ಸಿಎಂ ತರಾಟೆಗೆ ತೆಗೆದುಕೊಂಡ ಜನಾರ್ದನ ಪೂಜಾರಿ- ನಟ ಉಪೇಂದ್ರ ಬಗ್ಗೆ ಹೀಗಂದ್ರು

Public TV
1 Min Read
POOJARY CM UPPI

ಮಂಗಳೂರು: ನಟ ಉಪೇಂದ್ರ ಅವರಲ್ಲಿ ವಿಭಿನ್ನ ಆಲೋಚನೆಗಳಿವೆ. ಅವರ ಪ್ರಶ್ನೆಗಳಿಗೆ ನಾನೂ ಸೇರಿದಂತೆ ರಾಜ್ಯದ ಜನ ತಲೆಬಾಗಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪೇಂದ್ರರವರ ಹೊಸ ಪಕ್ಷಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಉಪೇಂದ್ರ ಅವರ ಆಲೋಚನೆಗಳು ಚೆನ್ನಾಗಿದೆ. ರಾಜಕೀಯದಲ್ಲಿ ಹೊಸತನ ಬೇಕು. ಇಲ್ಲದಿದ್ದಲ್ಲಿ ರಜಕಾರಣಿಗಳಿಗೆ ಯಾರ ಭಯವೂ ಇರೋದಿಲ್ಲ ಎಂದರು.

ಇದೇ ಸಂದರ್ಭ ಸಿಎಂ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡ ಪೂಜಾರಿ, ಬರಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರಿಗೆ ಭೇಟಿ ನೀಡಲು ಪುರುಸೋತ್ತಿಲ್ಲ. ರಾತ್ರಿ ಪೂರ್ತಿ ಅವರು ಏನು ಮಾಡುತ್ತಿದ್ದಾರೆ. ಇಸ್ಟೀಟ್ ಆಡುತ್ತಿದ್ದಾರೆಯೇ ಅಥವಾ ಬೇರ್ಯಾವುದಾದರೂ ಕೆಲಸ ಇದೆಯಾ ಎಂದು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದಿರೋದು ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಇಳಿಸಲು. ಅಮಿತ್ ಶಾ ಹೋದ ಎಲ್ಲಾ 16 ರಾಜ್ಯಗಳಲ್ಲೂ ಸಿಎಂಗಳನ್ನು ಕುರ್ಚಿಯಿಂದ ಕೆಳಗಿಳಿಸಿದ್ದಾರೆ. ಮುಂದೆ ನಿಮ್ಮ ಸರದಿ. ಸಚಿವ ಡಿ.ಕೆ. ಶಿವಕುಮಾರ್ ಮೇಲೆ ಒಳ್ಳೆಯ ಅಭಿಪ್ರಾಯಗಳು ಹೆಚ್ಚಾಗುತ್ತಿದ್ದು ಅವರೇ ಮುಂದಿನ ಮುಖ್ಯಮಂತ್ರಿಯಾಗೋದರಲ್ಲಿ ಸಂದೇಹವಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *