ಕೊಪ್ಪಳ: ನನ್ನ ಪಕ್ಷದ ಬಗ್ಗೆ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಾಯಕರು ಏನೇ ಮಾತನಾಡಿದರೂ, ಅವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪಕ್ಷದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಏನೇ ಮಾತನಾಡಲಿ. ಕೆಆರ್‌ಪಿಪಿ ಪಕ್ಷ ದೇಶ, ರಾಜ್ಯದಲ್ಲಿ ಏನು ಎನ್ನುವುದನ್ನು ಮುಂದೆ ತೋರಿಸಿಕೊಡುತ್ತೇನೆ. ಅವರು ಏನಾದರೂ ಹೇಳಲಿ ನಾನು ತಲೆ ಕಡೆಸಿಕೊಳ್ಳಲ್ಲ ಎಂದು ಕಾಂಗ್ರೆಸ್, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಪಕ್ಷ ಘೋಷಣೆ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದಿದ್ದೇನೆ. ನಿನ್ನೆಯೇ ಕ್ಷೇತ್ರಕ್ಕೆ ಬರಬೇಕಿತ್ತು, ಆದರೆ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ತೆರಳಿದ್ದೆ. ಇಲ್ಲಿನ ಜನ ಬಹಳ ಪ್ರೀತಿ ವಿಶ್ವಾಸದಿಂದ ಸ್ವೀಕರಿಸಿದ್ದಾರೆ. ರಾಜ್ಯದ ಜನ ನನ್ನನ್ನು ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಅದು ಗೊತ್ತಾಗುತ್ತದೆ. ನಾನು ಯಾವುದೇ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಲ್ಲ. ಅವರು ಬಂದರೆ ಪ್ರೀತಿ ವಿಶ್ವಾಸದಿಂದ ಸ್ವಿಕರಿಸುತ್ತೇನೆ. 16 ಬಳಿಕ ಪಕ್ಷದ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹೊಸ ವರ್ಷಕ್ಕೆ ಸಿಹಿ ಸುದ್ದಿ- ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿದೆ ಬಿಎಂಟಿಸಿ
ಕೆಆರ್‌ಪಿಪಿ ಪಕ್ಷ ಬಿಜೆಪಿಯ ಬಿ ಟೀಂ ಎನ್ನೋ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಬಸವಣ್ಣನ ತತ್ವದ ಮೇಲೆ ನಡೆಯುವನು. ಒಮ್ಮೆ ಮುಂದಿಟ್ಟ ಹೆಜ್ಜೆ ಹಿಂದಿಡಲ್ಲ. ದೇಶದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಏನು ಎನ್ನೋದನ್ನು ತೋರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಮನೆಯಲ್ಲಿ ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಆಗಿರ್ತಾರೆ: ಶ್ರೀರಾಮುಲು