ತಮಿಳು ಸಿನಿ ಪ್ರೇಮಿಗಳ ಆರಾಧ್ಯ ದೈವ ದಳಪತಿ ವಿಜಯ್ (Thalapathy Vijay) ಬಣ್ಣಕ್ಕೆ ವಿದಾಯ ಹೇಳಿದ ಬೆನ್ನಲ್ಲೇ ಅವರ ಕೊನೆಯ ಚಿತ್ರ ಎನ್ನಲಾದ `ಜನನಾಯಗನ್’ ಚಿತ್ರದ (Jana Nayagan Movie) ಮೇಲೆ ನಿರೀಕ್ಷೆ ಜೋರಾಗಿದೆ. ಮುಂದಿನ ವರ್ಷ ಜನವರಿಗೆ ಈ ಚಿತ್ರ ರಿಲೀಸ್ ಆಗೋದಕ್ಕೆ ಘೋಷಣೆಯಾಗಿದೆ. ಆದರೆ ಅದಕ್ಕೂ ಮುನ್ನ ಚಿತ್ರದ ಪ್ರಚಾರವನ್ನ ವಿಶ್ವಾದ್ಯಂತ ಮಾಡಲು ಪ್ಲ್ಯಾನ್ ಮಾಡಿದೆ ಚಿತ್ರತಂಡ.
ರಿಲೀಸ್ ವಿಶ್ವಾದ್ಯಂತ ಮಾಡುವ ಎಕ್ಸಾಂಪಲ್ ನೋಡಾಗಿದೆ. ಇದೀಗ ಚಿತ್ರದ ಪ್ರಚಾರವನ್ನ ದೊಡ್ಡ ಮಟ್ಟಕ್ಕೆ ಮಾಡಲು ಪ್ಲ್ಯಾನ್ ಮಾಡ್ಕೊಂಡ ಟೀಮ್ ಡಿಸೆಂಬರ್‌ನಲ್ಲಿ ಮಲೇಷಿಯಾ (Malaysia) ದೇಶದಲ್ಲಿ ಆಡಿಯೋ ರಿಲೀಸ್ ಮಾಡಲು ತಯಾರಿ ನಡೆದಿದೆ.
ಸಿನಿಮಾ ತೊರೆದು ರಾಜಕೀಯ ಪಕ್ಷ ಕಟ್ಟಿರುವ ವಿಜಯ್ ಕೊನೆಯದಾಗಿ ನಟಿಸಿರುವ ಚಿತ್ರ ಜನನಾಯಗನ್. ಈ ಚಿತ್ರವನ್ನ ಕನ್ನಡದ ಕೆವಿಎನ್ ಫಿಲಂಸ್ ನಿರ್ಮಿಸಿದೆ. ಚಿತ್ರೀಕರಣ ಸಂಪೂರ್ಣವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದೆ. ಇದೀಗ ಪ್ರಚಾರದ ರೂಪುರೇಶೆ ಸಿದ್ಧ ಮಾಡಿರುವ ತಂಡ ಮಲೇಷಿಯಾದಲ್ಲಿ ಡಿಸೆಂಬರ್ 27 ರಂದು ನಡೆಸುವ ತಯಾರಿ ಆಗಿದೆಯಂತೆ. ಈ ಚಿತ್ರಕ್ಕಾಗಿ ವಿಜಯ್ 275 ಕೋಟಿ ಸಂಭಾವನೆ ಪಡೆದಿರುವುದು ದೊಡ್ಡ ಸುದ್ದಿಯಾಗಿತ್ತು. ಇದೀಗ ಕೊನೆಯ ಚಿತ್ರ ಎನ್ನಲಾದ ಜನನಾಯಗನ್ ಸಿನಿಮಾ ಪ್ರಚಾರದಲ್ಲೂ ಅಬ್ಬರಿಸಿ ಬೊಬ್ಬಿರಿಯಲು ಪ್ಲ್ಯಾನ್ ಮಾಡ್ಕೊಂಡಿದ್ದಾರೆ ವಿಜಯ್.