ಬೆಂಗಳೂರು: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರಿಗಾಗಿ ಮಾವಿನ ಮರ ಏರಿದ ವಿಡಿಯೋವೊಂದನ್ನು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿರುವ ತಮ್ಮ ಮಾವನ ಮನೆಗೆ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬದೊಡನೆ ತೆರೆಳಿದ್ದರು. ಈ ವೇಳೆ ಪತ್ನಿ ಜೊತೆಗೆ ಮಾವನವರ ತೋಟಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿದ್ದ ಮಾವಿನ ಮರವನ್ನು ಹತ್ತಿ ಪತ್ನಿಗಾಗಿ ಮಾವಿನ ಕಾಯಿಯನ್ನು ಕಿತ್ತುಕೊಟ್ಟಿದ್ದಾರೆ. ಜೊತೆಗೆ ತಮ್ಮ ಬಾಲ್ಯದ ದಿನಗಳನ್ನು ನೆನೆದಿದ್ದಾರೆ. ಅಲ್ಲದೆ ಈ ಖುಷಿ ಕ್ಷಣಗಳ ವಿಡಿಯೋವನ್ನು ಸೆರೆಹಿಡಿದಿದ್ದು, ವಿಡಿಯೋಗೆ `ಸವಿ ಸವಿ ನೆನಪು’ ಎಂಬ ಮೈ ಆಟೋಗ್ರಾಫ್ ಚಿತ್ರದ ಹಾಡನ್ನು ಹಾಕಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಪೋಸ್ಟ್ ನಲ್ಲಿ ಏನಿದೆ?
ನೆನಪಿಗೆ ಬಂದ ಆ ಬಾಲ್ಯದ ದಿನಗಳು. ನಿನ್ನೆ ಕುಟುಂಬದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಂಧ್ರಪ್ರದೇಶದಲ್ಲಿರುವ ನಮ್ಮ ಮಾವನವರ ಊರಿಗೆ ತೆರಳಿದ್ದೆ. ಅದೇ ಸಮಯದಲ್ಲಿ ನಮ್ಮ ಮಾವನವರ ತೋಟಕ್ಕೆ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣಾ ಜೊತೆಗೆ ಭೇಟಿ ಕೊಟ್ಟಿದ್ದೆ.
Advertisement
Advertisement
ತೋಟದಲ್ಲಿ 27 ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡಗಳು ಹೆಮ್ಮರವಾಗಿ ಬೆಳೆದು ಮಾವಿನ ಹಣ್ಣುಗಳಿಂದ ತುಂಬಿಕೊಂಡ ದೃಶ್ಯ ಮನ ಸೆಳೆಯಿತು. ಕೂಡಲೇ ನಾನೇ ಮರವನ್ನು ಹತ್ತಿ ಮಾವಿನ ಹಣ್ಣನ್ನು ಕಿತ್ತು ನನ್ನ ಶ್ರೀಮತಿಗೆ ನೀಡಿದೆ. ಮರವೇರಿ ಇಳಿದ ತಕ್ಷಣ ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಸೇರಿ ಮರವೇರಿ ಆಡುತ್ತಿದ್ದ ಆಟಗಳು, ಜೊತೆಯಲ್ಲಿದ್ದ ಸ್ನೇಹಿತರು ನೆನಪಿಗೆ ಬಂದರು ಎಂದು ಬರೆದು ವಿಡಿಯೋದೊಂದಿಗೆ ಅಪ್ಲೋಡ್ ಮಾಡಿದ್ದಾರೆ.
ಈ ಸ್ಪೆಷಲ್ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದು, 500ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.
https://www.facebook.com/galijanardhanreddy/videos/357986955067432/