ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯ ಮಸುಕಾಗಿದೆ. ಕಾರಣ ಅಕ್ರಮ ಗಣಿಗಾರಿಕೆ ಕೇಸಲ್ಲಿ ಆರೋಪ ಮುಕ್ತರಾಗದ ಹೊರತು ಪಕ್ಷ ಸೇರ್ಪಡೆ ಬೇಡ ಅಂತಾ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಘಟಕಕ್ಕೆ ಮೌಖಿಕ ಆದೇಶ ನೀಡಿದೆ.
ಅಲ್ಲದೇ ರೆಡ್ಡಿ ಸಹೋದರ ಕರುಣಾಕರ್ ರೆಡ್ಡಿ ಕೂಡ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆಗೆ ರೆಡ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಮೂಲಕ ಜನಾರ್ದನ ರೆಡ್ಡಿಯ ಬಿಜೆಪಿ ಸೇರ್ಪಡೆ ಆಸೆಗೆ ತಣ್ಣೀರು ಬಿದ್ದಂತಾಗಿದೆ.
Advertisement
Advertisement
ಶ್ರೀರಾಮುಲು ಮೂಲಕ ಪಕ್ಷ ಸೇರಲು ಜನಾರ್ದನ ರೆಡ್ಡಿ ಸರ್ಕಸ್ ನಡೆಸುತ್ತಿದ್ದಾರೆ. ಆದ್ರೆ ರೆಡ್ಡಿ ಸೇರ್ಪಡೆಗೆ ಹೈಕಮಾಂಡ್ ಒಪ್ಪಿಲ್ಲ. ಜರ್ನಾದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿದ್ದಾರೆ, ಇನ್ನೂ ಪ್ರಕರಣ ಇತ್ಯರ್ಥ ಆಗಿಲ್ಲ. ನೋಟ್ ಬ್ಯಾನ್ ವೇಳೆ ಅದ್ದೂರಿಯಾಗಿ ಮಗಳ ಮದುವೆ ಮಾಡಿ ಟೀಕೆಗೂ ಒಳಗಾಗಿದ್ದರು.
Advertisement
ಹೀಗಾಗಿ ರೆಡ್ಡಿ ಪಕ್ಷ ಸೇರ್ಪಡೆಯಿಂದ ಪಕ್ಷ ಮುಜುಗರ ಅನುಭವಿಸಬೇಕಾಗುತ್ತೆ. ಮೊದಲು ಆರೋಪ ಮುಕ್ತರಾಗಲಿ, ನಂತರ ನೋಡೋಣ ಎಂದು ಹೈಕಮಾಂಡ್ ಹೇಳಿದೆ ಎನ್ನಲಾಗಿದೆ.