ಜಮ್ಮು ಕಾಶ್ಮೀರದಲ್ಲಿ ಸೈನಿಕರ ಜೊತೆ ಧೋನಿ ವಾಲಿಬಾಲ್-ವಿಡಿಯೋ ನೋಡಿ

Public TV
1 Min Read
dhoni 3

ಶ್ರೀನಗರ: ಭಾರತೀಯ ಸೇನೆಯಲ್ಲಿ ಲೆಫ್ಟಿನೆಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಸೈನಿಕರ ಜೊತೆ ವಾಲಿಬಾಲ್ ಆಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ವಿಶ್ವಕಪ್ ಬಳಿಕ ಕ್ರಿಕೆಟ್‍ನಿಂದ 2 ತಿಂಗಳು ರಜೆ ಪಡೆದಿರುವ ಧೋನಿ ಅವರು, 106ನೇ ಟೆರಿಟೋರಿಯಲ್ ಆರ್ಮಿ ಬಟಾಲಿಯನ್ ಪ್ಯಾರಾ ಕಮಾಂಡೋ ಯುನಿಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಅವರು ಪ್ರದೇಶಿಕ ಸೇನಾ ಬೆಟಾಲಿಯನ್ ಯೋಧರೊಂದಿಗೆ ವಾಲಿಬಾಲ್ ಆಡಿದ್ದಾರೆ.

ಈ ಹಿಂದೆ ಎಂಎಸ್ ಧೋನಿ ಸೇನಾ ಸಮವಸ್ತ್ರದಲ್ಲಿ ಕ್ರಿಕೆಟ್ ಬ್ಯಾಟ್‍ಗೆ ಸಹಿ ಹಾಕುವ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಗಸ್ಟ್ 15 ರವರೆಗೆ ವಿಕ್ಟರ್ ಫೋರ್ಸ್‍ ನ ಭಾಗವಾಗಿ ಎಂ.ಎಸ್.ಧೋನಿ ಕಾಶ್ಮೀರ ಕಣಿವೆಯಲ್ಲಿರುವ ಘಟಕದೊಂದಿಗೆ ಇರಲಿದ್ದಾರೆ. ಅಧಿಕಾರಿಗಳ ಕೋರಿಕೆಯಂತೆ ಮತ್ತು ಸೇನಾ ಕೇಂದ್ರ ಕಚೇರಿಯಿಂದ ಅನುಮೋದನೆ ಪಡೆದಂತೆ ಎಂ.ಎಸ್.ಧೋನಿ ಗಸ್ತು, ಕಾವಲು ಮತ್ತು ಪೋಸ್ಟ್ ಡ್ಯೂಟಿ ಮಾಡುತ್ತಿದ್ದಾರೆ.

DHONI 1

ವಿಶ್ವಕಪ್ ಬಳಿಕ ಸೇನೆ ಸೇರಿದ ಧೋನಿ ಆರಂಭದ ಮೂರು ದಿನ ಸೇನೆಯ ಪ್ರಾಥಮಿಕ ತರಬೇತಿಯನ್ನು ಪಡೆದಿದ್ದರು. ಈ ವೇಳೆ ಸೇನೆಯ ಬಗ್ಗೆ ಮಾಹಿತಿ, ಫೈರಿಂಗ್ ಸಹ ಹೇಳಿಕೊಡಲಾಗಿತ್ತು. ವೆಸ್ಟ್ ಇಂಡೀಸ್ ಪ್ರವಾಸದಿಂದ ರಜೆ ಪಡೆದುಕೊಂಡಿರುವ ಧೋನಿ ಆಗಸ್ಟ್ 15ರವರೆಗೆ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಬಾರಿಯ ಸ್ವತಂತ್ರ್ಯ ದಿನಾಚರಣೆಯನ್ನು ಧೋನಿ ಸೈನಿಕರೊಂದಿಗೆ ಆಚರಿಸಲಿದ್ದಾರೆ.

1563722328 General Bipin Rawat approves MS Dhonis request to train with Indian Army PTI

ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನ ಟೆರಿಟೊರಿಯಲ್ ಅರ್ಮಿ ಯೂನಿಟ್‍ನಲ್ಲಿ 38 ವರ್ಷದ ಧೋನಿ ಅವರಿಗೆ 2011 ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು. ವಿಶೇಷ ಎಂದರೆ 2015 ರಲ್ಲಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದೊಂದಿಗೆ ಧೋನಿ ತರಬೇತಿ ಪಡೆದಿದ್ದರು. ಧೋನಿ 2020 ರ ಫೆಬ್ರವರಿಯಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಆಡಲಿದ್ದಾರೆ ಎಂಬ ಮಾಹಿತಿ ಇದೆ. ಇದರ ಜೊತೆ ಮುಂದಿನ ವರ್ಷದ ಐಪಿಎಲ್ ಟೂರ್ನಿಯನ್ನು ಆಡಲಿದ್ದಾರೆ ಎಂದು ಹೇಳಲಾಗಿದೆ.

Share This Article