ಶ್ರೀನಗರ: ಹಿಜಬ್ ಮತ್ತು ತಿಲಕದ ವಿಷಯಕ್ಕೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕ ಹಲ್ಲೆ ನಡೆಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಡೆದಿದೆ.
ನಿಸಾರ್ ಅಹ್ಮದ್ ಆರೋಪಿ ಶಿಕ್ಷಕ. ಸರ್ಕಾರಿ ಮಧ್ಯಮ ಶಾಲೆಯ ಖದುರಿಯ ಪಂಚಾಯತ್ ಡ್ರಾಮ್ಮನ್‍ನಲ್ಲಿ ಘಟನೆ ನಡೆದಿದೆ. 4ನೇ ತರಗತಿಯ ವಿದ್ಯಾರ್ಥಿನಿಯರಲ್ಲಿ ಒಬ್ಬಳು ಹಣೆಗೆ ಕುಂಕುಮವನ್ನು ಇಟ್ಟಿದ್ದಳು. ಮತ್ತೊಬ್ಬಳು ಸ್ಕಾರ್ಫ್ ಧರಿಸಿದ್ದಳು. ಈ ಹಿನ್ನೆಲೆಯಲ್ಲಿ ಆ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕ ಹಲ್ಲೆ ನಡೆಸಿದ್ದಾರೆ.
Advertisement
Advertisement
ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ಜಂಟಿಯಾಗಿ ವೀಡಿಯೋ ಮಾಡಿದ್ದಾರೆ. ಇದನ್ನೂ ಓದಿ: ಕಿತ್ತೂರು ಚೆನ್ನಮ್ಮಳ ನಾಡಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ: ನಿರಾಣಿ
Advertisement
ವೀಡಿಯೋದಲ್ಲಿ ಏನಿದೆ?: ನನ್ನ ಮಗಳನ್ನು ಹೊಡೆದ ರೀತಿಯಲ್ಲಿ ಶಕೂರ್ ಅವರ ಮಗಳನ್ನು ಹೊಡೆಯಲಾಯಿತು. ಈ ರೀತಿ ನಾಳೆ ಇನ್ನೊಬ್ಬ ಶಿಕ್ಷಕರು ಕುಂಕುಮ ಅಥವಾ ಹಿಜಬ್ ಧರಿಸಿದ್ದಾಕ್ಕಾಗಿ ಬೇರೆ ವಿದ್ಯಾರ್ಥಿನಿಯರನ್ನು ಹೊಡೆಯಬಹುದು. ಈ ಬಗ್ಗೆ ತನಿಖೆಯಾಗಬೇಕು ಎಂದು ಮನವಿ ಮಾಡುತ್ತೇನೆ ಎಂದು ವಿದ್ಯಾರ್ಥಿನಿಯ ಪಾಲಕರು ಮನವಿ ಮಾಡಿದ್ದಾರೆ.
Advertisement
ಈ ರೀತಿಯ ಗೊಂದಲ ಸೃಷ್ಟಿಸುತ್ತಿರುವುದರಿಂದ ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನವಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೋ ಆಧರಿಸಿ ರಜೌರಿ ಜಿಲ್ಲಾಡಳಿತವು ಶಿಕ್ಷನ ವಿರುದ್ಧ ತನಿಖೆಗೆ ಆದೇಶಿಸಿದೆ. ಇದನ್ನೂ ಓದಿ: ‘ಬಿಗ್ ಬ್ರದರ್’ ಎಂದು ಭಾರತ, ಮೋದಿಗೆ ಧನ್ಯವಾದ ಹೇಳಿದ ಲಂಕಾ ಕ್ರಿಕೆಟಿಗ ಜಯಸೂರ್ಯ
ವಿದ್ಯಾರ್ಥಿನಿಯರಿಗೆ ಶಿಕ್ಷಕ ಹೊಡೆದಿದರುವುದು ನಿಜವೇ ಹಾಗೂ ಹೊಡೆಯಲು ನಿಜವಾದ ಕಾರಣವೇನು ಎನ್ನುವುದರ ಕುರಿತು ವಿಚಾರಣೆ ನಡೆಸಲಿದ್ದಾರೆ ಎಂದು ರಾಜೌರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದ್ದಾರೆ.