣದ ವಿಚಾರಣೆ ಬಳಿಕ ನ್ಯಾಯಾಧೀಶ ವೆಂಕಟಗಿರಿ ಅವರು, ಜಾಮೀನು ಅರ್ಜಿ ಆದೇಶವನ್ನು ನಾಳೆಗೆ ಕಾಯ್ದಿರಿಸಿದರು.
ನಾನು ವ್ಯವಹಾರದ ವಿಚಾರಕ್ಕೆ ಚಿನ್ನ ಪಡೆದಿದ್ದೇನೆ. ಸಾಲದ ರೂಪದಲ್ಲಿ ಪಡೆದುಕೊಂಡಿದ್ದು, ಸದ್ಯದಲ್ಲಿಯೇ ವಾಪಸ್ ಕೊಡುತ್ತೇನೆ ಎಂದು ಆರೋಪಿ ಅಲಿಖಾನ್ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews