ನವದೆಹಲಿ: ಜಮ್ಮು-ಕಾಶ್ಮಿರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದ ದಿನ ಪ್ರಧಾನಿ ಮೋದಿಯವರು ಡಿಸ್ಕವರಿ ಚಾನೆಲ್‍ನ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದರು.
ಬರೋಬ್ಬರೀ 4 ಗಂಟೆಗಳ ಶೂಟಿಂಗ್, ಸಫಾರಿ, ದೋಣಿ ವಿಹಾರದಲ್ಲಿದ್ದ ಪ್ರಧಾನಿ, `ಹುಲಿಗಳನ್ನು ಸಂರಕ್ಷಿಸಿ’ ಮತ್ತು `ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ’ ಬಗ್ಗೆ ಸಾಕ್ಷ್ಯಚಿತ್ರದಲ್ಲಿ ತೊಡಗಿಕೊಂಡಿದ್ದರು. ಡಿಸ್ಕವರಿ ಚಾನೆಲ್‍ನ ಸಾಕ್ಷ್ಯಚಿತ್ರದಲ್ಲಿ 20 ನಿಮಿಷ ಮೋದಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಉತ್ತರಾಖಂಡ್‍ನ ರಾಮಗಂಗಾ ನದಿ ತಟದಲ್ಲಿರುವ ಜಿಮ್ ಕಾರ್ಬೆಟ್ ಪಾರ್ಕ್ ಹುಲಿಗಳಿಗೆ ಖ್ಯಾತಿಯಾಗಿದೆ.
Advertisement
Advertisement
ದಾಳಿಯಂದು ಮೋದಿ ವೇಳಾಪಟ್ಟಿ ಹೀಗಿತ್ತು:
ಗುರುವಾರದಂದು ಬೆಳಗ್ಗೆ 7 ಗಂಟೆ 5 ನಿಮಿಷಕ್ಕೆ ಬಿಜ್ನೋರ್‍ಗೆ ಮೋದಿ ಹೋಗಬೇಕಿತ್ತು. ಆದ್ರೆ ಮಳೆಯ ಹಿನ್ನೆಲೆಯಲ್ಲಿ ಮಿಗ್-17 ಸೇನಾ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಮಧ್ಯಾಹ್ನ 12.30ಕ್ಕೆ ಬಿಜ್ನೋರ್ ಜಿಲ್ಲೆಯ ಬಿಕ್ಕವಾಲಾಕ್ಕೆ ಬಂದು ಅಲ್ಲಿಂದ ರಸ್ತೆ ಮೂಲಕ ಪ್ರಯಾಣ ಬೆಳೆಸಿದ್ರು. ರಾಮಗಂಗಾ ನದಿ ತಟಕ್ಕೆ ಬಂದ ಬಳಿಕ ದೋಣಿ ವಿಹಾರ, ಅಲ್ಲಿಂದ ಜಿಮ್ ಕಾರ್ಬೆಟ್ ಪಾರ್ಕ್‍ನಲ್ಲಿ ಸಫಾರಿ ಮಾಡಿದ್ರು.
Advertisement
ಈ ವೇಳೆ ಸ್ವತಃ ಮೋದಿಯವರೇ ತಮ್ಮ ಮೊಬೈಲ್‍ನಿಂದ ಫೋಟೋ ಕ್ಲಿಕ್ಕಿಸಿದ್ದರು. ಜಿಮ್ ಕಾರ್ಬೆಟ್ ಪಾರ್ಕ್‍ನಲ್ಲಿ 4 ಗಂಟೆ ಕಳೆದ ಬಳಿಕ ಸಂಜೆ 7.45ಕ್ಕೆ ನಿರ್ಗಮಿಸಿದ ಮೋದಿ, ಹವಾಮಾನ ವೈಪರೀತ್ಯದಿಂದಾಗಿ ರುದ್ರಪುರ್‍ನಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿಲ್ಲ. ಅದರ ಬದಲಿಗೆ ಜಿಮ್ ಕಾರ್ಬೆಟ್ ಪಾರ್ಕ್‍ನಲ್ಲಿ ನಡೆದಿದ್ದ ದಿಖಾಲ ವಲಯದಿಂದಲೇ ಚುನಾವಣಾ ಭಾಷಣ ಮಾಡಿದ್ರು.
Advertisement
ಜಿಮ್ ಕಾರ್ಬೆಟ್ ಪಾರ್ಕ್‍ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ಗೌಪ್ಯವಾಗಿ ಇಡಲಾಗಿತ್ತು. ಅದೇ ದಿನ ಮಧ್ಯಾಹ್ನ 3.15ಕ್ಕೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ದಾಳಿ ಬಳಿಕ ಅಂದ್ರೆ ಮರು ದಿನ ಬೆಳಗ್ಗೆ 9.15ಕ್ಕೆ ಮೋದಿ ರಕ್ಷಣೆ ಮೇಲಿನ ಸಂಪುಟ ಸಮಿತಿ ಸಭೆ ನಡೆಸಿದ್ದರು ಎಂದು ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv