Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸುಮಲತಾಗೆ ‘ಬ್ಯೂಟಿ ಕ್ವೀನ್’ ಕಿರೀಟ ಹಾಕಿದ್ದರು ಜಮುನಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಸುಮಲತಾಗೆ ‘ಬ್ಯೂಟಿ ಕ್ವೀನ್’ ಕಿರೀಟ ಹಾಕಿದ್ದರು ಜಮುನಾ

Cinema

ಸುಮಲತಾಗೆ ‘ಬ್ಯೂಟಿ ಕ್ವೀನ್’ ಕಿರೀಟ ಹಾಕಿದ್ದರು ಜಮುನಾ

Public TV
Last updated: January 27, 2023 11:56 am
Public TV
Share
2 Min Read
FotoJet 5 21
SHARE

ಭಾರತೀಯ ಸಿನಿಮಾ ರಂಗದ ಹಿರಿಯ ನಟಿ ಜಮುನಾ (Jamuna) ನಿಧನದ ಹಿನ್ನೆಲೆಯಲ್ಲಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ ನಟಿ ಸುಮಲತಾ ಅಂಬರೀಶ್ (Sumalatha Ambarish). 43 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿರುವ ಅವರು ತಮ್ಮ 15ನೇ ವಯಸ್ಸಿನಲ್ಲಿ ‘ಬ್ಯೂಟಿ ಕ್ವೀನ್’ ಕಿರೀಟ ಧರಿಸಿದಾಗ, ಅದನ್ನು ಜಮುನಾ ಅವರೇ ಹಾಕಿದ್ದರು ಮತ್ತು ತಮಗೆ ಉತ್ತಮ ಭವಿಷ್ಯವಿದೆ ಎಂದು ನುಡಿದಿದ್ದರು ಎನ್ನುವುದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

FotoJet 2 46

ಫೇಸ್ ಬುಕ್ ನಲ್ಲಿ ಸಂತಾಪಗಳನ್ನು ಹಂಚಿಕೊಂಡಿರುವ ಸುಮಲತಾ ಅಂಬರೀಶ್, ‘ಬಹುಭಾಷಾ ನಟಿ ಜಮುನಾ ಅವರು ಅಗಲಿದ ಸುದ್ದಿ ಅತೀವ ದುಃಖವನ್ನು ತಂದಿದೆ. ಕನ್ನಡವೂ ಸೇರಿದಂತೆ ಅವರು ಹಲವು ಭಾಷೆಗಳಲ್ಲಿ ನಟಿಸಿದ ಮೇರುತಾರೆ. ನಟಿಯಾಗಿ, ರಾಜಕಾರಣಿಯಾಗಿ ಅವರು ಈ ನೆಲಕ್ಕೆ ಕೊಟ್ಟಿರುವ ಕೊಡುವೆ ಅಪಾರ. ತಾಯಿಗುಣದ ಜಮುನಾ ಅವರ ನಿಧನಕ್ಕೆ ನನ್ನ ಸಂತಾಪಗಳು. ಅವರ ಸಿನಿಮಾ ಮತ್ತು ಸಮಾಜಮುಖಿ ಕೆಲಸಗಳು ಯಾವತ್ತಿಗೂ ಜೀವಂತ. ಜಮುನಾ ಅವರ ಜೊತೆ ನನಗೆ ತೀರಾ ಆತ್ಮೀಯ ಬಾಂಧವ್ಯವಿತ್ತು. 43 ವರ್ಷಗಳ ಹಿಂದೆ ಆಗ ನನಗೆ 15 ವರ್ಷ. ಅವರು ನನಗೆ ಬ್ಯೂಟಿ ಕ್ವೀನ್ ಕಿರೀಟ ತೊಡಿಸಿ ಹಾರೈಸಿದ್ದರು. ನಿನಗೆ ಒಳ್ಳೆಯ ಭವಿಷ್ಯವಿದೆ ಎಂದು ನನ್ನ ಜೀವನದ ಬಗ್ಗೆ ಭವಿಷ್ಯ ನುಡಿದ ಮೊದಲ ನಟಿ ಅವರಾಗಿದ್ದರು’ ಎಂದು ಬರೆದುಕೊಂಡಿದ್ದಾರೆ.

FotoJet 6 18

ಕನ್ನಡದಲ್ಲಿ ಭೂಕೈಲಾಸ, ಸಾಕ್ಷಾತ್ಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಜಮುನಾ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 86ರ ವಯಸ್ಸಿನ ಹಿರಿಯ ನಟಿ ಹೈದರಾಬಾದ್ ನಲ್ಲಿ ನೆಲೆಸಿದ್ದರು. ವಯೋಸಹಜ ಕಾಯಿಲೆಗಳು ಅವರನ್ನು ಹೈರಾಣು ಮಾಡಿದ್ದವು. ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್ ನಿವಾಸದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ನಟ ಭಯಂಕರ: ಮೊದಲು ಟ್ರೈಲರ್ ನೋಡಿ, ಆನಂತರ ಸಿನಿಮಾ ನೋಡ್ಬೇಕೋ ಬೇಡ್ವೊ ಡಿಸೈಡ್ ಮಾಡಿ

FotoJet 1 54

1953ರಲ್ಲಿ ತೆರೆಕಂಡ ಪುಟ್ಟಿಲ್ಲು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದವರು ಜಮುನಾ.  ಆನಂತರ ತೆಲುಗು, ತಮಿಳು, ಹಿಂದಿ, ಕನ್ನಡ ಹೀಗೆ ನಾನಾ ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ದಕ್ಷಿಣದ ಅಷ್ಟೂ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಡಾ.ರಾಜ್ ಕುಮಾರ್ ಜೊತೆ ಭೂ ಕೈಲಾಸ ಮತ್ತು ಸಾಕ್ಷಾತ್ಕಾರ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.

FotoJet 73

ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಜಮುನಾ, ಎನ್.ಟಿ.ಆರ್. ಜಗ್ಗಯ್ಯ ಸೇರಿದಂತೆ ಆ ಕಾಲದ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಇವರದ್ದು. ದೊಂಗ ರಾಮುಟು, ಗುಂಡಮ್ಮ ಕಥ, ತೆನಾಲಿ ರಾಮಕೃಷ್ಣ ಹೀಗೆ ಇವರ ನಟನೆಯ ಸೂಪರ್ ಹಿಟ್ ಚಿತ್ರಗಳು. ಪುಟ್ಟಣ್ಣ ಕಣಗಾಲ್ ನಿರ್ದೇಶನ ಚಿತ್ರಗಳಲ್ಲೂ ಇವರು ನಟಿಸಿದ್ದಾರೆ.

FotoJet 3 38

ಸಿನಿಮಾಗಳಲ್ಲಿ ಮಾತ್ರವಲ್ಲ ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಜಮುನಾ, 1980ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಅವರು 1989ರಲ್ಲಿ ರಾಜಮಂಡ್ರಿಗೆ ಎಂಪಿ ಆಗಿ ಆಯ್ಕೆಯಾದರು. 1990ರಲ್ಲಿ ಜನತಾ ಪಕ್ಷದ ಪರವಾಗಿಯೂ ಅವರು ಕೆಲಸ ಮಾಡಿದರು. ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಯಶಸ್ಸಿ ಕಂಡ ಹಿರಿಯ ಜೀವವಿದು. ನಟಿಯ ಅಗಲಿಕೆಗೆ ಚಿತ್ರೋದ್ಯಮ ಕಂಬಿನಿ ಮಿಡಿದಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:beautyJamunaNidhanaQueenSumalatha Ambarishಕ್ವೀನ್ಜಮುನಾನಿಧನಬ್ಯೂಟಿಸುಮಲತಾ ಅಂಬರೀಶ್
Share This Article
Facebook Whatsapp Whatsapp Telegram

Cinema news

dhanush 1
ಸ್ಟಾರ್ ನಟಿಯನ್ನು ಮದ್ವೆಯಾಗಲು ಸಿದ್ಧವಾದ ಧನುಷ್!
Cinema Latest South cinema
bigg boss vulture remarks
ರಣಹದ್ದು ಬಗ್ಗೆ ತಪ್ಪಾದ ಮಾಹಿತಿ; ಬಿಗ್ ಬಾಸ್ ಪ್ರೋಗ್ರಾಂ ಹೆಡ್‌ಗೆ ಅರಣ್ಯ ಇಲಾಖೆಯಿಂದ ತಿಳುವಳಿಕೆ ನೋಟಿಸ್
Cinema Latest Main Post TV Shows
Anup Rubens
ಸೀತಾ ಪಯಣದ ಮೂಲಕ ಮತ್ತೆ ಸದ್ದು ಮಾಡಿದ ಅನೂಪ್ ರೂಬೆನ್ಸ್
Cinema Latest Sandalwood Top Stories
AMB Cinemas 2
ಬೆಂಗಳೂರಿನ ಕಪಾಲಿ ಥಿಯೇಟರ್ ಜಾಗದಲ್ಲಿ ಮಹೇಶ್ ಬಾಬು `ಎಎಂಬಿ ಸಿನಿಮಾಸ್’.. ಇದರ ಸ್ಪೆಷಾಲಿಟಿ ಏನು?
Bengaluru City Cinema Latest Main Post South cinema

You Might Also Like

GPS
Districts

ವಿಜಯಪುರದಲ್ಲಿ ಟ್ರ‍್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಪತ್ತೆ

Public TV
By Public TV
4 minutes ago
HC MAHADEVAPPA
Bengaluru City

ಕುಮಾರಸ್ವಾಮಿ ಕಾಲದಲ್ಲಿ ಅವ್ರೇ ಮಹಿಳಾ ಅಧಿಕಾರಿಗೆ ಹೆದರಿಸಿದ್ದರು: ಹೆಚ್‌.ಸಿ ಮಹದೇವಪ್ಪ

Public TV
By Public TV
15 minutes ago
BMC Election Result Uddhav Thackerays Shiv Senas 30 year control collapse
Latest

ಠಾಕ್ರೆ ಕೋಟೆ ಧ್ವಂಸ – 30 ವರ್ಷದ ಬಳಿಕ ಮುಂಬೈಗೆ ಬಿಜೆಪಿ ಮೇಯರ್‌?

Public TV
By Public TV
30 minutes ago
Nikhil Kumaraswamy
Bengaluru City

ಶಿಡ್ಲಘಟ್ಟ ಕೇಸ್‌ನಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ಕ್ರಮ ಆಗದಿದ್ದರೆ ಬೀದಿಗಿಳಿದು ಹೋರಾಟ: ನಿಖಿಲ್ ಕುಮಾರಸ್ವಾಮಿ

Public TV
By Public TV
1 hour ago
Nikhil Kumaraswamy 1
Bengaluru City

ಜಿಬಿಎ, ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ದೆಹಲಿಯಲ್ಲಿ ತೀರ್ಮಾನ: ನಿಖಿಲ್ ಕುಮಾರಸ್ವಾಮಿ

Public TV
By Public TV
2 hours ago
Shrikant Pangarkar
Latest

ಮಹಾರಾಷ್ಟ್ರ ಚುನಾವಣೆ| ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗೆ ಜಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?