ಕನ್ನಡದಲ್ಲಿ ಭೂಕೈಲಾಸ, ಸಾಕ್ಷಾತ್ಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಜಮುನಾ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 86ರ ವಯಸ್ಸಿನ ಹಿರಿಯ ನಟಿ ಹೈದರಾಬಾದ್ ನಲ್ಲಿ ನೆಲೆಸಿದ್ದರು. ವಯೋಸಹಜ ಕಾಯಿಲೆಗಳು ಅವರನ್ನು ಹೈರಾಣು ಮಾಡಿದ್ದವು. ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್ ನಿವಾಸದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
Advertisement
1953ರಲ್ಲಿ ತೆರೆಕಂಡ ಪುಟ್ಟಿಲ್ಲು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದವರು ಜಮುನಾ. ಆನಂತರ ತೆಲುಗು, ತಮಿಳು, ಹಿಂದಿ, ಕನ್ನಡ ಹೀಗೆ ನಾನಾ ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ದಕ್ಷಿಣದ ಅಷ್ಟೂ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಡಾ.ರಾಜ್ ಕುಮಾರ್ ಜೊತೆ ಭೂ ಕೈಲಾಸ ಮತ್ತು ಸಾಕ್ಷಾತ್ಕಾರ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು
Advertisement
Advertisement
ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಜಮುನಾ, ಎನ್.ಟಿ.ಆರ್. ಜಗ್ಗಯ್ಯ ಸೇರಿದಂತೆ ಆ ಕಾಲದ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಇವರದ್ದು. ದೊಂಗ ರಾಮುಟು, ಗುಂಡಮ್ಮ ಕಥ, ತೆನಾಲಿ ರಾಮಕೃಷ್ಣ ಹೀಗೆ ಇವರ ನಟನೆಯ ಸೂಪರ್ ಹಿಟ್ ಚಿತ್ರಗಳು. ಪುಟ್ಟಣ್ಣ ಕಣಗಾಲ್ ನಿರ್ದೇಶನ ಚಿತ್ರಗಳಲ್ಲೂ ಇವರು ನಟಿಸಿದ್ದಾರೆ.
Advertisement
ಸಿನಿಮಾಗಳಲ್ಲಿ ಮಾತ್ರವಲ್ಲ ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಜಮುನಾ, 1980ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಅವರು 1989ರಲ್ಲಿ ರಾಜಮಂಡ್ರಿಗೆ ಎಂಪಿ ಆಗಿ ಆಯ್ಕೆಯಾದರು. 1990ರಲ್ಲಿ ಜನತಾ ಪಕ್ಷದ ಪರವಾಗಿಯೂ ಅವರು ಕೆಲಸ ಮಾಡಿದರು. ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಯಶಸ್ಸಿ ಕಂಡ ಹಿರಿಯ ಜೀವವಿದು. ನಟಿಯ ಅಗಲಿಕೆಗೆ ಚಿತ್ರೋದ್ಯಮ ಕಂಬಿನಿ ಮಿಡಿದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k