ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪೂಂಛ್ (Poonch) ಜಿಲ್ಲೆಯಲ್ಲಿ ಉಗ್ರರು ಅಡಗಿದ್ದ ತಾಣ ಪತ್ತೆಯಾಗಿದ್ದು, ಭದ್ರತಾ ಪಡೆಗಳು ಇಂದು (ಅ.26) ರಂದು ಧ್ವಂಸಗೊಳಿಸಿವೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಪೂಂಛ್ ಅಡುಗುದಾಣದಲ್ಲಿ ಗ್ರೆನೇಡ್‌ಗಳು ಹಾಗೂ ಸ್ಫೋಟಕಗಳು ಪತ್ತೆಯಗಿದ್ದು, ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದೆ.ಇದನ್ನೂ ಓದಿ: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ – ಸಿಪಿವೈ
ಜಮ್ಮುವಿನ ಮೇಂಧರ್ ಉಪವಿಭಾಗದ ಬಲನೋಯ್ ಸೆಕ್ಟರ್‌ನಲ್ಲಿ ಶೋಧ ಕಾರ್ಯದ ವೇಳೆ ಈ ಅಡಗುದಾಣ ಪತ್ತೆಯಾಗಿದ್ದು, ಬಳಿಕ ಭದ್ರತಾ ಪಡೆಗಳು ಅದನ್ನು ಧ್ವಂಸಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡರು.
ಇದೇ ವೇಳೆ ಭದ್ರತಾ ಸಿಬ್ಬಂದಿ ಮನ್‌ಕೋಡಿ ಸೆಕ್ಟರ್ ಸಮೀಪ ಗಸ್ತು ತಿರುಗುವ ವೇಳೆ ತುಕ್ಕು ಹಿಡಿರುವ ಮೋರ್ಟರ್ ಶೆಲ್ ಕೂಡ ಪತ್ತೆಯಾಗಿದೆ. ಧ್ವಂಸಗೊಳಿಸಿದ ಬಳಿಕ ಶೆಲ್‌ನ್ನು ಸುರಕ್ಷಿತ ಸ್ಥಳದಲ್ಲಿ ಸ್ಫೋಟಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಕಾರವಾರ | ದೇವಬಾಗ್ ಕಡಲ ತೀರದಲ್ಲಿ ನಟ ರಮೇಶ್ ಅರವಿಂದ್