ಶ್ರೀನಗರ: ಜಮ್ಮು ಕಾಶ್ಮೀರದ ಸ್ಥಿತಿ ಸುಧಾರಿಸುತ್ತಿದ್ದು, ಸೋಮವಾರದಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಜಮ್ಮು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಪೋಸ್ಟ್ ಪೇಯ್ಡ್ ಫೋನ್‍ಗಳು ಸೋಮವಾರ ಮಧ್ಯಾಹ್ನ 12ರಿಂದ ಜಮ್ಮು ಕಾಶ್ಮೀರದ ಉಳಿದ ಭಾಗಗಳಲ್ಲಿ ಕಾರ್ಯನಿರ್ವಹಿಸಲಿವೆ. ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಜಮ್ಮು ಕಾಶ್ಮೀರದ ಉಳಿದ ಪ್ರದೇಶಗಳಲ್ಲಿ ಮೊಬೈಲ್ ಫೊನ್ ಸೇವೆಗಳನ್ನು ಪುನಃ ಸ್ಥಾಪಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
Advertisement
Postpaid mobile services to be restored in Kashmir Valley from Monday
Read @ANI Story | https://t.co/0xQ7Z0wJ2m pic.twitter.com/zZYSdiJQtK
— ANI Digital (@ani_digital) October 12, 2019
Advertisement
ಎಲ್ಲ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳು ಪುನಃ ಸ್ಥಾಪನೆಯಾಗುತ್ತವೆ. ಅಕ್ಟೋಬರ್ 14ರ ಮಧ್ಯಾಹ್ನ 12ರಿಂದ ಕಾರ್ಯನಿರ್ವಹಿಸುತ್ತವೆ. ಇದು ಕಾಶ್ಮೀರ ಪ್ರಾಂತ್ಯದ ಎಲ್ಲ 10 ಜಿಲ್ಲೆಗಳನ್ನು ಒಳಗೊಳ್ಳಲಿದೆ ಎಂದು ಜಮ್ಮು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ತಿಳಿಸಿದರು.
Advertisement
ಆಗಸ್ಟ್ 5ರಂದು ಕೇಂದ್ರ ಸರ್ಕಾರ 370ನೇ ವಿಧಿ ರದ್ದುಪಡಿಸಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದಾಗ ನಿರ್ಬಂಧ ವಿಧಿಸಲಾಗಿತ್ತು. ವರದಿಗಳ ಪ್ರಕಾರ ರಾಜ್ಯದಲ್ಲಿ 40ಲಕ್ಷಕ್ಕೂ ಹೆಚ್ಚು ಮೊಬೈಲ್ ಗ್ರಾಹಕರಿದ್ದಾರೆ. ಇದರಲ್ಲಿ 26 ಲಕ್ಷ ಪ್ರೀಪೇಯ್ಡ್ ಮೊಬೈಲ್ ಚಂದಾದಾರರಿದ್ದಾರೆ. ಇವರು ಮೊಬೈಲ್ ಬಳಸಲು ಸೋಮವಾರ ಸರ್ಕಾರ ಆದೇಶ ಹೊರಡಿಸುವ ವರೆಗೆ ಕಾಯಬೇಕಾಗುತ್ತದೆ ಎಂದರು
Advertisement
ಮೊಬೈಲ್ ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ದೇಶದಲ್ಲಿ ದುಷ್ಕೃತ್ಯ ನಡೆಸಲು ಭಯೋತ್ಪಾದಕರು ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ ಎಂದು ಈ ಹಿಂದೆ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದರು.
ಮೊಬೈಲ್ ಹಾಗೂ ದೂರವಾಣಿ ಸೌಲಭ್ಯ ಕಡಿತದಿಂದಾಗಿ ಜಮ್ಮು ಕಾಶ್ಮೀರದ ಜನತೆಗೆ ಸಾಕಷ್ಟು ತೊಂದರೆಯಾಗಿದೆ. ಜನರು ಇನ್ನೂ 10 ದಿನಗಳವರೆಗೆ ಕಾಯಬೇಕು. ನಮಗೆ ಪ್ರತಿಯೊಬ್ಬರ ಜೀವವು ಮುಖ್ಯ. ದಯವಿಟ್ಟು ಈ ನಿರ್ಬಂಧಗಳ ಹಿಂದಿನ ಕಾರಣಗಳನ್ನು ಅರ್ಥ ಮಾಡಿಕೊಳ್ಳಬೇಕು. ಫೋನ್ ಮತ್ತು ಇಂಟರ್ನೆಟ್‍ನ್ನು ಯಾರು ಬಳಸುತ್ತಾರೆ? ಇದರಿಂದ ನಮಗೆ ಹೆಚ್ಚು ಉಪಯೋಗವಿಲ್ಲ. ಆದರೆ ಇದನ್ನು ಭಯೋತ್ಪಾದಕರು ಮತ್ತು ಪಾಕಿಸ್ತಾನಿಗಳು ಹೆಚ್ಚು ಬಳಸಿಕೊಳ್ಳುತ್ತಾರೆ, ಇದರಿಂದ ದುರುಪಯೋಗವಾಗುತ್ತಿದೆ ಎಂದು ರಾಜ್ಯಪಾಲರು ಮನವಿ ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದರು.