ಬೆಂಗಳೂರು: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಬಹುನಿರೀಕ್ಷಿತ ಆರ್‌ಆರ್‌ಆರ್ (RRR) ಸಿನಿಮಾದ ಸಾಂಗ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಮಾಲ್‍ನಲ್ಲಿ ನಡೆಯುತ್ತಿದೆ. ಸಿನಿಮಾ ನಿರ್ದೇಶಕ ರಾಜಮೌಳಿ ಅವರು ಸಿನಿಮಾ ಕುರಿತಾಗಿ ಇಂಟ್ರಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸಾಂಗ್ ಲಾಂಚ್‍ಗೆ RRR ನಿರ್ದೇಶಕ ರಾಜಮೌಳಿ ಹಾಗೂ ಪತ್ನಿ ರಮಾ ರಾಜಮೌಳಿ ಕೂಡ ಭಾಗಿಯಾಗಿದ್ದಾರೆ. ಜನವರಿ 7ಕ್ಕೆ ಖಖಖ ಸಿನಿಮಾ ರಿಲೀಸ್ ಆಗುತ್ತಿದೆ. ಲಹರಿ ಸಂಸ್ಥೆಯ ವೇಲು ಸೇರಿದಂತೆ ಕೆಲ ವಿತರಕರು ಹಾಗೂ ನಿರ್ಮಾಪಕರು ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ರಾಜಮೌಳಿ ಕನ್ನಡದಲ್ಲಿ ಮಾತು ಶುರು ಮಾಡಿದರು. ಎಲ್ಲರೂ ಚೆನ್ನಾಗಿದ್ದೀರಾ? ಎರಡು ವಿಷಯದಲ್ಲಿ ಕ್ಷಮಿಸಬೇಕು. ಒಂದು ಕನ್ನಡದಲ್ಲಿ ಅಷ್ಟಾಗಿ ಮಾತನಾಡಕ್ಕೆ ಬರಲ್ಲ, ನೀವೇ ಅಡ್ಜಸ್ಟ್ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ನಾನೇ ಬಂದು ಮಾತನಾಡುತ್ತಿದ್ದೇನೆ. ಕರ್ನಾಟಕದಲ್ಲಿ ಮುಂದಿನ ತಿಂಗಳು ಗ್ರ್ಯಾಂಡ್ ಆಗಿ ಟ್ರೇಲರ್ ರಿಲೀಸ್ ಮಾಡಿ, ಎಲ್ಲರಿಗೂ ಸಂದರ್ಶನ ಕೊಡುತ್ತೇನೆ ಎಂದರು.
ಕಂಪ್ಲೀಟ್ ಟೀಮ್ ಜೊತೆಗೆ ಮುಂದಿನ ತಿಂಗಳು ಕರ್ನಾಟಕಕ್ಕೆ ಬರುತ್ತೇವೆ. ಆರ್‌ಆರ್‌ಆರ್ ಸಿನಿಮಾದಲ್ಲಿ ಎಲ್ಲಾ ಆ್ಯಕ್ಷನ್‍ಗಳು ಸೂಪರ್ ಆಗಿದೆ. ಎಮೋಷನಲ್ ದೃಶ್ಯಗಳು ತುಂಬಾ ಇದೆ. ಬ್ಯಾಂಗ್ ಗ್ರೌಂಡ್ ಮ್ಯೂಸಿಕ್ ಸಹ ಚೆನ್ನಾಗಿದೆ. ಇವತ್ತು ನಿಮ್ಮ ಜೊತೆ ಅನುಭವ ಶೇರ್ ಮಾಡಿದಕ್ಕೆ ಖುಷಿಯಾಗುತ್ತಿದೆ ಎಂದು ಸಿನಿಮಾ ಕುರಿತಾಗಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಾಂಗ್ ಲಾಂಚ್ ಬಳಿಕ ರಾಜಮೌಳಿ ಅವರು ಅಪ್ಪು ಮನೆಗೆ ತೆರಳಲಿದ್ದಾರೆ.
ಆರ್‌ಆರ್‌ಆರ್ ಚಿತ್ರದ ಆಡಿಯೋ ಹಕ್ಕನ್ನು ಲಹರಿ ಹಾಗೂ ಟಿ ಸಿರೀಸ್ ಸಂಸ್ಥೆ ಭಾರೀ ಮೊತ್ತ ನೀಡಿ ಖರೀದಿಸಿದೆ. ಒಟ್ಟು 5 ಭಾಷೆಗಳಲ್ಲಿ ಆರ್‌ಆರ್‌ಆರ್ ತೆರೆಕಾಣುತ್ತಿದ್ದು, ಐದೂ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಹಾಗೂ ಟಿ ಸಿರೀಸ್ ತಮ್ಮ ಜೋಳಿಗೆಗೆ ಹಾಕಿಕೊಂಡಿವೆ. ಬಾಹುಬಲಿ ಚಿತ್ರದ ಆಡಿಯೋ ಹಕ್ಕನ್ನೂ ಇದೇ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿತ್ತು. ಇದೀಗ ಆರ್‌ಆರ್‌ಆರ್ ಬಾಹುಬಲಿ ದಾಖಲೆಯನ್ನೂ ಮುರಿದಿದೆ ಎನ್ನಲಾಗುತ್ತಿದೆ.
ಬರೋಬ್ಬರಿ 350 ಕೋಟಿ ರೂಪಾಯಿಗೂ ಅಧಿಕ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಆರ್‌ಆರ್‌ಆರ್, ಒಂದು ಐತಿಹಾಸಿಕ ಸಿನಿಮಾ. ಬ್ರಿಟಿಷರು ಹಾಗೂ ಹೈದರಾಬಾದ್ ನಿಜಾಮರ ವಿರುದ್ಧ ಹೋರಾಡಿದ ಅಲ್ಲೂರಿ ಸೀತಾರಾಮರಾಜು ಹಾಗೂ ಕೊಮರಮ್ ಭೀಮ್ ಎಂಬ ಇಬ್ಬರು ಧೀರ ಸ್ವಾತಂತ್ರ್ರ್ಯ ಸೇನಾನಿಗಳ ಜೀವನಾಧಾರಿತ ಚಿತ್ರ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್‍ಚರಣ್ ತೇಜ ಹಾಗೂ ಕೊಮರಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ನಟಿಸುತ್ತಿದ್ದು, ಬಾಲಿವುಡ್ ಆ್ಯಕ್ಷನ್ ಕಿಂಗ್ ಅಜಯ್ ದೇವ್ಗನ್, ನಟಿ ಆಲಿಯಾ ಭಟ್, ಸಮುತಿರಕಣಿ, ಶ್ರಿಯಾ ಸರಣ್, ಛತ್ರಪತಿ ಶೇಖರ್, ರಾಜೀವ್ ಕನಕಲ ಜೊತೆಗೆ ಆಲಿಸನ್ ಡೂಡಿ, ರೇ ಸ್ಟೀವನ್ಸನ್ ಸೇರಿದಂತೆ ಹಲವು ಹಾಲಿವುಡ್ ಕಲಾವಿದರೂ ಆರ್‌ಆರ್‌ಆರ್ ಚಿತ್ರದಲ್ಲಿ ನಟಿಸಿದ್ದಾರೆ.