ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಪೊಲೀಸ್ ವಾಹನದೊಳಗೆ ಗುಂಡಿನ ಗಾಯಗಳಿರುವ ಇಬ್ಬರು ಪೊಲೀಸ್ ಸಿಬ್ಬಂದಿ ಮೃತದೇಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಕೆ-47 ರೈಫಲ್ ಗುಂಡೇಟು ಬಿದ್ದಿವೆ ಎಂದು ಉಧಂಪುರ ಪೊಲೀಸರು ತಿಳಿಸಿದ್ದಾರೆ. ಸಿಬ್ಬಂದಿ ಸೋಪೋರ್‌ನಿಂದ ತಲ್ವಾರ ತರಬೇತಿ ಕೇಂದ್ರಕ್ಕೆ ತೆರಳುತ್ತಿದ್ದರು ಎಂದು ಎಸ್‌ಎಸ್‌ಪಿ ಉಧಂಪುರ ಅಮೋದ್ ಅಶೋಕ್ ನಾಗ್‌ಪುರೆ ಮಾಹಿತಿ ನೀಡಿದ್ದಾರೆ.
Advertisement
ಬೆಳಗ್ಗೆ 6:30 ಕ್ಕೆ ಘಟನೆ ನಡೆದಿದೆ. ಅವರು ಸೋಪೋರ್‌ನಿಂದ ತಲ್ವಾರದಲ್ಲಿರುವ ತರಬೇತಿ ಕೇಂದ್ರದ ಕಡೆಗೆ ಹೋಗುತ್ತಿದ್ದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆಯಲ್ಲಿ ಎಕೆ -47 ರೈಫಲ್ ಬಳಸಿರುವುದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
Advertisement
ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ಕಾರ್ಯವಿಧಾನಗಳಿಗಾಗಿ ಜಿಎಂಸಿ ಉಧಂಪುರಕ್ಕೆ ಸಾಗಿಸಲಾಗಿದೆ.