ನವದೆಹಲಿ: ಜನ್‍ಧನ ಖಾತೆ ಆರಂಭದಿಂದ ಗ್ರಾಮೀಣ ಭಾಗದ ಜನರ ಆದಾಯದ ಉಳಿತಾಯ ಪ್ರಮಾಣ ಹೆಚ್ಚಳವಾಗಿದ್ದು. ಅದರಲ್ಲೂ ಮದ್ಯ, ತಂಬಾಕು ಉತ್ಪನ್ನ ಕೊಳ್ಳುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಆರ್ಥಿಕ ಸಂಶೋಧನಾ ವಿಭಾಗ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದೆ. ಗ್ರಾಮೀಣ ಭಾಗದಲ್ಲಿ ಪ್ರಧಾನ ಮಂತ್ರಿ ಜನ್‍ಧನ್ ಯೋಜನೆ(ಪಿಎಂಜೆಡಿವೈ)ಯ ಮೂಲಕ ಬ್ಯಾಂಕ್‍ನಲ್ಲಿ ಖಾತೆಯನ್ನು ಆರಂಭಸಿದ ನಂತರ ಜನರ ಉಳಿತಾಯ ಪ್ರಮಾಣ ಹೆಚ್ಚಳವಾಗಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕ ಹಣಕಾಸು ಮತ್ತು ನೀತಿ ರಾಷ್ಟ್ರೀಯ ಸಂಸ್ಥೆಯ ಪ್ರಾಧ್ಯಾಪಕರಾದ ಎನ್.ಆರ್.ಭಾನುಮೂರ್ತಿ ವ್ಯಕ್ತಪಡಿಸಿದ್ದಾರೆ.
Advertisement
ಸಮೀಕ್ಷೆಯಲ್ಲಿ ತಿಳಿದು ಬಂದಿರುವ ಮತ್ತೊಂದು ಪ್ರಮುಖ ಅಂಶವೆಂದರೆ ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಪ್ರಮಾಣವು ಇಳಿಕೆಯಾಗಿದೆ. ಪಿಎಂಜೆಡಿವೈ ಯೋಜನೆಯಿಂದ ದೇಶಾದ್ಯಂತ ತೆರೆಯಲಾಗಿರುವ ಒಟ್ಟು ಖಾತೆಗಳಲ್ಲಿ ಶೇ.50 ರಷ್ಟು ಖಾತೆಗಳು ಗ್ರಾಮೀಣ ಭಾಗದಲ್ಲಿ ಆರಂಭವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಎಲ್ಲರಿಗೂ ಬ್ಯಾಂಕ್‍ಗಳ ಉತ್ತಮ ಸೌಲಭ್ಯ ಲಭ್ಯವಾಗುತ್ತಿದೆ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
Jan Dhan bank a|cs are helping villagers stay sober, and save more money as per SBI study https://t.co/AFuPKLiYLZ pic.twitter.com/T7L1swfMiR
— Acche Din (@AccheDin_) October 16, 2017
Advertisement
ಕಳೆದ ನವೆಂಬರ್ ತಿಂಗಳಿಗೆ ಕೊನೆಯ ವೇಳೆ ಸುಮಾರು 30 ಕೋಟಿಗೂ ಹೆಚ್ಚು ಜನ್‍ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ ಪ್ರಮುಖವಾಗಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ತೀರ್ಮಾನವನ್ನು ಪ್ರಕಟಿಸಿದ ನಂತರ ಅತೀ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ ಎಂಬುವುದು ಗಮನಿಸಬೇಕಾದ ಅಂಶವಾಗಿದೆ.
Advertisement
ದೇಶಾದ್ಯಂತ ತೆರೆಯಲಾಗಿರುವ ಒಟ್ಟು ಖಾತೆಗಳಲ್ಲಿ ಶೇ.75 ರಷ್ಟು ಪ್ರಮಾಣ ಆಂದರೆ 23 ಕೋಟಿ ಬ್ಯಾಂಕ್ ಖಾತೆಗಳನ್ನು ಕೇವಲ 10 ರಾಜ್ಯಗಳಲ್ಲಿ ಹಂಚಿಕೊಂಡಿವೆ. ಇದರಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು ಸುಮಾರು 4.7 ಕೋಟಿ ಖಾತೆಗಳನ್ನು ಆರಂಭಿಸಲಾಗಿದೆ. ಇನ್ನುಳಿದಂತೆ ಬಿಹಾರ ರಾಜ್ಯದಲ್ಲಿ 3.2 ಕೋಟಿ ಖಾತೆಗಳು, ಪಶ್ಚಿಮ ಬಂಗಾಳದಲ್ಲಿ 2.9 ಕೋಟಿ ಖಾತೆಗಳನ್ನು ತೆರೆಯಲಾಗಿದೆ.
ಜನ್‍ಧನ್ ಯೋಜನೆ ಜಾರಿಗೆ ಬಂದ ನಂತರ ಕರ್ನಾಟಕದಲ್ಲಿ ತೆರೆಯಲಾದ ಒಟ್ಟು ಖಾತೆಗಳಲ್ಲಿ ಶೇ.61 ರಷ್ಟು ಖಾತೆಗಳು ಪಿಎಂಜೆಡಿವೈ ಯೋಜನೆಯ ಅಡಿಯಲ್ಲಿ ಆರಂಭಿಸಿರುವ ಖಾತೆಗಳಾಗಿದ್ದು, ದೇಶಾದ್ಯಂತ ಆರಂಭಿಸಲಾದ ಒಟ್ಟು ಖಾತೆಗಳ ಪ್ರಮಾಣದಲ್ಲಿ ಕರ್ನಾಟಕವು ಆರನೇ ಸ್ಥಾನವನ್ನು ಪಡೆದಿದೆ.
ಜನ್‍ಧನ್ ಖಾತೆಯ ಮೂಲಕ ಆರಂಭಿಸಲಾಗಿರುವ ಬ್ಯಾಂಕ್ ಖಾತೆಗಳ ಪರಿಣಾಮವಾಗಿ ಗ್ರಾಮೀಣ ಭಾಗದ ಜನರ ಉಳಿತಾಯ ಪ್ರಮಾಣ ಹೆಚ್ಚಳವಾಗಿದ್ದು, ಜನರು ಮಾದಕ ದ್ರವ್ಯಗಳನ್ನು ಕೊಳ್ಳಲು ಖರ್ಚು ಮಾಡುವ ಪ್ರಮಾಣವು ಕಡಿಮೆಯಾಗಿದೆ ಎಂದು ಸಂಶೋಧನೆಯ ಕೈಗೊಂಡಿರುವ ಎಸ್‍ಬಿಐ ಆರ್ಥಿಕ ವಿಭಾಗದ ಮುಖ್ಯಸ್ಥ ಸೌಮ್ಯ ಕಾಂತಿ ಘೋಷ್ ತಿಳಿಸಿದ್ದಾರೆ.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ್ ರಾಜ್ಯಗಳಲ್ಲಿ ಮನೆಯಲ್ಲಿ ಆರೋಗ್ಯಕ್ಕೆ ಸಂಬಂಧಸಿದ ವೈದ್ಯಕೀಯ ವೆಚ್ಚಗಳು ಅಧಿಕವಾಗಿದೆ ಎಂಬ ಅಂಶವು ಬೆಳಕಿಗೆ ಬಂದಿದೆ. ಅಲ್ಲದೇ ನೋಟು ನಿಷೇಧದ ನಂತರ ಜನರು ಖಚ್ಚು ಮಾಡುವ ವಿಧಾನದಲ್ಲೂ ಸುಧಾರಣೆಗಳಾಗಿವೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರೊ. ನಾಬ್ ಸೇನ್ ತಿಳಿಸಿದರು.
ಸಂಶೋಧನೆಯ ಮುಂದಿನ ಭಾಗವಾಗಿ ಜನ್‍ಧನ್ ಖಾತೆಯಲ್ಲಿ ಉಳಿತಾಯವಾದ ಹಣದ ಚಲಾವಣೆಯ ಪ್ರಮಾಣದ ಕುರಿತು ಹೆಚ್ಚಿನ ಅಧ್ಯಯನಗಳನ್ನು ನಡೆಸಲಾಗುವುದು. ಅಲ್ಲದೇ ಮಾರುಕಟ್ಟೆಯ ಹಲವು ಉತ್ಪನ್ನಗಳ ಮೌಲ್ಯಗಳ ಮೇಲು ಇದರ ಪ್ರಭಾವ ಉಂಟಾಗಿದೆ ಎಂದು ಇನ್ಫೋಸಿಸ್ ನ ಅಂತರಾಷ್ಟ್ರೀಯ ಆರ್ಥಿಕ ಸಂಬಂಧಗಳ ಪ್ರ್ರಾಧ್ಯಾಪಕರಾದ ಅಶೋಕ್ ಗುಲಾಟಿ ತಿಳಿಸಿದರು.