ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರಗಾಮಿಗಳು ಎನ್‍ಕೌಂಟರ್‍ಗೆ ಬಲಿಯಾಗಿದ್ದಾರೆ.
ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸುವ ವೇಳೆ ರಕ್ಷಣಾ ಪಡೆಯ ವಿರುದ್ಧ ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಭಾರತೀಯ ಯೋಧರು ನಡೆಸಿದ ದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.
Advertisement
"Two terrorists were killed in an encounter with J&K Police/ Security Forces in Lolab Kupwara few minutes back," tweets Shesh Paul Vaid, J&K Director General of Police (DGP). #JammuAndKashmir (File pic) pic.twitter.com/JnjBrwcJ99
— ANI (@ANI) August 2, 2018
Advertisement
ಈ ಕುರಿತು ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಡಿಎಸ್‍ಪಿ ಶೇಷ ಪೌಲ್ ವೈದ್, ಇಬ್ಬರು ಉಗ್ರರು ಮೃತರಾಗಿರುವುದು ಖಚಿತವಾಗಿದೆ. ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದು, ಹತ್ಯೆಯಾದ ಉಗ್ರರ ಹೆಸರ ದೇಹವನ್ನು ತೆರವು ಮಾಡಿದ ವೇಳೆ ಉಗ್ರರ ಖಚಿತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿ ಟ್ವೀಟ್ ಮಾಡಿದ್ದಾರೆ.
Advertisement
ಕಳೆದ ಜುಲೈ 15 ರಂದು ನಡೆದ ಜಮ್ಮುವಿನ ಟ್ರಾಲ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲೂ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಬಳಿಕ ಜೂನ್ 22 ರಂದು ನಡೆದ ಎನ್‍ಕೌಂಟರ್ ನಲ್ಲಿ ಜಮ್ಮು ಕಾಶ್ಮೀರದ ಪೊಲೀಸ್ ಪೇದೆಯನ್ನು ಅಪಹರಿಸಿ ಕೊಲೆ ಮಾಡಿದ್ದ 3 ಉಗ್ರರನ್ನು ಎನ್‍ಕೌಂಟರ್ ಮಾಡಲಾಗಿತ್ತು.
Advertisement
#JammuAndKashmir: Two terrorists involved in the recent rifle snatching case, killed by security forces in Kupwara's khumriyal area. (visuals deferred by unspecified time) pic.twitter.com/mehaAu066B
— ANI (@ANI) August 2, 2018