ನವದೆಹಲಿ: 10 ವರ್ಷದ ಬಳಿಕ ನಡೆದ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ (Jammu Kashmir Election) ನ್ಯಾಷನಲ್ ಕಾಂಗ್ರೆಸ್, ಕಾಂಗ್ರೆಸ್, ಸಿಪಿಐ(ಎಂ) ಮೈತ್ರಿಕೂಟ ಗೆದ್ದು ಬೀಗಿದ್ದರೂ ಮತಗಳಿಕೆಯಲ್ಲಿ (Vote Share) ಬಿಜೆಪಿ (BJP) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
90 ಸ್ಥಾನಗಳ ಪೈಕಿ INDIA ಮೈತ್ರಿಕೂಟ 49 ಸ್ಥಾನ ಗೆದ್ದಿದೆ. ನ್ಯಾಷನಲ್ ಕಾನ್ಫರೆನ್ಸ್ 42, ಕಾಂಗ್ರೆಸ್ 6 ಮತ್ತು ಸಿಪಿಐ 1 ಕಡೆ ಗೆದ್ದಿದೆ. ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದ ಬಿಜೆಪಿ 29 ಸ್ಥಾನ ಗೆದ್ದು ವಿಪಕ್ಷ ಸ್ಥಾನವನ್ನು ಅಲಂಕರಿಸಿದೆ. ಪಿಡಿಪಿ ಕೇವಲ 3 ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಇತರರು ಎಂಟು ಕಡೆ ಗೆದ್ದಿದ್ದಾರೆ.
Advertisement
ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಅವರ ಪಕ್ಷದ ಪ್ರಣಾಳಿಕೆಗಳು ಕೈಹಿಡಿದಿವೆ. ಎಂದಿನಂತೆ ಬಿಜೆಪಿ ಜಮ್ಮು ಪ್ರಾಂತ್ಯದಲ್ಲಿ ಪಾಸ್ ಆದರೆ, ಕಾಶ್ಮೀರದಲ್ಲಿ ಫೇಲ್ ಆಗಿದೆ. ಆದರೂ ಮತ ಪ್ರಮಾಣದಲ್ಲಿ ಬಿಜೆಪಿ ಎಲ್ಲಾ ಪಕ್ಷಗಳಿಗಿಂತ ಮುಂದಿದೆ ಎಂಬುದು ವಿಶೇಷ. ಇದನ್ನೂ ಓದಿ: Jammu Kashmir Election Results| ಉಗ್ರರಿಂದ ಹತ್ಯೆಯಾಗಿದ್ದ ವ್ಯಕ್ತಿಯ ಮಗಳಿಗೆ ಒಲಿದ ಜಯ
Advertisement
Advertisement
ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಪಿಡಿಪಿಯನ್ನು ಈ ವಿಚಾರದಲ್ಲಿ ಹಿಂದಿಕ್ಕಿದೆ. ಬಹುತೇಕ ಕಡೆ ಎನ್‌ಸಿ-ಕಾಂಗ್ರೆಸ್‌ಗೆ ಬಿಜೆಪಿ ಬಿಗ್ ಫೈಟ್ ನೀಡಿದೆ. ಗಣನೀಯ ಪ್ರಮಾಣದಲ್ಲಿ ಮತ ಗಿಟ್ಟಿಸಿದೆ ಎನ್ನುವುದು ಗಮನಾರ್ಹ ಸಂಗತಿ.
Advertisement
ಮುಸ್ಲಿಮರೇ ಹೆಚ್ಚಿರುವ ಜಮ್ಮುವಿನ ಕಿಶ್ತ್ವಾರದಲ್ಲಿ ಬಿಜೆಪಿಯ ಮಹಿಳಾ ಅಭ್ಯರ್ಥಿ ಶಗುನ್ ಪರಿಹಾರ್ 521 ಮತಗಳ ಅಂತರದಿಂದ ಗೆದ್ದಿರುವುದು ಸಣ್ಣ ಸಂಗತಿಯಲ್ಲ. 2014ರ ಚುನಾವಣೆಯಲ್ಲಿಯೂ ಬಿಜೆಪಿ ಕಾಶ್ಮೀರ ಪ್ರಾಂತ್ಯದಲ್ಲಿ ಶೂನ್ಯ ಸಂಪಾದನೆ ಮಾಡಿತ್ತು. ಇದನ್ನೂ ಓದಿ: Haryana Results| ಕಾಂಗ್ರೆಸ್ ಸೋತಿದ್ದು ಹೇಗೆ? – ಇಲ್ಲಿದೆ 6 ಕಾರಣಗಳು
ಮತ ಪ್ರಮಾಣ ಯಾರಿಗೆ ಎಷ್ಟು?
ಬಿಜೆಪಿ – 25.64%
ನ್ಯಾಷನಲ್ ಕಾನ್ಫರೆನ್ಸ್ – 23.43%
ಕಾಂಗ್ರೆಸ್ – 11.97%
ಪಿಡಿಪಿ – 8.8%
ನೋಟಾ -1.48%
2014 ವಿಧಾನಸಭಾ ಚುನಾವಣೆಯಲ್ಲಿ ಏನಾಗಿತ್ತು?
ಒಟ್ಟು 87 ಕ್ಷೇತ್ರಗಳ ಪೈಕಿ ಪಿಡಿಪಿ 28 (22.9%), ಬಿಜೆಪಿ 25 (23.2%) ನ್ಯಾಷನಲ್ ಕಾನ್ಫರೆನ್ಸ್ 15 (21%) ಕಾಂಗ್ರೆಸ್ 12 (18.2%) ಮತಗಳನ್ನು ಪಡೆದಿತ್ತು. ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ – ಖಾತೆ ತೆರೆದ ಎಎಪಿ; ಬಿಜೆಪಿ ಅಭ್ಯರ್ಥಿ ವಿರುದ್ಧ ಮಲಿಕ್ ಜಯಭೇರಿ
2024ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು?
ಒಟ್ಟು 5 ಕ್ಷೇತ್ರಗ ಪೈಕಿ ಬಿಜೆಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ತಲಾ 2 ರಲ್ಲಿ ಜಯಗಳಿಸಿದರೆ ಪಕ್ಷೇತರ ಅಭ್ಯರ್ಥಿ ಅಬ್ದುಲ್ ರಶೀದ್ ಬಾರಾಮುಲ್ಲಾದಿಂದ ಗೆದ್ದಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ 24.6% ನ್ಯಾಷನಲ್ ಕಾನ್ಫರೆನ್ಸ್ 22.4%, ಪಕ್ಷೇತರರು 14.8% ಮತ ಗಳಿಸಿದ್ದರು.