ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸಹಾಯವಾಗಲು ಪೊಲೀಸರಿಗೆ ಹೈಟೆಕ್ ತಂತ್ರಜ್ಞಾನದ ಕ್ಯಾಮೆರಾ ಹೊಂದಿರುವ ಸಮವಸ್ತ್ರ ನೀಡಲಾಗಿದೆ.
ಜುಲೈ 20 ರಂದು ಜಮ್ಮು ಕಾಶ್ಮೀರ ಎಸ್‍ಪಿ ವೈದ್ಯ ಅವರು ಪೊಲೀಸರಿಗೆ ಹೊಸ ತಂತ್ರಜ್ಞಾನದ ಕ್ಯಾಮೆರಾ ಅಳವಡಿಸಿದ ಸಮವಸ್ತ್ರ ನೀಡುವುದಾಗಿ ತಿಳಿಸಿದ್ದರು. ಸದ್ಯ ಸರ್ಕಾರ ಕೈಗೊಂಡಿರುವ ಈ ಕ್ರಮ ಪೊಲೀಸರ ಮೇಲೆ ಮಾಡುತ್ತಿದ್ದ ಆಧಾರ ರಹಿತ ಆರೋಪಗಳಿಗೆ ತಕ್ಕ ಉತ್ತರ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
Advertisement
https://www.instagram.com/p/Bls44-unPDP/?utm_source=ig_embed&utm_campaign=embed_loading_state_control
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‍ಪಿ ವೈದ್ಯ ಅವರು, ಪೊಲೀಸರಿಗೆ ನೀಡಿರುವ ಹೈಟೆಕ್ ಕ್ಯಾಮೆರಾಗಳಿಂದ ಭದ್ರತೆಯನ್ನು ಹೆಚ್ಚಿಸಲು ಹಾಗೂ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲು ಸಹಾಯಕವಾಗಲಿದೆ. ನಾಗರಿಕರು ಪೊಲೀಸರ ಮೇಲೆ ಲಂಚ ಅಥವಾ ಬೇರೆಯಾವುದೇ ಆರೋಪ ಮಾಡಿದರು ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳು ಪ್ರಮುಖ ಸಾಕ್ಷಿಯಾಗಲಿದೆ. ಈ ಕ್ರಮ ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಪಾರದರ್ಶಕತೆಯನ್ನು ತರಲಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಸಂಚಾರಿ ಪೊಲೀಸರ ಲಂಚಕ್ಕೆ ಬ್ರೇಕ್: ಇಲಾಖೆಗೆ ಬಾಡಿ ಕ್ಯಾಮೆರಾಗಳು ಎಂಟ್ರಿ!
Advertisement
ಪೊಲೀಸರಿಗೆ ಇವುಗಳ ಬಳಕೆ ಮಾಡುವ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. ಅಂದಹಾಗೇ ಕಳೆದ ಒಂದು ವರ್ಷದಿಂದ ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಆರ್ ಪಿಎಫ್ ಯೋಧರು ಕ್ಯಾಮೆರಾ ಹೊಂದಿರುವ ಸಮವಸ್ತ್ರ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೈಟೆಕ್ ಸಮವಸ್ತ್ರ ನೀಡಿರುವುದರಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವ ವೇಳೆ ದಾಖಲಾದ ದೃಶ್ಯಗಳು ಮತ್ತೊಂದು ಕಾರ್ಯಾಚರಣೆ ನಡೆಸುವ ವೇಳೆ ಪ್ಲಾನ್ ಮಾಡಲು ಸಹಾಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
For effective and transparent functioning , traffic police Rural,Jammu officers using body worn cameras.
A step towards Transparent service.@KangriCarrier @JmuKmrPolice pic.twitter.com/vAyDjEXC9H
— Traffic Police Rural Jammu (@JammuSp) July 26, 2018