ಮುಂಬೈ: ಜಮ್ಮು ಕಾಶ್ಮೀರದ ವಿಚಾರ ಕಾಂಗ್ರೆಸ್‍ಗೆ ರಾಜಕೀಯದ ವಿಷಯವಾಗಿರಬಹುದು. ಆದರೆ ನಮಗದು ರಾಷ್ಟ್ರೀಯತೆಯ ಪ್ರಶ್ನೆ ಎಂದು ಅಮಿತ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನಡೆದ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ ಕುರಿತ ವಿಚಾರಸಂಕಿರ್ಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಒಂದು ದೇಶ, ಒಬ್ಬರೇ ಪ್ರಧಾನಿ, ಒಂದೇ ಸಂವಿಧಾನ’ ಎಂಬ ವಿಚಾರದ ಕುರಿತು ಹೋರಾಡುತ್ತಿದೆ. ಆದರೆ ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
Advertisement
The issue of Pak-Occupied Kashmir wouldn't be there had Jawaharlal Nehru not announced an untimely ceasefire in 1947 when the Army was fighting against the Pakistani infiltrators in J&K, the Indian territory – HM Shri @AmitShah #BJPForUnitedIndia
— BJP (@BJP4India) September 22, 2019
Advertisement
ಕಾಂಗ್ರೆಸ್ ಇದರಲ್ಲಿ ರಾಜಕೀಯವನ್ನು ನೋಡುತ್ತಿದೆ. ಆದರೆ ನಾವು ರಾಷ್ಟ್ರೀಯತೆಯನ್ನು ನೋಡುತ್ತಿದ್ದೇವೆ. ಮಾಜಿ ಪ್ರಧಾನಿ ಜವಾಹರ್‍ಲಾಲ್ ನೆಹರು ಅವರು 1947ರಲ್ಲಿ ‘ಅಕಾಲಿಕ ಕದನ ವಿರಾಮ’ ಘೋಷಿಸಿದ್ದೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ) ಸೃಷ್ಟಿಗೆ ಕಾರಣವಾಯಿತು ಎಂದು ನೆಹರು ನಿರ್ಧಾರದ ಕುರಿತು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿಯವರ ಧೈರ್ಯ ಹಾಗೂ ಇಚ್ಛಾಶಕ್ತಿಯನ್ನು ನಾನು ಅಭಿನಂದಿಸುತ್ತೇನೆ. ಎರಡನೇ ಬಾರಿಗೆ ಸರ್ಕಾರ ರಚಿಸಿದ ತಕ್ಷಣ ಸಂಸತ್ತಿನ ಮೊದಲ ಅಧಿವೇಶನದಲ್ಲಿ 370ನೇ ಹಾಗೂ 35ಎ ವಿಧಿಗಳನ್ನು ತೆಗೆದು ಹಾಕಿದ್ದಾರೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಲು 3 ತಲೆಮಾರುಗಳು ಹೋರಾಡಿದ್ದವು ಎಂದು ರಾಹುಲ್ ಗಾಂಧಿ ಅವರಿಗೆ ಹೇಳಲು ಬಯಸುತ್ತೇನೆ. ಇದು ನೀವು ಅಂದುಕೊಂಡ ಹಾಗೆ ರಾಜಕೀಯ ವಿಷಯವಲ್ಲ ಎಂದು ತಿಳಿಸಿದರು.
Advertisement
Congress view Article 370 as vote bank politics, we view this as patriotism. Therein lies the difference between Congress and the BJP – HM Shri @AmitShah #BJPForUnitedIndia
— BJP (@BJP4India) September 22, 2019
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಸಕ್ರಿಯವಾಗಿಡುವುದು ಇಂದಿಗೂ ಕಾಂಗ್ರೆಸ್‍ಗೆ ರಾಜಕೀಯ ವಿಷಯವಾಗಿದೆ. ಆದರೆ ನಮ್ಮ ಮಟ್ಟಿಗೆ ಇದು ರಾಷ್ಟ್ರವನ್ನು ಒಗ್ಗೂಡಿಸುವ ವಿಷಯವಾಗಿತ್ತು. ಈ ಕನಸನ್ನು ನರೇಂದ್ರ ಮೋದಿ ನನಸು ಮಾಡಿದ್ದಾರೆ. ಸೈನ್ಯವು ಪಾಕಿಸ್ತಾನದ ಒಳನುಸುಳುವವರ ವಿರುದ್ಧ ಹೋರಾಡುವಾಗ 1947ರಲ್ಲಿ ಜವಾಹರಲಾಲ್ ನೆಹರು ಅವರು ಅಕಾಲಿಕ ಕದನ ವಿರಾಮ ಘೋಷಿಸದಿದ್ದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ) ಸೃಷ್ಟಿಯಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಚುನಾವಣಾ ಆಯೋಗ ಎರಡು ರಾಜ್ಯಗಳ ಚುನಾವಣೆ ದಿನಾಂಕ ಘೋಷಿಸಿದ್ದು, ಅಕ್ಟೋಬರ್ 21ರಂದು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ವಿಧಾನಸಭಾ ಚುನವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂಪಡೆದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಬಿಜೆಪಿ ಇದನ್ನು ಪ್ರಚಾರದ ಪ್ರಮುಖ ಅಸ್ತ್ರವನ್ನಾಗಿ ಬಳಿಸಿಕೊಳ್ಳುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಈಗಾಗಲೇ ಪ್ರಚಾರ ಭಾಷಣ ಮಾಡಿದ್ದು, ಮಹಾರಾಷ್ಟ್ರದ ನಾಸಿಕ್ ಮತ್ತು ಹರಿಯಾಣದ ರೋಹ್ಟಕ್‍ನಲ್ಲಿ ನಡೆದ ಚುನಾವಣಾ ರ್ಯಾಲಿಗಳಲ್ಲಿ ಈ ಕುರಿತು ಪ್ರಸ್ತಾಪಿಸಿ ಭಾಷಣ ಮಾಡಿದ್ದಾರೆ.