ಶ್ರೀನಗರ: ಭಯೋತ್ಪಾದಕತೆ ವಿರುದ್ಧ ಪ್ರಜಾಪ್ರಭುತ್ವ ಗೆದ್ದಿದೆ. ಜಮ್ಮು ಕಾಶ್ಮೀರದಲ್ಲಿ (Jammu Kashmir) ದಶಕದ ಬಳಿಕ ಮೊದಲ ಹಂತದ ಚುನಾವಣೆ (Election) ಶಾಂತಿಯುತವಾಗಿ ಮುಗಿದಿದ್ದು, 35 ವರ್ಷದ ಬಳಿಕ ಗರಿಷ್ಠ ಮತದಾನ ನಡೆದಿದೆ.
ನಿರೀಕ್ಷೆಗಿಂತಲೂ ಹೆಚ್ಚಿನ ಮತದಾರರು (Voters) ಮತಗಟ್ಟೆಗೆ ಧಾವಿಸಿದ ಪರಿಣಾಮ 58.85% (ರಾತ್ರಿ 7:30 ಚುನಾವಣಾ ಆಯೋಗ ಪ್ರಕಟ ಮಾಡಿದ ಮಾಹಿತಿ) ಮತದಾನ ದಾಖಲಾಗಿದೆ
Advertisement
ಒಟ್ಟು 90 ಸ್ಥಾನಗಳ ಪೈಕಿ ಇಂದು 24 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಅನಂತನಾಗ್, ಪುಲ್ವಾಮಾ, ಕುಲ್ಗಾಂ, ಶೋಪಿಯಾನ್, ದೋಡಾ,ರಂಬನ್ ಮತ್ತು ಕಿಶ್ತ್ವಾಡ ಜಿಲ್ಲೆಗಳಲ್ಲಿ ಮತಹಬ್ಬ ನಡೆಯಿತು.
Advertisement
I must congratulate all my sisters & first-time voters for participating in large numbers to celebrate festival of democracy. Heartfelt gratitude to outstanding security forces, JKP & Election Officials. Approx 59% polling in first phase shows Jamhooriyat is flourishing in J&K.
— Office of LG J&K (@OfficeOfLGJandK) September 18, 2024
219 ಅಭ್ಯರ್ಥಿಗಳ ರಾಜಕೀಯ ಹಣೆಬರಹ ಮತಯಂತ್ರ ಸೇರಿದೆ. ಜಮ್ಮು ಕಾಶ್ಮೀರದಲ್ಲಿ ಇನ್ನೂ ಎರಡು ಹಂತಗಳಲ್ಲಿ ಮತದಾನ ನಡೆಯಬೇಕಿದೆ. ಸೆ.25 ಎರಡನೇ ಹಂತ ಅ.1 ರಂದು ಮೂರನೇ ಹಂತದ ಬಳಿಕ ಅ.8 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: 100 ಚದರ ಅಡಿಯ ನಿವೇಶನ, 3.5 ಲಕ್ಷ ವೆಚ್ಚದ 2 ರೂಮ್‌ಗಳಿರುವ ಮನೆ, 500 ರೂ.ಗೆ ಎಲ್‌ಪಿಜಿ ಸಿಲಿಂಡರ್: ಹರಿಯಾಣಕ್ಕೆ ಸಪ್ತ ಗ್ಯಾರಂಟಿ
Advertisement
ಚುನಾವಣೆ ಸಮಯದಲ್ಲಿ ಪ್ರತ್ಯೇಕವಾದಿಗಳು ಮತದಾನ ಮಾಡದಂತೆ ಕರೆ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಮತ ಹಬ್ಬದಲ್ಲಿ ಭಾಗವಹಿಸಿದವರ ಮೇಲೆ ದಾಳಿ ನಡೆಸುತ್ತಿದ್ದರು. ಪ್ರತ್ಯೇಕವಾದಿಗಳು ಮತ್ತು ಉಗ್ರರ ಬೆದರಿಕೆ ಕರೆಗೆ ಹೆದರಿ ಜನರು ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದರು.
Advertisement
ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮೊದಲ ಹಂತದ ಮತದಾನ ಯಶಸ್ವಿಯಾಗಿದ್ದಕ್ಕೆ ಜನರಿಗೆ ಮೆಚ್ಚುಗೆ ಸೂಚಿಸಿದ್ದಾರೆ.