ನವದೆಹಲಿ: ಪ್ರಧಾನಮಂತ್ರಿ ಜನ್‌ಧನ್ ಯೋಜನೆಗೆ (Jandhan Yojana) (ಪಿಎಂಜೆಡಿವೈ) ಹತ್ತು ವರ್ಷ ಪೂರ್ಣಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಜನ್‌ಧನ್ ಯೋಜನೆ (ಪಿಎಂಜೆಡಿವೈ) 2014 ರಲ್ಲಿ ಪ್ರಾರಂಭವಾಗಿತ್ತು. ಈ ಯೋಜನೆಯಿಂದಾಗಿ 53.1 ಕೋಟಿ ಬ್ಯಾಂಕ್ ಖಾತೆಗಳು ತೆರೆಯಲಾಗಿದ್ದು, 2.3 ಕೋಟಿ ರೂ. ಜಮೆಯಾಗಿದೆ. 30 ಕೋಟಿ ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 2028ರ ವೇಳೆಗೆ 80 ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಗುರಿ – ಉತ್ತರ ಪ್ರದೇಶದಲ್ಲಿ ತಯಾರಿ ಹೇಗಿದೆ?
Advertisement
Advertisement
ಇವತ್ತು ನಮಗೆ ಮಹತ್ವದ ಸಂದರ್ಭ. ಜನಧನ ಯೋಜನೆಗೆ 10 ವರ್ಷ ತುಂಬಿದೆ. ಈ ಯೋಜನೆಯಿಂದಾಗಿ ಹಣಕಾಸಿನ ವ್ಯವಹಾರದ ಒಳಗೊಳ್ಳುವಿಕೆಯಲ್ಲಿ ಉತ್ತೇಜನ ಕಂಡಿದೆ. ಕೋಟ್ಯಂತರ ಜನರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರು, ಯುವಕರು ಮತ್ತು ಬಡ ಕುಟುಂಬಗಳು ಇದರ ಉಪಯೋಗ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ – ಮೂವರು ಯೋಧರು ಹುತಾತ್ಮ
Advertisement
2014 ರಲ್ಲಿ ಪ್ರಾರಂಭವಾದ ಈ ಯೋಜನೆಯು ಯಶಸ್ವಿಯಾಗಿ 53.1 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆದಿದೆ, 2.3 ಲಕ್ಷ ಕೋಟಿ ರೂ.ಗಳಷ್ಟು ಠೇವಣಿಗಳನ್ನು ಸಂಗ್ರಹಿಸಿದೆ. ಗಮನಾರ್ಹವಾಗಿ, ಸುಮಾರು 30 ಕೋಟಿ ಫಲಾನುಭವಿಗಳು ಮಹಿಳೆಯರಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣದ ಮೇಲೆ ಯೋಜನೆಯ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಎಕ್ಸ್ ಪೊಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
Advertisement
PMJDY 53.13 ಕೋಟಿ ಖಾತೆಗಳೊಂದಿಗೆ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಅದರಲ್ಲಿ 55.6% ಮಹಿಳೆಯರು ಹೊಂದಿದ್ದಾರೆ. ಯೋಜನೆಯು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಗಣನೀಯ ಉಪಸ್ಥಿತಿಯನ್ನು ಹೊಂದಿದೆ. ಎಲ್ಲಾ ಖಾತೆಗಳಲ್ಲಿ 66.6% ನಷ್ಟಿದೆ. ಠೇವಣಿ ಬ್ಯಾಲೆನ್ಸ್‌ಗಳು 2,31,236 ಕೋಟಿ ರೂ.ಗೆ ಏರಿಕೆಯಾಗಿದ್ದು, ಯೋಜನೆ ಪ್ರಾರಂಭವಾದಾಗಿನಿಂದ ಠೇವಣಿಗಳಲ್ಲಿ 15 ಪಟ್ಟು ಹೆಚ್ಚಳ ಮತ್ತು ಖಾತೆಗಳಲ್ಲಿ 3.6 ಪಟ್ಟು ಏರಿಕೆಯಾಗಿದೆ. ಪ್ರತಿ ಖಾತೆಯ ಸರಾಸರಿ ಠೇವಣಿ ಈಗ 4,352 ರೂ. ಆಗಿದೆ.
ಪಿಎಂಜೆಡಿವೈ ಯೋಜನೆ ಯಶಸ್ಸು ಕಂಡಿದೆ. ಈ ಯೋಜನೆಯಿಂದ ಉಪಯೋಗಗಳು ಪಡೆದ ಮತ್ತು ಈ ಯೋಜನೆಯಲ್ಲಿ ಒಳಗೊಂಡ ಎಲ್ಲರಿಗೂ ಅಭಿನಂದನೆಗಳು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ಇದನ್ನೂ ಓದಿ: ಭಾರತದ ರೈಲು, ಪೆಟ್ರೋಲ್ ಪೈಪ್‌ಲೈನ್‌ಗಳ ಮೇಲೆ ದಾಳಿ ಮಾಡಿ -ರಾಮೇಶ್ವರಂ ಕೆಫೆ ಸ್ಫೋಟ ಸಂಚುಕೋರನಿಂದ ಕರೆ
ಈ ಯೋಜನೆಯಿಂದ ಭಾರತೀಯರಿಗೆ ಉಳಿತಾಯ ಮತ್ತು ಠೇವಣಿ ಖಾತೆಗಳು ತೆರೆಯುವಲ್ಲಿ, ಕ್ರೆಡಿಟ್, ವಿಮೆ, ಹಣ ರವಾನೆ ಮತ್ತು ಪಿಂಚಣಿಗೆ ಸಹಾಯವಾಗಲಿದೆ. ಇದರಿಂದಾಗಿ ಕೊಟ್ಯಂತರ ಜನರಿಗೆ ಸಹಾಯವಾಗಿದೆ. ಭಾರತದ ಆರ್ಥಿಕತೆ ಹೆಚ್ಚಳವಾಗುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಇದನ್ನೂ ಓದಿ: ಕೊಯ್ನಾ ಜಲಾಶಯ ಸಂಪೂರ್ಣ ಭರ್ತಿ – ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ