ನವದೆಹಲಿ: ಜಮ್ಮು- ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು (ಅಕ್ಟೋಬರ್ 8) ಪ್ರಕಟವಾಗಲಿದ್ದು, ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಶುರುವಾಗಲಿದೆ. ಲೋಕಸಭೆ ಚುನಾವಣೆ ನಡೆದ ಬಳಿಕ ನಡೆದ ಹೈವೋಲ್ಟೇಜ್ ಚುನಾವಣೆ ಇದಾಗಿದ್ದು, ಜಮ್ಮು-ಕಾಶ್ಮೀರದ ಚುನಾವಣೆ ಬಹಳ ಮಹತ್ವ ಪಡೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ.
ಅದೇ ರೀತಿ ಹರಿಯಾಣದಲ್ಲೂ ಹ್ಯಾಟ್ರಿಕ್ ಕನಸು ಕಂಡಿರುವ ಬಿಜೆಪಿಗೆ ಸೆಡ್ಡು ಹೊಡೆದು, ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯಲು ಪ್ರಯತ್ನಿಸಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತಕ್ಕೆ ಒಳಪಟ್ಟ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವ ಕಾರಣ ದೇಶದ ಗಮನಸೆಳೆದಿದೆ. ಈ ಫಲಿತಾಂಶವು ಈ ವರ್ಷ ಕೊನೆಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜಕೀಯದ ಮೇಲೂ ಪರಿಣಾಮ ಬೀರಬಹುದು ಎಂಬುದು ರಾಜಕೀಯ ಪರಿಣತರ ಲೆಕ್ಕಾಚಾರ.
Advertisement
Advertisement
ಈ ಚುನಾವಣೆ ಗದ್ದುಗೆ ಹಿಡಿಯಲು ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಡಿಯಾ ಮೈತ್ರಿ ಕೂಟ ಹಾಗೂ ಬಿಜೆಪಿ ಪಕ್ಷಗಳ ಪ್ರಣಾಳಿಕೆ ಪರಿಣಾಮಕಾರಿಯಾಗಲಿದೆಯೇ ಹಾಗಿದ್ದರೆ, ಪಕ್ಷಗಳ ಪ್ರಣಾಳಿಕೆಯಲ್ಲಿ ಏನಿದೆ ಎಂಬುದನ್ನು ತಿಳಿಯಲು ಮುಂದೆ ಓದಿ…
Advertisement
ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೇಸ್ ಪ್ರಣಾಳಿಕೆ:
* ಜಮ್ಮು ಮತ್ತು ಕಾಶ್ಮೀರದ ಅರ್ಹ ನಿರುದ್ಯೋಗಿ ಯುವಕರಿಗೆ 1 ವರ್ಷದವರೆಗೆ ಪ್ರತಿ ತಿಂಗಳು 3,500 ರೂ.ವರೆಗೆ ನಿರುದ್ಯೋಗ ಭತ್ಯೆ ನೀಡುವ ಭರವಸೆ
* 30 ದಿನಗಳಲ್ಲಿ ಉದ್ಯೋಗ ಕ್ಯಾಲೆಂಡರ್ ನೀಡುವ ಮೂಲಕ ಖಾಲಿ ಇರುವ 1 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ
* ಪೊಲೀಸ್, ಅಗ್ನಿಶಾಮಕ ದಳ ಮತ್ತು ಅರಣ್ಯ ಸಂರಕ್ಷಣಾ ಪಡೆಗಳಿಗೆ ವಿಶೇಷ ಗಡಿ ನೇಮಕಾತಿಯನ್ನು ಪುನರುಜ್ಜೀವನಗೊಳಿಸುವ ಭರವಸೆ
* ಭೂರಹಿತರು, ಹಿಡುವಳಿದಾರರು ಮತ್ತು ಜಮೀನು ಹೊಂದಿರುವ ಕೃಷಿಕ ಕುಟುಂಬಗಳಿಗೆ ರೂ 4,000 ಹೆಚ್ಚುವರಿ ಆರ್ಥಿಕ ಬೆಂಬಲ
* ನಿರುದ್ಯೋಗಿ ಇಂಜಿನಿಯರುಗಳ ಗುಂಪುಗಳಿಗೆ ಶೇ.30 ರಷ್ಟು ನಿರ್ಮಾಣ ಕಾಮಗಾರಿ ಸಂಬಂಧಿತ ಗುತ್ತಿಗೆಗಳನ್ನು ಹಂಚಿಕೆ ಮಾಡುವ ಯೋಜನೆಯನ್ನು ಪುನಶ್ಚೇತನಗೊಳಿಸುವುದಾಗಿ ಭರವಸೆ
* ಮಹಿಳಾ ಸಮ್ಮಾನ್ ಕಾರ್ಯಕ್ರಮದಡಿ ಕುಟುಂಬದ ಮಹಿಳೆಗೆ ಮಾಸಿಕ 3000 ರೂ.ಗಳ ನೆರವು ನೀಡುವುದಾಗಿ ಭರವಸೆ
Advertisement
ನ್ಯಾಷನಲ್ ಕಾನ್ಫರೆನ್ಸ್ (NC)
* ಎನ್‌ಸಿ ಪ್ರಣಾಳಿಕೆಯು ವಿಶೇಷ ಸ್ಥಾನಮಾನ ಕುರಿತಾದ 370ನೇ ವಿಧಿಯನ್ನು ಮರಳಿ ಸ್ಥಾಪಿಸುವುದಾಗಿ ಭರವಸೆ
* ಎನ್ ಸಿ ಅಧಿಕಾರಕ್ಕೆ ಬಂದರೆ ಎಲ್ಲಾ ರಾಜಕೀಯ ಕೈದಿಗಳಿಗೆ ಕ್ಷಮಾದಾನ
* ಕಾಶ್ಮೀರಿ ಪಂಡಿತರನ್ನು ಕಣಿವೆಗೆ ಘನತೆಯಿಂದ ಹಿಂದಿರುಗಿಸುವುದಾಗಿ ಭರವಸೆ
* 200 ಯೂನಿಟ್ ಉಚಿತ ವಿದ್ಯುತ್, ವಿದ್ಯುತ್ ಮತ್ತು ನೀರಿನ ಬಿಕ್ಕಟ್ಟಿಗೆ ಪರಿಹಾರ
* ಜಮ್ಮು ಮತ್ತು ಕಾಶ್ಮೀರಕ್ಕೆ ಜಲ-ವಿದ್ಯುತ್ ವಿದ್ಯುತ್ ಯೋಜನೆಗಳ ವರ್ಗಾವಣೆ
* ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಪ್ರತಿ ವರ್ಷ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತ
ಪಿಡಿಪಿ
* ಮಸೀದಿ, ಮಂದಿರಾ ಗುರುದ್ವಾರಗಳಿಗೆ ಉಚಿತ ವಿದ್ಯುತ್
* ಗುತ್ತಿಗೆ ಶಿಕ್ಷಕರ ಗೌರವ ಧನ ಹೆಚ್ಚಳ
* ಜೈಲು ಖೈದಿಗಳಿಗೆ ಉಚಿತ ಕಾನೂನು ಸಲಹೆ
* ರಾಜ್ಯದ ವಿಶೇಷ ಸ್ಥಾನಮಾನ ಮರು ಸ್ಥಾಪನೆ
* ಆರ್ಥಿಕ ಸ್ಥಿತಿ ಮರುಸ್ಥಾಪನೆ
* 60,000 ದಿನಗೂಲಿಗಳನ್ನು ಕ್ರಮಬದ್ಧಗೊಳಿಸುವುದು
* ಹಳೆಯ ಪಿಂಚಣಿ ಯೋಜನೆ ಜಾರಿ
* J&K ಪೊಲೀಸರಿಗೆ ತೊಂದರೆಗೊಳಗಾಗದ ಪ್ರದೇಶ ಭತ್ಯೆ
ಬಿಜೆಪಿ
* ಯುವಕರಿಗೆ 5 ಲಕ್ಷ ಉದ್ಯೋಗಾವಕಾಶ ಕಲ್ಪಿಸಿ, ನ್ಯಾಯಯುತ ಮತ್ತು ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಖಚಿತಪಡಿಸಿಕೊಳ್ಳಿ
* ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ 10,000 ರೂ.
* ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ದರದಲ್ಲಿ 50% ಕಡಿತ
* ಮಾ ಸಮ್ಮಾನ್ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಹಿರಿಯ ಮಹಿಳೆಗೆ ವಾರ್ಷಿಕ 18,000 ರೂ.
* ಉಜ್ವಲ ಫಲಾನುಭವಿಗಳಿಗೆ ವರ್ಷಕ್ಕೆ 2 ಉಚಿತ ಸಿಲಿಂಡರ್
* ಅಟಲ್ ವಸತಿ ಯೋಜನೆಯಡಿ ಭೂರಹಿತ ಫಲಾನುಭವಿಗಳಿಗೆ ಉಚಿತ ಭೂಮಿ ಹಂಚಿಕೆ.
* ವೃದ್ಧಾಪ್ಯ, ವಿಧವೆ ಮತ್ತು ಅಂಗವಿಕಲರಿಗೆ ಪಿಂಚಣಿ ಮೂರು ಪಟ್ಟು ಹೆಚ್ಚಳ
* ಪ್ರಗತಿ ಶಿಕ್ಷಾ ಯೋಜನೆಯಡಿ ಕಾಲೇಜು ವಿದ್ಯಾರ್ಥಿಗಳಿಗೆ ವರ್ಷಕ್ಕೆ 3,000 ರೂ. ಪ್ರಯಾಣ ಭತ್ಯೆ.
* 1,000 ಹೊಸ ವೈದ್ಯಕೀಯ ಕಾಲೇಜು ಸೀಟುಗಳನ್ನು ಸೇರಿಸಿ
* ಶ್ರೀನಗರದಲ್ಲಿ ಮೆಟ್ರೋ ಆರಂಭ, ಭಯೋತ್ಪಾದನೆ ನಿಗ್ರಹ